ETV Bharat / state

12 ವರ್ಷದ ಬಳಿಕ ಬಣ್ಣ ಹಚ್ಚಿ ರಾಮಾಯಣ ಕಥಾ ಪ್ರಸಂಗ ಪ್ರದರ್ಶಿಸಲು ಮುಂದಾದ ಹಗಲು ವೇಷಗಾರರು

author img

By ETV Bharat Karnataka Team

Published : Jan 20, 2024, 8:55 PM IST

ಈ ಆಧುನಿಕ ಯುಗದಲ್ಲಿ ಹಗಲು ವೇಷಗಾರರ ಕಲೆ ಪ್ರೋತ್ಸಾಹಿಸುವವರು ಇಲ್ಲದಂತಾಗಿದೆ. ಹೀಗಾಗಿ ಹನ್ನೆರಡು ವರ್ಷದಿಂದ ಹಗಲುವೇಷ ಕಟ್ಟುವುದನ್ನು ನಿಲ್ಲಿಸಿದ್ದೆವು. ಈಗ ಅಯೋಧ್ಯೆಯಲ್ಲಿ ರಾಮನ ಮಂದಿರ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆ ರಾಮಾಯಣ ಕಥಾ ಪ್ರಸಂಗ ಜನರ ಮುಂದೆ ಪ್ರದರ್ಶಿಸುವ ನಿರ್ಧಾರವನ್ನು ತಳೆದಿದ್ದೇವೆ ಎಂದು ಹಗಲು ವೇಷಗಾರರ ತಂಡದ ಮುಖ್ಯಸ್ಥ ಕಲ್ಯಾಣಂ ನಾಗರಾಜು ತಿಳಿಸಿದ್ದಾರೆ.

Ramayana story episode performance ​
ಹಗಲು ವೇಷಗಾರರಿಂದ ರಾಮಾಯಣ ಕಥಾ ಪ್ರಸಂಗ ಪ್ರದರ್ಶನ

12 ವರ್ಷದ ಬಳಿಕ ಬಣ್ಣ ಹಚ್ಚಿ ರಾಮಾಯಣ ಕಥಾ ಪ್ರಸಂಗ ಪ್ರದರ್ಶಿಸಲು ಮುಂದಾದ ಹಗಲು ವೇಷಗಾರರು

ಗಂಗಾವತಿ(ಕೊಪ್ಪಳ): ರಾಮಾಯಣ ಮಹಾಕಾವ್ಯಕ್ಕೆ ದೃಶ್ಯರೂಪಕ ನೀಡಿ ಕಳೆದ ಹಲವು ದಶಕದಿಂದ ಕಥಾ ಪ್ರಸಂಗಗಳನ್ನು ಜನಮಾನಸದ ಸನಿಹಕ್ಕೆ ಕೊಂಡೊಯ್ದು ಮನರಂಜನೆ ನೀಡುತ್ತಿದ್ದ ಗಂಗಾವತಿ ವೇಷಗಾರರು, ಅದೆಕೋ ಕಳೆದ ಹನ್ನೆರಡು ವರ್ಷದಿಂದ ಮುಖಕ್ಕೆ ಬಣ್ಣ ಹಚ್ಚುವುದು ಬಿಟ್ಟು ಬಿಟ್ಟಿದ್ದರು.

ಆದರೆ, ಈಗ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮತ್ತೆ ರಾಘವ ವಿರಾಜಮಾನ ಆಗುತ್ತಿರುವ ಹಿನ್ನೆಲೆ ಮತ್ತೆ ಹಗಲುವೇಷಗಳನ್ನು ಕಟ್ಟಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿರುವ ಹಗಲು ವೇಷಗಾರರ ಮುಖದಲ್ಲಿ ರಾಮ ಸಂಭ್ರಮ ಉಕ್ಕಿಸಿದ್ದಾನೆ. ಹೀಗಾಗಿ ಹಗಲು ವೇಷಗಾರರು ಮತ್ತೆ ಈಗ ಬಣ್ಣ ಹಚ್ಚಿ ಕಥಾ ಪ್ರಸಂಗಗಳನ್ನು ಮುಂದುವರಿಸಿದ್ದಾರೆ.

ಇಡೀ ದೇಶ ರಾಮೋತ್ಸವದಲ್ಲಿ ತಲ್ಲೀನರಾಗಿರುವ ಹೊತ್ತಲ್ಲಿ ಮತ್ತೆ ಹಗಲು ವೇಷಗಾರರ ರಾಮಾಯಣ ಕಥಾ ಪ್ರಸಂಗಗಳು ಮುನ್ನೆಲೆಗೆ ಬಂದಿವೆ. ರಾಮ, ಲಕ್ಷ್ಮಣ, ಸೀತೆ, ಹನುಮಂತ, ಭೀಮ, ಸೂರ್ಪಣಕಿ, ರಾವಣ ಹೀಗೆ ರಾಮಾಯಣದ ಕಾಲಘಟ್ಟದ ಹತ್ತಾರು ಪಾತ್ರಗಳಿಗೆ ಈ ಹಗಲು ವೇಷಗಾರರು ಜೀವದ ಕಳೆ ತುಂಬುತ್ತಿದ್ದಾರೆ. ಗಂಗಾವತಿ ತಾಲೂಕಿನ ಹಗಲು ವೇಷಗಾರರು ತಮ್ಮ ಅಮೋಘ ಅಭಿನಯದಿಂದ ಜನಮಾನಸದಲ್ಲಿ ರಾಮಾಯಣ ಅಚ್ಚಳಿಯದೇ ಉಳಿಯುವಂತೆ ಮಾಡುವ ಯತ್ನ ನಡೆಸಿದ್ದಾರೆ. ಈ ಹಗಲು ವೇಷಗಾರರು ಮೂರು ತಲೆಮಾರಿನಿಂದ ರಾಮಾಯಣದ ಕಥಾ ಪ್ರಸಂಗಗಳನ್ನು ಜನರ ಬಳಿಗೆ ಒಯ್ದು ರಾಮಾಯಣದ ಕಥೆ ಮೌಲ್ಯಗಳನ್ನು ಬಿತ್ತರಿಸುತ್ತಿದ್ದರು.

ಹಗಲು ವೇಷಗಾರ ಕೊಡುಗೆ ಅಪಾರ: ರಾಮಾಯಣದ ಹಲವು ಪ್ರಸಂಗಗಳನ್ನು ಜನರ ಎದುರು ಕಣ್ಣಿಗೆ ಕಟ್ಟಿಕೊಡುವಂತೆ ಅಭಿನಯಿಸುವ ಮೂಲಕ ಗಂಗಾವತಿಯ ಹಗಲು ವೇಷಗಾರರು, ಕಳೆದ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ರಾಮಾಯಣವನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಭೀಮಾಂಜನೇಯ ಯುದ್ಧ, ಸೀತಾಪಹರಣ, ರಾಮ - ಲಕ್ಷ್ಮಣರ ವನವಾಸ, ಲಕ್ಷ್ಮಣ-ಶೂರ್ಪನಕಿಯರ ಸಮರ, ಹೀಗೆ ದಿನಕ್ಕೊಂದು ಕಥಾ ಪ್ರಸಂಗವನ್ನು ಸಾದರ ಪಡಿಸುವ ಹಗಲು ವೇಷಗಾರರು, ಕೊನೆಯ ದಿನದಲ್ಲಿ ರಾಮನ ಪಟ್ಟಾಭಿಷೇಕದ ಪ್ರಸಂಗ ಪ್ರದರ್ಶಿಸಿ ತಮ್ಮ ಕಲಾ ಪ್ರದರ್ಶನಕ್ಕೆ ತೆರೆ ಎಳೆಯುತ್ತಾರೆ.

ರಾಮಾಯಣದ ಪಾತ್ರಗಳು, ಜನಸಾಮಾನ್ಯರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಸದಾಕಾಲ ಉಳಿಯುವಂತೆ ಕಣ್ಣಿಗೆ ಕಟ್ಟುವಂತೆ ಮನೋಜ್ಞವಾಗಿ ಅಭಿನಯಿಸುವ ವೇಷಗಾರ ಕಲಾವಿದರು, ಕೊನೆಯ ದಿನ ಇಂತಿಷ್ಟು ಎಂದು ಮನೆಮನೆಗೆ ಹೋಗಿ ಜನ ನೀಡಿದಷ್ಟು ಹಣ, ದವಸ - ಧಾನ್ಯ ಸ್ವೀಕರಿಸಿ ಕೃತಾರ್ಥತೆ ಮೆರೆಯುತ್ತಾರೆ.

ಸುಗ್ಗಿಕಾಲದಲ್ಲಿ ರಾಮಾಯಣದ ಕಥಾ ಪ್ರಸಂಗ ಪ್ರದರ್ಶನ: ಪ್ರತಿ ವರ್ಷ ಸುಗ್ಗಿಕಾಲದ ವೇಳೆ ಜನವರಿಯಿಂದ ಮಾರ್ಚ್​ ವರೆಗೆ ಊರು, ಪಟ್ಟಣ, ನಗರ ಪ್ರದೇಶದಲ್ಲಿ ಸಂಚರಿಸುವ ಈ ವೇಷಗಾರ ಕಲಾವಿದರು, ನಾನಾ ಪೌರಾಣಿಕ ಪಾತ್ರದ ಡ್ರೆಸ್​ಗಳನ್ನು ಧರಿಸಿ ದಿನಕ್ಕೊಂದು ಪ್ರಸಂಗಗಳ ಅಭಿನಯದ ಮೂಲಕ ಜನರನ್ನು ರಂಜಿಸುವರು. ಸುಗ್ಗಿಯ ಬಳಿಕ ರೈತಾಪಿ ಜನ ಧಾನ್ಯಗಳನ್ನು ರಾಶಿ ಮಾಡಿ ಕೃಷಿಯಿಂದ ಕೊಂಚ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಹಗಲು ವೇಷಗಾರರ ಕಲೆಯನ್ನು ಪ್ರೋತ್ಸಾಹಿಸುವರು ಎಂಬ ಉದ್ದೇಶದಿಂದ ಪ್ರತಿ ವರ್ಷ ಜನವರಿಯಿಂದ ಈ ರಾಮಾಯಣದ ಕಥಾ ಪ್ರಸಂಗ ಪ್ರದರ್ಶನ ಆರಂಭವಾಗುತಿದ್ದವು.

ಹಗಲು ವೇಷಗಾರರ ತಂಡದ ಮುಖ್ಯಸ್ಥರು ಏನು ಹೇಳ್ತಾರೆ?: ಕಳೆದ ಒಂದು ದಶಕದಿಂದ ಮೊಬೈಲ್, ಟಿವಿ, ಕಂಪ್ಯೂಟರ್, ಸಿನಿಮಾ, ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಉಂಟಾದ ಅಗಾಧ ಬದಲಾವಣೆಯಿಂದಾಗಿ ಈ ಹಗಲು ವೇಷಗಾರರ ಕಲೆಯನ್ನು ಪ್ರೋತ್ಸಾಹಿಸುವವರು ಇಲ್ಲದಂತಾಗಿದೆ. ಹೀಗಾಗಿ ಕಳೆದ ಹನ್ನೆರಡು ವರ್ಷದಿಂದ ಹಗಲುವೇಷ ಕಟ್ಟುವುದನ್ನು ನಿಲ್ಲಿದ್ದೆವು. ಈಗ ಅಯೋಧ್ಯೆಯಲ್ಲಿ ರಾಮನ ಮಂದಿರ ಮತ್ತೆ ಲೋಕಾರ್ಪಣೆ ಆಗುತ್ತಿರುವ ಹಿನ್ನೆಲೆ ರಾಮಾಯಣದ ಕಥಾ ಪ್ರಸಂಗವನ್ನು ಜನರ ಮುಂದೆ ಪ್ರದರ್ಶಿಸುವ ನಿರ್ಧಾರವನ್ನು ತಳೆದಿದ್ದೇವೆ ಎನ್ನುತ್ತಾರೆ ತಂಡದ ಮುಖ್ಯಸ್ಥ ಕಲ್ಯಾಣಂ ನಾಗರಾಜು.

ಇನ್ನು ಮುಂದೆ ಪ್ರತಿ ಎರಡು ವರ್ಷಕ್ಕೊಮ್ಮೆ ಜನರ ಬಳಿಗೆ ಹಗಲು ವೇಷ ಕಟ್ಟಿಕೊಂಡು ಹೋಗಲು ನಿರ್ಣಯಿಸಿದ್ದೇವೆ. ನಮ್ಮ ಕೊನೆ ಉಸಿರು ಇರುವ ವರೆಗೂ ನಮ್ಮ ಮಹಾಕಾವ್ಯಗಳಲ್ಲಿನ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವುದು ನಮ್ಮ ಕಾಯಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗೊಮ್ಮೆ, ಈಗೊಮ್ಮೆ ಉತ್ಸವಗಳಂತ ಸಂದರ್ಭದಲ್ಲಿ ಅವಕಾಶ ನೀಡುವುದು ಬಿಟ್ಟರೆ ನಮಗೆ ಬೇರೆ ಯಾವುದೇ ಅವಕಾಶ ಸಿಗುತ್ತಿಲ್ಲ. ವೇಷಕಟ್ಟುವುದು ಬಿಟ್ಟರೆ ನಮಗೆ ಬೇರೆ ಕಸುಬು ಗೊತ್ತಿಲ್ಲ ಎಂದು ಹಗಲು ವೇಷಗಾರ ಕಲಾವಿದರು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:ಅಯೋಧ್ಯೆ ರೈಲು ನಿಲ್ದಾಣದಲ್ಲಿ ಹುಬ್ಬಳ್ಳಿ ಕಲಾವಿದರ ಕಮಾಲ್: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.