ETV Bharat / state

SIT ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ: ಹೆಚ್.​ಡಿ. ಕುಮಾರಸ್ವಾಮಿ ಆರೋಪ - H D kumaraswamy - H D KUMARASWAMY

ಎಸ್ಐಟಿ ರಚನೆ ಮಾಡುವುದು ತನಿಖೆ ನಡೆಸಲು ಅಲ್ಲ, ಗುಲಾಮಗಿರಿ ಮಾಡಲು ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಹೆಚ್.​ಡಿ. ಕುಮಾರಸ್ವಾಮಿ
ಹೆಚ್.​ಡಿ. ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Sep 20, 2024, 5:40 PM IST

Updated : Sep 20, 2024, 6:54 PM IST

ಮೈಸೂರು: ಎಸ್ಐಟಿ ಅನ್ನುವುದು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಇವರು ಎಸ್ಐಟಿ ರಚನೆ ಮಾಡುವುದು ತನಿಖೆ ನಡೆಸಲು ಅಲ್ಲ, ಗುಲಾಮಗಿರಿ ಮಾಡಲು ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ದೂರಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುನಿರತ್ನ ಪ್ರಕರಣದಲ್ಲಿ ಎಸ್​ಐಟಿ ರಚನೆ ಮಾಡುವ ಪ್ರಸ್ತಾವದ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದರು.

ಸಚಿವ ಕೃಷ್ಣಬೈರೇಗೌಡ ನಡೆಸಿದ ಸುದ್ಧಿಗೋಷ್ಠಿ ಕಾಂಗ್ರೆಸ್​ ಟೂಲ್ ಕಿಟ್. ಯಾರೋ ಅವ್ರಿಗೆ ಸ್ಕ್ರಿಪ್ಟ್ ಕೂಡ ಸರಿಯಾಗಿ ಬರೆದು ಕೊಟ್ಟಿಲ್ಲ. ಈ ಸುಳ್ಳಿನ ಸಂಚಿನಲ್ಲಿ ಅವರೇ ಸಿಕ್ಕಿ ಬೀಳುತ್ತಾರೆ. ನಾನು ಎಲ್ಲಿಗೂ ಕದ್ದು ಹೋಗಲ್ಲ. ಸುಳ್ಳು ಹೇಳಿಕೊಂಡು ಬೇರೆಯವರ ನೆರವು ತೆಗೆದುಕೊಳ್ಳುವುದಿಲ್ಲ. ನನಗೂ ಆರೋಪ ಮಾಡಿರುವ ಪ್ರಾಪರ್ಟಿಗೂ ಸಂಬಂಧವಿದೆ. ಅದು ನನ್ನ ಹೆಂಡತಿಯ ತಾಯಿಯ ಪ್ರಾಪರ್ಟಿ ಎಂದು ಹೇಳಿದರು.

ಹೆಚ್.​ಡಿ. ಕುಮಾರಸ್ವಾಮಿ (ETV Bharat)

ಸಚಿವ ಕೃಷ್ಣಬೈರೇಗೌಡ ಯಾರೋ ಬರೆದು ಕೊಟ್ಟಿದ್ದನ್ನು ಇಟ್ಟುಕೊಂಡು ಪ್ರೆಸ್​ಮೀಟ್‌ ಮಾಡಿದ್ದಾರೆ. ಈ ಮಾಹಿತಿ ತೆಗೆಯಲು ಕಳೆದ ಮೂರು ತಿಂಗಳಿನಿಂದ ಒದ್ದಾಡುತ್ತಿದ್ದಾರೆ. ಈ ಪ್ರಕರಣ ಸಂಬಂಧ 2015ರಲ್ಲಿ ಕೇಸ್‌ ಹಾಕಿದ್ದಾರೆ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗಲೇ ತನಿಖೆ ಮಾಡುವುದನ್ನು ಬಿಟ್ಟು ಏನು ಮಾಡಿದರು?. ನಾನು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದು, ಅದಕ್ಕಾಗಿ ನನ್ನನ್ನು ಹೇಗಾದರೂ ಮಾಡಿ ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ನನ್ನನ್ನು ಯಾರೂ ಅಲುಗಾಡಿಸಲು ಸಾ‍ಧ್ಯವಿಲ್ಲ: ನಾನು ಆ ರೀತಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮುಡಾ ಕೇಸ್​ಗೂ ನಮ್ಮ ಕೇಸ್​ಗೂ ವ್ಯತ್ಯಾಸವಿದೆ. ನನ್ನನ್ನು ಯಾರೂ ಅಲುಗಾಡಿಸಲು ಸಾ‍ಧ್ಯವಿಲ್ಲ. ಕೃಷ್ಣಬೈರೇಗೌಡರ ಕಂದಾಯ ಇಲಾಖೆಯಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತು. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳು ಹೊರೆಗೆ ಬರುತ್ತವೆ. ನಾನು ಕೃಷ್ಣಬೈರೇಗೌಡರಂತೆ ವಿದೇಶದಲ್ಲಿ ಓದಿಲ್ಲ, ಹರದನಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ ಓದಿದ್ದೇನೆ ಎಂದು ಟಾಂಗ್​ ಕೊಟ್ಟರು.

ನಮ್ಮ ಅತ್ತೆ ಆಸ್ತಿ ಅದು, ಯಡಿಯೂರಪ್ಪ ಕಾಲದಲ್ಲಿ ಕಾನೂನು ಪ್ರಕಾರ ಡಿನೋಟಿಫಿಕೇಷನ್‌ ಆಗಿದೆ. ಇದರಲ್ಲಿ ನನ್ನನ್ನು ಹಿಡಿಯಲು ಹೊರಟಿದ್ದಾರೆ, ಅದು ಸಾಧ್ಯವಿಲ್ಲ. ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ಐದು ಸೆಕೆಂಡ್‌ ಕೂಡ ರಾಜಕೀಯದಲ್ಲಿ ಇರುವುದಿಲ್ಲ. ನನ್ನನ್ನು ಸಿಲುಕಿಸಲು ಈ ಸರ್ಕಾರ ಕಳೆದ ಮೂರು ತಿಂಗಳಿನಿಂದ ಎಲ್ಲಾ ಕಸರತ್ತುಗಳನ್ನ ಮಾಡುತ್ತಿದೆ. ಹಳೇ ಕೇಸ್​ಗಳಿಗೆ ಜೀವ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸತ್ತವರ ಹೆಬ್ಬೆಟ್ಟನ್ನು ಹಾಕಿಸಿಕೊಂಡಿ ಜಮೀನು ಲಪಟಾಯಿಸಿದ್ದು ಯಾರು?. ಡಿ.ಕೆ. ಶಿವಕುಮಾರ್​ಗೆ ಅದೆಲ್ಲಾ ಗೊತ್ತಿದೆ. ಆದರೆ ಡಿ.ಕೆ. ಸುರೇಶ್‌ ಅದನ್ನು ಮರೆತು ಹೋಗಿದ್ದಾರೆ. ನನಗೆ ಇವರ ರೀತಿ ಸತ್ತವರಿಂದ ಹೆಬ್ಬೆಟ್ಟು ಹಾಕಿಸಿಕೊಳ್ಳುವ ವ್ಯವಹಾರ ಗೊತ್ತಿಲ್ಲ ಎಂದರು.

ದೇವೇಗೌಡರ ಫೋಟೋಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು?: ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹೆಚ್ಚಾಗಿದೆ. ಮೈಸೂರಿನಲ್ಲಿ ದೇವೇಗೌಡರ ಫೋಟೋಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು?. ಆಗ ಒಕ್ಕಲಿಗರ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು. ನಾನು ನಮ್ಮ ಸಮಾಜದ ಸ್ವಾಮೀಜಿಗಳಿಗೆ ಸಾಫ್ಟ್‌ ಆಗಿರಲು ಹೇಳಿದೆ ಎಂಬ ಆರೋಪ ಸರಿಯಲ್ಲ. ನಾನ್ಯಾಕೆ ಆ ರೀತಿ ನಮ್ಮ ಸಮಾಜದ ಸ್ವಾಮೀಜಿಗಳಿಗೆ ಹೇಳಲಿ ಎಂದು ಗುಡುಗಿದರು.

ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಕುಮ್ಮಕ್ಕಿನಿಂದಾಗಿ ಮುನಿರತ್ನ ಅವರಿಂದ ಸಮುದಾಯದ ನಿಂದನೆ: ಡಿ.ಕೆ.ಸುರೇಶ್ - D K Suresh

Last Updated : Sep 20, 2024, 6:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.