ಮಂಗಳೂರು: ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಗೆ ಎರಡನೇ ಹಂತದ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಏ.26 ರಂದು ನಡೆಯಲಿದೆ. ಈ ಚುನಾವಣೆಗೆಮ ಮತ ಚಲಾಯಿಸಲು ಹೋಗುವವರು ತಾವು ತೆಗೆದುಕೊಂಡು ಹೋಗಬೇಕಾದ ದಾಖಲೆ ಬಗ್ಗೆ ಗೊಂದಲಕ್ಕೀಡಾಗಬಾರದು.
ಮತದಾನ ಮಾಡಲು ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿ ಕೊಂಡೊಯ್ಯಬೇಕೆಂಬುದು ಎಲ್ಲರೂ ತಿಳಿದುಕೊಂಡಿದ್ದಾರೆ. ಗುರುತಿನ ಚೀಟಿ ಇಲ್ಲದಿದ್ದರೆ, ಬೇರೆ ದಾಖಲೆಗಳನ್ನು ತೋರಿಸಿ ಮತದಾನ ಮಾಡಲು ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಗುರುತಿನ ಚೀಟಿ ಹೊರತುಪಡಿಸಿ ಯಾವೆಲ್ಲಾ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
- Aadhar Card (ಆಧಾರ್ ಕಾರ್ಡ್)
- MNREGA Job Card (ಎಂಜಿ ನರೇಗಾ ಜಾಬ್ ಕಾರ್ಡ್)
- Passbooks with photograph issued by Bank/Post Officer (ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್)
- Health Insurance Smart Card issued under the scheme of Ministry of Labour (ಅಂಚೆ ವಿಮೆ)
- Driving License ( ಚಾಲನ ಪರವಾನಿಗೆ)
- PAN Card (ಪಾನ್ ಕಾರ್ಡ್)
- Smart Card issued by RGI under NPR.(ಆರ್ ಜಿ ಐ ನೀಡಿರುವ ಸ್ಮಾರ್ಟ್ ಕಾರ್ಡ್)
- Indian Passport (ಪಾಸ್ಪೋರ್ಟ್)
- Pension document with photograph (ಪಿಂಚಣಿ ದಾಖಲಾತಿ)
- service Identity Cards with photograph issuedto employees by Central/State) Govt./PSUs/Public Limited Companies (ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವಾ ಗುರುತಿನ ಚೀಟಿ).
- Official identity cards issued to MPs/MLAs/MLCs, and (ಎಂಪಿ, ಎಂ ಎಲ್ ಎ, ಎಂಎಲ್ಸಿ ಅವರಿಗೆ ವಿತರಿಸಲಾಗಿರುವ ಅಧಿಕೃತ ಗುರುತಿನ ಚೀಟಿಗಳು)
- Unique Disability ID (UDID) Card, M/o Social Justice & Empowerment, Government ofIndia (ಯುನಿಕ್ ಡಿಸಬೆಲಿಟಿ ಐಡಿ ಕಾರ್ಡ್)
ಏಪ್ರಿಲ್ 26ರ ಬೆಳಗ್ಗೆ 7 ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಈಗಾಗಲೇ ಮನೆ ಮನೆಗೆ ವೋಟರ್ ಸ್ಲಿಪ್ ಅನ್ನು ವಿತರಿಸಲಾಗಿದೆ. ಅದರೊಂದಿಗೆ ಮತದಾರರು ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ, ಆ ಮತದಾರರು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು ಹಾಗೂ ಎಪಿಕ್ ಕಾರ್ಡ್ ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ದಾಖಲೆ ತೋರಿಸಿ ಮತ ಚಲಾಯಿಸಬಹುದಾಗಿದೆ.
ಮತದಾನದ ದಿನದಂದು ಏ.26 ರಂದು ವೇತನ ಸಹಿತ ರಜೆಯನ್ನು ಸರ್ಕಾರ ಘೋಷಿಸಿದ್ದು, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ನೌಕರರು ಮತದಾನ ಮಾಡಬಹುದಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರು ಈ ಬಗ್ಗೆ ಮಾತನಾಡಿ, "12 ದಾಖಲೆಗಳಲ್ಲಿ ಯಾವುದೇ ದಾಖಲೆಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ. ಈ ಬಾರಿಯ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಎಪಿಕ್ ನಂಬರ್ ಗೊತ್ತಿಲ್ಲದಿದ್ದರೆ, ಹೆಸರು, ವಯಸ್ಸು, ಸಂಬಂಧಿಕರ ಹೆಸರು ಬರೆದು ತಿಳಿದುಕೊಳ್ಳಬಹುದು'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಗಳೂರು: ಮತ ಚಲಾಯಿಸಲು ಬರುವವರು ಮೊಬೈಲ್ ತರುವಂತಿಲ್ಲ; ಚುನಾವಣಾಧಿಕಾರಿ - Mullai Mugilan
ಮತದಾನದ ಸಮಯದಲ್ಲಿ ಮತದಾನ ಮಾಡಲು ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಹಾಗೂ ವೋಟರ್ ಸ್ಲಿಪ್ ತೋರಿಸಿ ಮತ ಚಲಾಯಿಸಬಹುದು. ಒಂದು ವೇಳೆ ಮತದಾರ ಗುರುತಿನ ಚೀಟಿ ಇಲ್ಲದಿದ್ದರೆ, ಪರ್ಯಾಯವಾಗಿ ಭಾವಚಿತ್ರವುಳ್ಳ ಇತರೆ ಅಧಿಕೃತ ಗುರುತಿನ ಚೀಟಿಗಳನ್ನು ತೋರಿಸಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕ್ಯೂಆರ್ ಕೋಡ್: ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ.
ಮತದಾನಕ್ಕೆ ರಜೆ : ನಾಳೆ ಮತದಾನ ದಿನದಂದು ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿ ಎಲ್ಲ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.