ETV Bharat / state

ಓಮನ್‌ ದೇಶದಲ್ಲಿ‌ ಅಗ್ನಿ ಅವಘಡ: ಗೋಕಾಕ್​ನ ಮೂವರು, ರಾಯಚೂರಿನ ಓರ್ವ ಸಜೀವ ದಹನ - Four burnt alive in Oman

author img

By ETV Bharat Karnataka Team

Published : Aug 30, 2024, 7:45 PM IST

ತೈಲ ಸಾಗಣೆಯ ಟ್ಯಾಂಕರ್​ ಸ್ಫೋಟಗೊಂಡ ಪರಿಣಾಮ ಕಾರಿನ ಮೇಲೆಯೂ ತೈಲ ಚೆಲ್ಲಿ ಬೆಂಕಿ ಹೊತ್ತಿಕೊಂಡ ಕಾರಣ, ಕಾರಿನಲ್ಲಿದ್ದ ಕರ್ನಾಟಕ ಮೂಲದ ನಾಲ್ವರು ಸಜೀವ ದಹನವಾಗಿರುವ ಘಟನೆ ಓಮನ್​ ದೇಶದಲ್ಲಿ ನಡೆದಿದೆ.

The deceased
ಮೃತರು (ETV Bharat)

ಬೆಳಗಾವಿ: ಓಮನ್‌ ದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೋಕಾಕ್​ ಮೂಲದ‌ ಮೂವರು ಹಾಗೂ ರಾಯಚೂರು ಮೂಲದ ಒಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕ್​ನ​ ವಿಜಯಾ ಮಾಯಪ್ಪ ತಹಶೀಲ್ದಾರ (58), ಪುತ್ರ ಪವನ್‌ ಕುಮಾರ್ (33), ಪುತ್ರಿ ಪೂಜಾ (30) ಮತ್ತು ಅಳಿಯ ರಾಯಚೂರಿನ ದೇವದುರ್ಗದ ಆದಿಶೇಷ ಬಸವರಾಜ (36) ಮೃತ ದುರ್ದೈವಿಗಳು. ಮೃತ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ.

ಆದಿಶೇಷ ಅವರು ಓಮನ್‌ ದೇಶದ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿದ್ದು, ಕೆಲ ವರ್ಷಗಳಿಂದ ದಂಪತಿ ಅಲ್ಲಿಯೇ ವಾಸವಾಗಿದ್ದಾರೆ. ಕಳೆದ ಶುಕ್ರವಾರ ಅಷ್ಟೇ ವಿಜಯಾ ಹಾಗೂ ಅವರ ಪುತ್ರ ಓಮನ್‌ಗೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ ಎಂದು ಮೃತ ವಿಜಯಾ ಅವರ ಪತಿ ಗೋಕಾಕ್​ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರೂ ಆಗಿರುವ ಮಾಯಪ್ಪ ತಹಶೀಲ್ದಾರ ಮಾಹಿತಿ ನೀಡಿದ್ದಾರೆ.

ನಾಲ್ವರು ಕಾರಿನಲ್ಲಿ ಸಲಾಲಾ ನಗರದಿಂದ ಮಸ್ಕತ್‌ಗೆ ತೆರಳುತ್ತಿದ್ದರು. ಮಧ್ಯದಲ್ಲಿ ಪೆಟ್ರೋಲ್‌ ಖಾಲಿಯಾಗಿದ್ದರಿಂದ ರಸ್ತೆ ಬದಿ ಕಾರ್‌ ನಿಲ್ಲಿಸಿದ್ದರು. ಆಗ ಸ್ಥಳಕ್ಕೆ ಬಂದ ಪೊಲೀಸರು ಇವರ ಸಂಪೂರ್ಣ ಮಾಹಿತಿ ಕಲೆಹಾಕಿದರು. ಪೊಲೀಸರು ಪೆಟ್ರೋಲ್‌ ತರಿಸಿಕೊಟ್ಟ ಬಳಿಕ ಮತ್ತೆ ಕಾರು ಹತ್ತಿಕೊಂಡು ನಾಲ್ವರೂ ಹೊರಟಿದ್ದರು. ಈ ವೇಳೆ 15 ಕಿ.ಮೀ ಮುಂದೆ ಹೋಗುತ್ತಿದ್ದಂತೆ ಕಾರಿನ ಮುಂದೆ ಹೋಗುತ್ತಿದ್ದ ತೈಲ ಸಾಗಣೆಯ ಟ್ಯಾಂಕರ್​ಗೆ ಬೆಂಕಿ ತಾಗಿ ಅದು ಸ್ಫೋಟಗೊಂಡಿದೆ. ಬಳಿಕ ಇವರ ಕಾರಿನ ಮೇಲೆಯೂ ತೈಲ ಚೆಲ್ಲಿದ್ದರಿಂದ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾಯಿತು. ಮೃತರ ವಿವರವನ್ನು ಸ್ಥಳೀಯ ಪೊಲೀಸರು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹೊತ್ತಿ ಉರಿದ ಆಯನೂರಿನ ಬೇಕರಿ - Fire In Bakery

ETV Bharat Logo

Copyright © 2024 Ushodaya Enterprises Pvt. Ltd., All Rights Reserved.