ETV Bharat / state

'ಕೆಟ್ಟ ಸಂಪ್ರದಾಯ ಹುಟ್ಟುಹಾಕಬಾರದೆಂದು ಸದನದಲ್ಲಿ ಮುಡಾ ಚರ್ಚೆಗೆ ಅವಕಾಶ ನೀಡಿಲ್ಲ': ಸ್ಪೀಕರ್ ಯು.ಟಿ. ಖಾದರ್ - U T Khader

ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಗೆ, ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಸ್ಪೀಕರ್ ಯು.ಟಿ. ಖಾದರ್
ಸ್ಪೀಕರ್ ಯು.ಟಿ. ಖಾದರ್ (ETV Bharat)
author img

By ETV Bharat Karnataka Team

Published : Jul 29, 2024, 5:32 PM IST

Updated : Jul 29, 2024, 7:21 PM IST

ಸ್ಪೀಕರ್ ಯು.ಟಿ. ಖಾದರ್ (ETV Bharat)

ಮಂಗಳೂರು: ವಿಧಾನಸಭೆ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲು ನನಗೆ ಇಷ್ಟವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು. ಟಿ. ಖಾದರ್ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 16ನೇ ವಿಧಾನಸಭೆಯ 4ನೇ ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರೀಯಿಸಿ, ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿರುವ ನಿಲುವಳಿ ಸೂಚನೆಗೆ, ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲು ಆಗುವುದಿಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 62(7) ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 63ರ ಪ್ರಕಾರ ಅದರದ್ದೇ ಆದ ನಿಯಮಗಳಿವೆ. ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ, ಸಿದ್ಧವಿಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಸ್ಪೀಕರ್ ಪೀಠಕ್ಕೆ ನೀಡಿದೆ. ಸದನದಲ್ಲಿ ಈ ವಿಷಯ ಚರ್ಚೆಯಾದರೆ ನ್ಯಾಯಾಧಿಕರಣ, ಆಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.‌ ಸದನದ ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ವಿಧಾನಸಭಾ ಸದಸ್ಯರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು ಹಾಕಬಾರದು. ಜನರು ಬಯಸುತ್ತಾರೆ, ಬಹುಮತ ಇದೆ ಎಂದು ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು ಎಂದರು.

ಬಿಎಸಿ ಸಮಿತಿಯಲ್ಲಿ ಚರ್ಚಿಸಿ ನಿಯಮಾವಳಿಗಳಂತೆ ಬೇರೊಂದು ನಿಯಮ ಸಂಖ್ಯೆಯಡಿಯಲ್ಲಿ ಚರ್ಚಿಸುವ ಅವಕಾಶವನ್ನು ಸರ್ವಾನುಮತದ ನಿರ್ಧಾರಕ್ಕೆ ಬರುವ 'ಮಾದರಿ' ಅವಕಾಶ ಇದ್ದೇ ಇದೆ. ನಿಯಮ‌ ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ ಎಂದು ಯು.ಟಿ. ಖಾದರ್ ಹೇಳಿದರು.

ವಿಧಾನಸಭೆ ಕಲಾಪಗಳ ನಿಯಾಮವಳಿ ಪ್ರಕಾರ ನಡೆಯಬೇಕು. ವಾಲ್ಮೀಕಿ ಹಗರಣ ತನಿಖಾ ಹಂತದಲ್ಲಿದೆ. ಆದರೂ ನಾನು ಅದಕ್ಕೆ ಅವಕಾಶ ಕೊಟ್ಟೆ, ನಾಲ್ಕು ದಿನ ಚರ್ಚೆ ಮಾಡಿದ್ರು. ಕಡೆಯ ಒಂದು ದಿನ ಅವಕಾಶ ಕೊಡಬಾರದು, ಕೊಡಬೇಕು ಅನ್ನೋ ಚರ್ಚೆಯಾಯ್ತು. ಹಾಗಾಗಿಯೇ ನಾನು ಅದರ ವಿಚಾರದಲ್ಲಿ ರೂಲಿಂಗ್ ಕೊಟ್ಟೆ. ಸದ್ಯ ಕಾನೂನಿನಡಿ ತನಿಖೆ ಆಗುತ್ತಿದೆ. ಹೀಗಿರುವಾಗ ವಿಧಾನಸಭೆ ನಿಯಮಾವಳಿಗೆ ಕೆಟ್ಟ ಸಂಪ್ರದಾಯ ಪ್ರಾರಂಭ ಮಾಡಲ್ಲ. ಈಗ ಒಪ್ಪಿಗೆ ಕೊಟ್ಟರೆ ಅದು ಭವಿಷ್ಯದಲ್ಲಿ ಸಮಸ್ಯೆ ಅಗಬಹುದು. ಹೀಗಾಗಿ ನಾನು ಆ ವಿಷಯದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕೆಟ್ಟ ಸಂಪ್ರದಾಯ ಪ್ರಾರಂಭಿಸಲು ನಾನು ಕಾರಣ ಆಗಲ್ಲ ಎಂದರು.

ಇದನ್ನೂ ಓದಿ: ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಯಿಂದ ಬ್ಲ್ಯಾಕ್​ಮೇಲ್ ತಂತ್ರ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Jul 29, 2024, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.