ETV Bharat / state

ಅಪರಾಧ ಕೃತ್ಯಕ್ಕೆ ಸಂಚು: ತಲ್ವಾರ್​ ಸಮೇತ ನಾಲ್ವರ ಬಂಧನ, ಗಾಂಜಾ ಪೆಡ್ಲರ್ ಕೂಡ ಅಂದರ್​ - Huballi crimes - HUBALLI CRIMES

ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯಗಳು ಅಧಿಕವಾಗುತ್ತಿದ್ದು, ಕಡಿವಾಣ ಹಾಕಲು ಹು-ಧಾ ಪೊಲೀಸರು ಹೆಚ್ಚಿನ ಕ್ರಮ ವಹಿಸುತ್ತಿದ್ದಾರೆ.

ಹುಬ್ಬಳ್ಳಿ
ಹುಬ್ಬಳ್ಳಿ (ETV Bharat)
author img

By ETV Bharat Karnataka Team

Published : May 20, 2024, 9:38 AM IST

ಹುಬ್ಬಳ್ಳಿ: 'ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಹು-ಧಾ ಪೊಲೀಸರು ನಗರ ವ್ಯಾಪ್ತಿಯಲ್ಲಿ ಡ್ರಗ್ಸ್​​ ಮಾರಾಟ ಹಾಗೂ ಇನ್ನಿತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.

ಇದೀಗ ಕಸಬಾಪೇಟೆ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ, ಸಾರ್ವಜನಿಕರಲ್ಲಿ ಭದ್ರತೆ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಮೇ 18 ರಂದು ಇಲ್ಲಿನ ಹಳೇಹುಬ್ಬಳ್ಳಿಯ ಗೌರಿಯಾಟೌನ್ ಗಾರ್ಡನ್ ಹತ್ತಿರದ ಸ್ಥಳದಲ್ಲಿ ತಲ್ವಾರ್​ಗಳನ್ನು ಸಂಗ್ರಹಿಸಿ ಅಪರಾಧ ಕೃತ್ಯ ಎಸಗಲು ನಾಲ್ವರು ಯೋಜನೆ ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕಸಬಾಪೇಟೆ ಪೊಲೀಸ್​ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಟಗರ ಓಣಿಯ ಮಹಮ್ಮದ್​ ಸಾಧಿಕ ಅಲಿಯಾಸ್​ ಬಾಬಾಸಾಧಿಕ್ ಬೇಪಾರಿ (28), ದಾದಾಪೀರ ಚೌಧರಿ (26), ಕೋಳೆಕರ ಪ್ಲಾಟ್'ನ ಆಸೀಫ್ ಬೇಪಾರಿ (26), ಬುಲ್ಡೋಜರ್ ನಗರದ ಮೋಹಿನಖಾನ ಧಾರವಾಡ (24) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ತಲ್ವಾರ್​ಗಳನ್ನು ವಶಕ್ಕೆ ಪಡೆದಿದ್ದು, ಆರ್ಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಗಾಂಜಾ ಮಾರಾಟ, ಓರ್ವನ ಬಂಧನ: ಮತ್ತೊಂದು ಪ್ರಕರಣದಲ್ಲಿ ಮೇ 19 ರಂದು ಹಳೇ ಹುಬ್ಬಳ್ಳಿ ಸದರಸೋಫಾ ಕೌದಿಮಠದ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಓರ್ವ ಡ್ರಗ್ಸ್ ಪೆಡ್ಲರ್'ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಮೂಲದ ಜಾವೀದ ಹವಾಲ್ದಾರ್​ (25) ಬಂಧಿತನಾಗಿದ್ದು, ಈತನಿಂದ 42,500 ರೂ ಮೌಲ್ಯದ 850 ಗ್ರಾಂ ಗಾಂಜಾ, 200ರೂ. ನಗದನ್ನು ವಶಕ್ಕೆ ಪಡೆಯಲಾಗಿದ್ದು, NDPS ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಅಪರಾಧ ತಡೆಯುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ ಕಸಬಾಪೇಟೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್​ ಆಯುಕ್ತರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ ಪೊಲೀಸರಿಗೆ ಅವಾಜ್ ಹಾಕಿರುವ ವಿಡಿಯೋ ವೈರಲ್: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್​ಐಆರ್ - FIR Against MLA Harish Poonja

ETV Bharat Logo

Copyright © 2025 Ushodaya Enterprises Pvt. Ltd., All Rights Reserved.