ETV Bharat / state

ಯಲಹಂಕ: SSLC ಪರೀಕ್ಷೆ ತಯಾರಿ ನಡುವೆ ಗೆಳೆಯರ ಭೇಟಿಗೆ ಬಂದ ವಿದ್ಯಾರ್ಥಿ ಅಪಘಾತದಲ್ಲಿ ಸಾವು - SSLC Student Dies - SSLC STUDENT DIES

ನಿಯಂತ್ರಣ ತಪ್ಪಿದ ಮರಕ್ಕೆ ಬೈಕ್ ಗುದ್ದಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

Etv Bharat
Etv Bharat
author img

By ETV Bharat Karnataka Team

Published : Mar 24, 2024, 9:41 AM IST

ಯಲಹಂಕ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಯಲಹಂಕ ತಾಲೂಕಿನ ಚಲ್ಲಹಳ್ಳಿಯ ಗುಟ್ಟೆ ವೇಣುಗೋಪಾಲಸ್ವಾಮಿ ಬೆಟ್ಟದ ಬಳಿ ಕಳೆದ ರಾತ್ರಿ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕು ಚಿಕ್ಕಮಧುರೆ ಗ್ರಾಮದ ಯೋಗೀಶ್ (16) ಮೃತ ವಿದ್ಯಾರ್ಥಿ. ಕಾಡನೂರು ಕ್ರಾಸ್​​ನ ಶ್ರೀರಾಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರದಿಂದ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಓದಿನ ನಡುವೆ ವಿರಾಮ ತೆಗೆದುಕೊಂಡು ಚಲ್ಲಹಳ್ಳಿಯ ಸ್ನೇಹಿತರನ್ನು ಭೇಟಿಯಾಗಲು ಬೈಕ್​ನಲ್ಲಿ ಹೋಗಿದ್ದಾನೆ. ಸ್ನೇಹಿತರನ್ನು ಭೇಟಿಯಾಗಿ ವಾಪಸ್ ಊರಿಗೆ ಬರುತ್ತಿದ್ದಾಗ ಮರಕ್ಕೆ ಬೈಕ್ ಗುದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೈಕ್ ಕ್ರೇಜ್‌ ಹೊಂದಿದ್ದ ಬಾಲಕನ ಕೈಗೆ ಕೀ ಸಿಗದಂತೆ ಪೋಷಕರು ಬಚ್ಚಿಟ್ಟಿದ್ದರು. ಆದರೆ, ಅವರು ತೋಟದ ಕೆಲಸಕ್ಕೆ ಹೋಗಿದ್ದಾಗ ಗೊತ್ತಾಗದಂತೆ ಸ್ನೇಹಿತರನ್ನು ಕಾಣಲು ಬೈಕ್​ನಲ್ಲಿ ವಿದ್ಯಾರ್ಥಿ ಬಂದಿದ್ದ ಎಂದು ತಿಳಿದುಬಂದಿದೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ವಾರಾಣಸಿಗೆ ಹೊರಟ ಕಾರು ತೆಲಂಗಾಣದಲ್ಲಿ ಅಪಘಾತ: ಮೈಸೂರು ಮೂಲದ ಇಬ್ಬರು ಸಾವು

ಕಾರು-ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ: ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.