ರಾಯಚೂರು: ಬಿಸಿಲಿನಿಂದ ಕಾದು ಕೆಂಡವಾಗಿದ್ದ ರಾಯಚೂರು ಜಿಲ್ಲೆಯ ವಿವಿದೆಢೆ ಭಾನುವಾರ ಮಧ್ಯ ರಾತ್ರಿಯಿಂದ ಗಾಳಿ, ಗುಡುಗಿನೊಂದಿಗೆ ವರುಣ ಆರ್ಭಟಿಸಿದ್ದಾನೆ.
ನಗರದಲ್ಲಿಯೂ ಸಹ ಅತಿಯಾದ ಮಳೆ ಸುರಿದ್ದು, ಜನಜೀವನ ಅಸ್ತವ್ಯಸ್ತಗೊಂಡು, ರಸ್ತೆ ಮೇಲೆ ಚರಂಡಿ ನೀರು ತುಂಬಿ ಹರಿಯುತ್ತಿವೆ. ಗಾಳಿ ಹಾಗೂ ಗುಡುಗು ಸಮೇತವಾಗಿ ಮಳೆ ಸುರಿದ ಪರಿಣಾಮ ನಗರದ ಹಲವೆಡೆ ವಿದ್ಯುತ್ವ್ಯತ್ಯಗೊಂಡಿದ್ದು, ಜನರು ರಾತ್ರಿ ಇಡಿ ಕತ್ತಲಲ್ಲಿ ಕಳೆಯುವಂತಾಗಿದೆ.
ಕಳೆದ ಎರಡ್ಮೂರು ತಿಂಗಳಿನಿಂದ ವಿಪರೀತವಾದ ಬಿಸಿಲಿನ ಝಳದಿಂದ ಜನರು ತತ್ತರಿಸಿ, ಬಿಸಿ ಗಾಳಿಗೆ ಬಳಲಿ ಬೆಂಡಾಗಿದ್ದರು. ಇದೀಗ ನಿನ್ನೆ ರಾತ್ರಿಯಿಂದ ಬೆಳಿಗ್ಗೆವರೆಗೆ ಸುರಿದ ಮಳೆಯಿಂದ ತಂಪಿನ ವಾತಾವರಣ ನಿರ್ಮಾಣವಾಗಿದೆ.
ಒಂದೆಡೆ ಮಳೆಯಿಂದ ಜಿಲ್ಲೆ ಕೂಲ್ ಕೂಲ್ ಆಗಿದ್ದರೆ, ಮತ್ತೊಂದೆಡೆ ಭಾರೀ ಮಳೆಯಿಂದಾಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ(ಎಪಿಎಂಸಿ) ಮಳೆಯ ನೀರು ನುಗ್ಗಿದೆ. ರೈತ ಫಸಲು ನೀರು ಪಾಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ ರೈತರು ಬೆಳೆದ ಭತ್ತವನ್ನು ಮಾರಾಟಕ್ಕಾಗಿ ತಂದು ಹಾಕಿದ್ದರು. ಆದರೆ ಪ್ರಾಂಗಣದಲ್ಲಿ ಇರುವಟಿನ್‌ಶೆಡ್ ಸೋರುವಿಕೆ ಹಾಗೂ ಆವರಣದಲ್ಲಿನ ಚರಂಡಿಯ ನೀರು ತುಂಬಿ ರೈತರು ಹಾಕಿದ ಭತ್ತದ ಮೇಲೆ ಹರಿದಿವೆ.
ಕಷ್ಟಪಟ್ಟು ಬರದ ನಡುವೆ ಭತ್ತ ಬೆಳೆದು ಇದೀಗ ಮಳೆಯ ನೀರಿಗೆ ಬೆಳೆ ನೆಂದಿರುವುದು ರೈತರು ಕಂಗಲಾಗುವಂತೆ ಮಾಡಿದೆ. ಆಕ್ರೋಶಗೊಂಡಿರುವ ರೈತರು ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಎಪಿಎಂಸಿ ಅಧಿಕಾರಿಗಳು ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.3
ಇದನ್ನೂ ಓದಿ: ಗುಡುಗು ಸಹಿತ ಭಾರೀ ಮಳೆ: ಬೆಂಗಳೂರಿಗೆ ಬರುತ್ತಿದ್ದ 8 ವಿಮಾನಗಳು ಚೆನ್ನೈಗೆ ಡೈವರ್ಟ್ - Bengaluru Rain