ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ (ಯುಪಿಎಸ್‌ಸಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಹುಬ್ಬಳ್ಳಿಯ ವಿಜೇತಾ ಹೊಸಮನಿ 100ನೇ ರ‍್ಯಾಂಕ್ ಪಡೆದಿದ್ದಾರೆ. ಇಲ್ಲಿನ ಸಿಲ್ವರ್ ಟೌನ್ನ ನಿವಾಸಿಯಾಗಿರುವ ಇವರು ಯಾವುದೇ ಕೋಚಿಂಗ್ ಪಡೆಯದೆ ಮನೆಯಲ್ಲಿಯೇ ಓದಿ 4ನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದಾರೆ. ವಿಜೇತಾ ಗುಜರಾತ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಧಾರವಾಡ ಸೌಭಾಗ್ಯ ಬೀಳಗಿಮಠ 101ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ದಾವಣಗೆರೆ ಮೂಲದರಾದ ಸೌಭಾಗ್ಯ ಬೀಳಗಿಮಠ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಬಿ.ಎಸ್‌ಸಿ (ಕೃಷಿ) ಎರಡನೇ ವರ್ಷದಲ್ಲಿದ್ದಾಗಲೇ ಯುಪಿಎಸ್ಸಿಗೆ ಸಿದ್ಧತೆ ನಡೆಸುತ್ತಿದ್ದ ಸೌಭಾಗ್ಯ ಅವರಿಗೆ, ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ಮಾರ್ಗದರ್ಶನ ನೀಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಧಾರವಾಡ ನಾರಾಯಣಪೂರದ ಡಾ.ಅಶ್ವಿನಿ ಮನೆಯಲ್ಲೇ ಮನೆಯಲ್ಲೇ ಉಳಿದುಕೊಂಡು ತಯಾರಿ ನಡೆಸಿದ್ದರು. ಸೌಭಾಗ್ಯ 2015ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಎದುರಿಸಿ ವಿಫಲರಾಗಿದ್ದರು.
ಇದನ್ನೂ ಓದಿ: ಕೋಚಿಂಗ್ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ UPSC ಪರೀಕ್ಷೆ ಪಾಸ್; ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ್‍ಯಾಂಕ್ - Krupa Jain