ETV Bharat / state

ಆರೋಗ್ಯ ನೆರವು : ಗಡಿಜಿಲ್ಲೆ ವೈದ್ಯರಿಂದ ವಯನಾಡಿನಲ್ಲಿ ತುರ್ತು ಸೇವೆ - medical services in wayanad

author img

By ETV Bharat Karnataka Team

Published : Aug 1, 2024, 6:59 PM IST

ಕೇರಳದ ವಯನಾಡು ಭೂ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯದಿಂದ 13 ಮಂದಿ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಅವರು ನಿನ್ನೆಯಿಂದಲೇ ವೈದ್ಯಕೀಯ ಸೇವೆ ಪ್ರಾರಂಭಿಸಿದ್ದಾರೆ.

DOCTERS
ವೈದ್ಯಕೀಯ ಸೇವೆಗಾಗಿ ವಯನಾಡಿಗೆ ತಲುಪಿದ ವೈದ್ಯರು (ETV Bharat)

ಚಾಮರಾಜನಗರ/ವಯನಾಡು: ಕೇರಳದ ವಯನಾಡು ಭೂ ಕುಸಿತ ದುರಂತದಲ್ಲಿ ರಾಜ್ಯದಿಂದ ಆರೋಗ್ಯ ನೆರವು ಸಿಕ್ಕಿದ್ದು, ಚಾಮರಾಜನಗರ ಮತ್ತು ಮೈಸೂರು ವೈದ್ಯರು ಕೇರಳದಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದಿಂದ 13 ಮಂದಿ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಬುಧವಾರದಿಂದಲೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ‌.

docters
ವೈದ್ಯರು (ETV Bharat)

ಗುಂಡ್ಲುಪೇಟೆ ಟಿಹೆಚ್‍ಒ ಡಾ. ಅಲೀಂ ಪಾಷಾ ನೇತೃತ್ವದಲ್ಲಿ ಚಾಮರಾಜನಗರದಿಂದ ಡಾ. ಮಹೇಶ್, ಡಾ. ತ್ರಿವೇಣಿ, ಡಾ. ಶ್ರೀಧರ್, ಡಾ. ಟೀನಾ, ಡಾ. ರಾಜು, ಡಾ. ಸಂದೀಪ್, ಮಹದೇವಸ್ವಾಮಿ, ಬಸವೇಗೌಡ ಹಾಗೂ ಮೈಸೂರು ಜಿಲ್ಲೆಯಿಂದ ಡಾ. ನಾಗೇಶ್ವರರಾವ್, ಡಾ. ಶ್ರೀನಿವಾಸ್, ಡಾ. ಶೇಷಾದ್ರಿ, ಉಮೇಶ್ ಬಾಬು ಸೇರಿದಂತೆ ಒಟ್ಟು 13 ಮಂದಿಯನ್ನು ಮೈಸೂರು ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ನಿರ್ದೇಶಕರು ತುರ್ತು ಸೇವೆಗೆ ನಿಯೋಜಿಸಿದ್ದಾರೆ.

Gundlupet THO Dr Aleem Pasha
ಗುಂಡ್ಲುಪೇಟೆ ಟಿಹೆಚ್‍ಓ ಡಾ ಅಲೀಂ ಪಾಷಾ (ETV Bharat)

ಗುಂಡ್ಲುಪೇಟೆ ಟಿಹೆಚ್‍ಒ ಡಾ. ಅಲೀಂ ಪಾಷಾ ನೇತೃತ್ವದ ತಂಡ ಕಲ್ಪೆಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.

Medical service
ವೈದ್ಯಕೀಯ ಸೇವೆಗೆ ವಯನಾಡ್​ಗೆ ತೆರಳಿದ ವೈದ್ಯರು (ETV Bharat)

ವಯನಾಡಿನ ಮೆಪ್ಪಾಡಿಯ ಡಾ. ಮೂಪಾನ್ಸ್ ಮೆಡಿಕಲ್ ಕಾಲೇಜಿಗೆ ಇತರೆ ವೈದ್ಯರು ಗುರುವಾರ ಬೆಳಗ್ಗೆ ಭೇಟಿ ನೀಡಿ, ಅಲ್ಲಿಯ ವೈದ್ಯರ ತಂಡದ ಜೊತೆಗೆ ಸಮಾಲೋಚನೆ ನಡೆಸುವ ಜೊತೆಗೆ ಆಸ್ಪತ್ರೆಯ ವಿವಿಧ ವಾರ್ಡ್‍ಗಳಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದ್ದಾರೆ. ಜೊತೆಗೆ ಕಾಳಜಿ ಕೇಂದ್ರಗಳಿಗೂ ತೆರಳಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : ವಯನಾಡ್ ಭೂಕುಸಿತ; 22 ಮಕ್ಕಳು ಸೇರಿ 243 ಮಂದಿ ಸಾವು; ರಕ್ಷಣಾ ಕಾರ್ಯಕ್ಕೆ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಸೇನೆ - Wayanad landslides

ETV Bharat Logo

Copyright © 2024 Ushodaya Enterprises Pvt. Ltd., All Rights Reserved.