ETV Bharat / state

ವಿಜಯಪುರ: ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು - Two Boys Drowned - TWO BOYS DROWNED

ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಸಿಂದಗಿಯಲ್ಲಿ ನಡೆದಿದೆ.

two-boys-drowned-in-a-well-in-vijayapura
ವಿಜಯಪುರ: ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
author img

By ETV Bharat Karnataka Team

Published : Apr 30, 2024, 10:39 PM IST

ವಿಜಯಪುರ: ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮೃತ ಬಾಲಕರನ್ನು ಸೋಮಶೇಖರ್ ಆಲಮೇಲ್(16) ಹಾಗೂ ಮಲಿಕ್ ನದಾಫ್(16) ಎಂದು ಗುರುತಿಸಲಾಗಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈಜು ಬಾರದಿದ್ದರೂ ಬಾಲಕರು ಬಾವಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೇಕೆದಾಟು ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿ ಬಳಗದ ಐವರು ನೀರು ಪಾಲಾಗಿರುವ ಘಟನೆ ಕನಕಪುರ ಬಳಿಯ ಮೇಕೆದಾಟು ಸಂಗಮದಲ್ಲಿ ಸೋಮವಾರ ನಡೆದಿತ್ತು. ವಿದ್ಯಾರ್ಥಿಯೊಬ್ಬ ಈಜಲು ನದಿಗೆ ಇಳಿದಿದ್ದಾನೆ. ಈ ವೇಳೆ ಆತ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ಸಹಪಾಠಿಗಳು ರಕ್ಷಣೆಗೆ ತೆರಳಿದ್ದಾಗ ಒಬ್ಬರ ಹಿಂದೆ ಒಬ್ಬರು ನೀರಿಗೆ ಇಳಿದು ಪ್ರಾಣ ಕಳೆದುಕೊಂಡಿದ್ದರು. ಮೃತರನ್ನು ವರ್ಷ (20), ಕೆಎಲ್ಇ ಕಾಲೇಜು ರಾಜಾಜಿನಗರ 2ನೇ ಹಂತ, ಅಭಿಷೇಕ್ (20) ಬಿಹಾರ ಮೂಲದವರಾಗಿದ್ದು ಮಲ್ಲೇಶ್ವರ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, ಹರ್ಪಿತ ಎನ್.ಎಲ್ (20) ಎಂಜಿನಿಯರಿಂಗ್ 2ನೇ ವರ್ಷ ಚಿಕ್ಕಬಾಣಾವರ ಆರ್.ಆರ್ ಕಾಲೇಜು (ಮಂಡ್ಯ ಮೂಲ), ತೇಜಸ್ (21) ಬಿಸಿಎ 2ನೇ ವರ್ಷ ವಿಜಯನಗರ ಸರ್ಕಾರಿ ಕಾಲೇಜ್​ (ಚಿತ್ರದುರ್ಗ ಮೂಲ), ನೇಹಾ (19) ಕೆಮಿಸ್ಟ್ರಿ ಕೆಎಲ್ಇ ಕಾಲೇಜು ಆರ್.ಆರ್ ನಗರ (ಚಿತ್ರದುರ್ಗ ಮೂಲ) ಎಂದು ಗುರುತಿಸಲಾಗಿತ್ತು.

ಇದನ್ನೂ ಓದಿ: ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕ, ರಕ್ಷಣೆಗೆ ಹೋದ ವೃದ್ಧ; ಇಬ್ಬರೂ ನೀರುಪಾಲು - A BOY AND AN OLD MAN DROWN

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.