ETV Bharat / state

ಸಿದ್ಧರಾಮಯ್ಯ ವಿಧಾನಸಭೆಯ ಮೂಡ್​ನಿಂದ ಇನ್ನೂ ಹೊರ ಬಂದಿಲ್ಲ: ಪ್ರಹ್ಲಾದ್ ಜೋಶಿ ವ್ಯಂಗ್ಯ - Pralhad Joshi - PRALHAD JOSHI

ಸಿದ್ದರಾಮಯ್ಯ ವಿಧಾನಸಭೆ ಚುನಾವಣೆ ಅಂತಾ ತಿಳಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

pralhad-joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By ETV Bharat Karnataka Team

Published : Apr 9, 2024, 3:33 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಸಿದ್ಧರಾಮಯ್ಯ ವಿಧಾನಸಭೆಯ ಮೂಡ್​ನಿಂದ ಇನ್ನೂ ಹೊರ ಬಂದಿಲ್ಲ. ಅವರು ವಿಧಾನಸಭೆ ಚುನಾವಣೆ ಅಂತಾ ತಿಳಿದುಕೊಂಡಿದ್ದಾರೆ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಇಂದು ಮಾತನಾಡಿದ ಅವರು, ಪ್ರಧಾನಿಗಳು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಾರೆ. ಆದರೆ, ಕೇವಲ ಯಾವುದೋ ಒಂದು ರಾಜಕಾರಣ ವಿಷಯದ ಬಗ್ಗೆ ಸಿದ್ಧರಾಮಯ್ಯ ಮಾತನಾಡುತ್ತಾರೆ. ಯಾವುದೇ ಚರ್ಚೆಗಳನ್ನ‌ ಅವರು ಮಾಡಲ್ಲ. 75 ವರ್ಷದ ಇತಿಹಾಸದಲ್ಲಿ 50 ವರ್ಷಗಳ ಕಾಲ ಪೂರ್ಣ ಬಹುಮತ‌ದೊಂದಿಗೆ 8 ವರ್ಷ ಅಲ್ಪ ಬಹುಮತದ ಸರ್ಕಾರ ನಡೆಸಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ‌ ಅವರು ಅರ್ಧಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಯಾಕೆ ಈ ಸ್ಥಿತಿ ಬಂದಿದೆ ಅನ್ನೋದನ್ನ ಕಾಂಗ್ರೆಸಿಗರು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಕೇವಲ‌ ಸನಾತನ ಧರ್ಮದ ವಿರುದ್ಧ ಹಿಂದುತ್ವದ ವಿರುದ್ಧ ಮಾತನಾಡುತ್ತಾರೆ. ಮೋದಿಯವರಿಗೆ ಎರಡು ನಾಲಿಗೆ ಇದೆ ಎಂಬ ಪ್ರಕಾಶ್ ರಾಜ್ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಪ್ರಕಾಶ್ ರಾಜ್ ಅವರಂತವರಿಗೆ ಉತ್ತರ ಕೊಡುವ ಅಗತ್ಯ‌ ಇಲ್ಲ. ಅವರೊಬ್ಬ ಅಸಂತುಷ್ಟ ಜೀವಿ. ಅವರ‌ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದರು.

ಬರ ಹಾಗೂ ಅನುದಾನ ವಿಚಾರವಾಗಿ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಿಲ್ಲ. ಸೌಹಾರ್ದಯುತವಾಗಿ ಕೆಲಸ ಮಾಡುವಂತೆ ಕೋರ್ಟ್ ಹೇಳಿದೆ. ನಾವು ಯಾವಾಗಲೂ ಸೌಹಾರ್ದಯುತವಾಗಿ ವರ್ತನೆ ಮಾಡಿದ್ದೇವೆ. ಆದರೆ ರಾಜ್ಯ ಸರ್ಕಾರ ವಿಷಯಾಂತರ ಮಾಡಲು ಈ‌‌ ರೀತಿ‌‌ ನ್ಯಾಯಾಲಯದ ಮೊರೆ ಹೋಗಿದೆ ಎಂದು ತಿಳಿಸಿದರು.

ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪ್ರಹ್ಲಾದ್ ಜೋಶಿ‌ ಅಭಿಮಾನಿಗಳ ಅಸಮಾಧಾನ ವಿಚಾರವಾಗಿ ಮಾತನಾಡಿ, ನಾನು‌ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣ ಎಂಬುದು ತೆರೆದ ಸಂವಹನ. ಅಲ್ಲಿ‌ ಯಾರು ಅವರ ಬಗ್ಗೆ ಅಸಮಾಧಾನ‌ ವ್ಯಕ್ತಪಡಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಯಾವ ಜಾಲತಾಣದಲ್ಲೂ‌ ಈ‌ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.

ಎಲ್ಲ ಸಂಸದರು ಪುಕ್ಕಲರು ಎಂಬ ಸಿದ್ಧರಾಮಯ್ಯ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ‌್ ಗಾಂಧಿಯವರ‌ ಬಳಿಯೇ ಕಾಂಗ್ರೆಸ್​ನವರು ಮಾತನಾಡಲ್ಲ. ಮುಖ್ಯಮಂತ್ರಿ‌ ಪದವಿ ಹೋಗುತ್ತೆ‌ ಎಂಬ‌ ಭಯದಿಂದ‌ ಸಿದ್ಧರಾಮಯ್ಯ ರಾಹುಲ್‌ಗಾಂಧಿ‌ ಮುಂದೆ‌ ಮಾತನಾಡಲ್ಲ. ಖರ್ಗೆ‌ ಪ್ರಧಾನಿ ಅಭ್ಯರ್ಥಿ ಅಂತಾ ಹೇಳೋಕೇ‌ ಸಿದ್ಧರಾಮಯ್ಯ ಹೆದರುತ್ತಾರೆ. ಅಭಿವೃದ್ದಿ ಹಾಗೂ ಬರ ಪರಿಹಾರದ ವಿಚಾರವಾಗಿ ಈವರೆಗೂ ಯಾವುದೇ ವರದಿ ನೀಡಲು ಸರ್ಕಾರಕ್ಕೆ‌ ಸಾಧ್ಯವಾಗಿಲ್ಲ. ಬಹಿರಂಗ ಚರ್ಚೆಯ‌ ಮೂಲಕ‌ ಈಗಾಗಲೇ ಕಾಂಗ್ರೆಸ್​ನವರಿಗೆ ಉತ್ತರ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ - Prahlad Joshi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.