ETV Bharat / state

72 ಲಕ್ಷ ಹಣ ದುರ್ಬಳಕೆ: ಇನ್ಸ್​ಪೆಕ್ಟರ್​ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ - High Court - HIGH COURT

72 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸ್​ ಇನ್ಸ್​ಪೆಕ್ಟರ್​ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Aug 14, 2024, 8:20 PM IST

ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತದ್ದ ವೇಳೆ ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ್ದ 72 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣ ಸಂಬಂಧ ಸದ್ಯ ಬಿಡದಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿರುವ ಜಿ.ಕೆ. ಶಂಕರ್ ನಾಯ್ಕ್ ವಿರುದ್ಧ ಫೋರ್ಜರಿ, ನಂಬಿಕೆ ದ್ರೋಹ ಮತ್ತು ಭಷ್ಟಾಚಾರ ನಿಯಂತ್ರಣ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ಶಂಕರ್​ ನಾಯಕ್​ ಸಲ್ಲಿಸಿದ್ದ ಕ್ರಿಮಿನಲ್​ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಲ್ಲಿ ವಶಪಡಿಸಿಕೊಂಡಿದ್ದ 72 ಲಕ್ಷ ರೂ.ಗಳ ಮೊತ್ತವನ್ನು ಸರ್ಕಾರದ ಖಜಾನೆಗೆ ಪಾವತಿಸಿಲ್ಲ. 2022ರ ಫೆಬ್ರವರಿ 26ರಿಂದ ಸುಮಾರು ನಾಲ್ಕು ತಿಂಗಳುಗಳ ಕಾಲ ಸಂಪೂರ್ಣ ಮೊತ್ತ ಅರ್ಜಿದಾರರು ತಮ್ಮ ವಶದಲ್ಲಿಟ್ಟುಕೊಂಡಿದ್ದರು.

ಅಲ್ಲದೆ, ನಗದು ವಶಪಡಿಸಿಕೊಂಡಿರುವುದು ಮತ್ತು ಅದನ್ನು ಹಿಂದಿರುಗಿಸುವ ಸಂದರ್ಭದಲ್ಲಿ ನೋಟುಗಳ ಮುಖಬೆಲೆ ಸಂಪೂರ್ಣ ಬದಲಾವಣೆಯಾಗಿದೆ. ಘಟನೆ ಸಂಬಂಧ ಪೊಲೀಸರು ಮೂರುದಿನಗಳ ಕಾಲ ನಡೆಸಿದ ಪಂಚನಾಮೆಯಲ್ಲಿ ಆಕ್ಸಿಸ್​ ಬ್ಯಾಂಕ್​ನಿಂದ ಪಡೆದಿದ್ದ 500 ಮುಖ ಬೆಲೆಯ ನೋಟುಗಳಾಗಿದ್ದವು. ಆದರೆ, ನಾಲ್ಕು ತಿಂಗಳ ಬಳಿಕ ವಿವಿಧ ಬ್ಯಾಂಕ್​ಗಳಿಂದ ಪಡೆದುಕೊಂಡಿದ್ದ ನೋಟುಗಳಿದ್ದು, ಸಂಪೂರ್ಣ ಮುಖಬೆಲೆಯಲ್ಲಿ ಬದಲಾವಣೆಯಾಗಿತ್ತು. ಈ ಪ್ರಕ್ರಿಯೆಯನ್ನು ಪರಿಶೀಲಿಸಿದಲ್ಲಿ ಖಜಾನೆಗೆ ಜಮಾ ಮಾಡದೆ ತಮ್ಮ ಬಳಿ ಇಟ್ಟುಕೊಳ್ಳುವುದು ಮತ್ತು ನೋಟುಗಳ ಮುಖಬೆಲೆ ಬದಲಾವಣೆ ಮಾಡಿರುವುದು ಗೊತ್ತಾಗುತ್ತಿದೆ. ಈ ಅಂಶ ಅರ್ಜಿದಾರರ ವಿರುದ್ಧದ ಆರೋಪವನ್ನು ಮತ್ತಷ್ಟು ಪುಷ್ಠೀಕರಿಸುತ್ತದೆ. ಆದ್ದರಿಂದ ಪ್ರಕರಣ ಸಂಬಂಧ ಕನಿಷ್ಠ ತನಿಖೆ ಅಗತ್ಯವಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಶಂಕರ್​ ನಾಯಕ್​ ಅವರು ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. 2021ರ ಅಕ್ಟೋಬರ್​ 11ರಂದು ದಾಖಲಾಗಿದ್ದ ಪ್ರಕರಣವೊಂದರಲ್ಲಿ ವಂಚನೆ ಮತ್ತು ಕಚೇರಿಯಲ್ಲಿ ಕಳವು ಆರೋಪದಲ್ಲಿ ಸಂತೋಷ್​ ಕುಮಾರ್ ಎಂಬುವರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಿಂದ 72 ಲಕ್ಷ ರೂ.ಗಳ ಪಿಎಫ್​ ಮೊತ್ತವನ್ನು ವಶಪಡಿಸಿಕೊಂಡಿದ್ದರು. ಈ ನಡುವೆ ಪ್ರಕರಣವನ್ನು ಕೆಂಗೇರಿ ಗೇಟ್​ ಉಪ ವಿಭಾಗದ ಪೊಲೀಸ್​ ಸಹಾಯಕ ಆಯುಕ್ತರಿಗೆ ವರ್ಗಾವಣೆ ಮಾಡಲಾಗಿತ್ತು. ಈ ನಡುವೆ ಅರ್ಜಿದಾರರನ್ನು ಆನೇಕಲ್​ ಪೊಲೀಸ್​ ಠಾಣೆಗೆ ವರ್ಗಾವಣೆಗೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್​ ನ್ಯಾಯಾಧೀಶರು 2023ರ ಫೆಬ್ರವರಿ 27ರಂದು(ನಾಲ್ಕು ತಿಂಗಳ ಬಳಿಕ) ಸಂಪೂರ್ಣ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡುವಂತೆ ಆದೇಶಿಸಿದ್ದರು. ಈ ಆದೇಶದ ಒಂದು ದಿನ ಅರ್ಜಿದಾರರು ಬ್ಯಾಟರಾಯನಪುರ ಪೊಲೀಸ್​ಠಾಣೆಗೆ ಒಂದು ಚೀಲದಲ್ಲಿ 100 , 200 ಮತ್ತು 2000 ರೂ. ಮುಖಬೆಲೆಯ 72 ಲಕ್ಷ ರೂ.ಗಳನ್ನು ಇಟ್ಟು ಬಂದಿದ್ದರು. ಈ ನೋಟುಗಳಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಶಾಖೆಯ ಮುದ್ರೆ ಮತ್ತು ಹೊದಿಕೆಯುಳ್ಳ ಎರಡು ಬಂಡಲ್​ಗಳಿದ್ದವು. ಈ ಆರೋಪದಲ್ಲಿ ಪೊಲೀಸರು ನಡೆಸಿದ ಆಂತರಿಕ ತನಿಖೆಗೆಯಲ್ಲಿ ಅರ್ಜಿದಾರರ ಪರವಿತ್ತು.

ಆದರೆ, ಇದಾದ ಬಳಿಕ ಅರ್ಜಿದಾರರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಪಿಎಫ್ ಮೊತ್ತವನ್ನು ಖಜಾನೆಗೆ ಪಾವತಿ ಮಾಡಿರಲಿಲ್ಲ ಎಂಬ ಆರೋಪ ಎದುರಾಗಿತ್ತು. ಈ ಸಂಬಂಧ ತನಿಖೆ ಮುಂದುವರೆದಿತ್ತು. ಇದನ್ನು ಪ್ರಶ್ನಿಸಿ ಶಂಕರ್​ ನಾಯಕ್​ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಓಲಾ, ಉಬರ್ ಆಟೋ ಸೇವಾ ಶುಲ್ಕ: ಏಕಸದಸ್ಯ ಪೀಠದ ಆದೇಶಕ್ಕೆ ತಡೆಗೆ ದ್ವಿಸದಸ್ಯ ಪೀಠ ನಕಾರ - Ola Uber Auto Service Charge

ETV Bharat Logo

Copyright © 2025 Ushodaya Enterprises Pvt. Ltd., All Rights Reserved.