ETV Bharat / state

ಷೇರುಪೇಟೆಯಲ್ಲಿ ಐದು ಪಟ್ಟು ಲಾಭಂಶ ಕೊಡಿಸುವ ಆಮಿಷ: ನಂಬಿ 46 ಲಕ್ಷ ರೂ ಕಳೆದುಕೊಂಡ ಮಂಗಳೂರಿಗ - FRAUD CASE

ಷೇರು ಟ್ರೇಡಿಂಗ್​ನಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆಂದು ನಂಬಿಸಿ 46 ಲಕ್ಷ ರೂ. ವಂಚಿಸಿದ ಕುರಿತು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Police Commissioners Office
ಪೊಲೀಸ್ ಆಯುಕ್ತರ ಕಚೇರಿ (ETV Bharat)
author img

By ETV Bharat Karnataka Team

Published : Dec 7, 2024, 7:03 PM IST

ಮಂಗಳೂರು (ದಕ್ಷಿಣ ಕನ್ನಡ): ಷೇರು ಟ್ರೇಡಿಂಗ್​ನಲ್ಲಿ ಹಣ ತೊಡಗಿಸಿದರೆ ಶೇ.500ರಷ್ಟು ಲಾಭಾಂಶ ಬರುತ್ತದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 46 ಲಕ್ಷ ರೂ ವಂಚಿಸಿದ ಬಗ್ಗೆ ನಗರದ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬರ ವಾಟ್ಸಾಪ್ ನಂಬರ್​ಗೆ ಶ್ರದ್ಧಾ ಬೆಲಾನಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಷೇರು ಟ್ರೇಡಿಂಗ್​ನಲ್ಲಿ ಹಣ ತೊಡಗಿಸಿದರೆ ಶೇ.500ರಷ್ಟು ಲಾಭಾಂಶ ಬರುವುದಾಗಿ ತಿಳಿಸಿದ್ದರು. ಅದರಂತೆ ಈ ವ್ಯಕ್ತಿ ಅವರು ಕಳುಹಿಸಿದ https://play.google.someco.shop/com.rehvu.dqlgdf/install.html ಎಂಬ ಲಿಂಕ್​ ಒತ್ತಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದರು. ನಂತರ ಅವರು H 777 ARES Stock Exchange Group ಎಂಬ ವಾಟ್ಸಾಪ್ ಗ್ರೂಪ್​ಗೆ ಸೇರಿಸಿದ್ದರು.

ಗ್ರೂಪ್​ನಲ್ಲಿ ಶ್ರದ್ಧಾ ಬೆಲಾನಿ ಎಂಬವರು ಗ್ರೂಪ್ ಅಡ್ಮಿನ್ ಆಗಿದ್ದು, ಸದರಿ ಟ್ರೇಡ್​ನಲ್ಲಿ ಅಭಿಷೇಕ್ ರಾಮ್ ಜೀ ಎಂಬವರು ಚೀಫ್ ಆಗಿರುತ್ತಾರೆ. ಮೊದಲಿಗೆ ಈ ವ್ಯಕ್ತಿ ಸ್ಟಾಕ್ ಖರೀದಿ ಮಾಡಲು ತನ್ನ ಬ್ಯಾಂಕ್​ನಿಂದ 2 ಲಕ್ಷ ರೂ ಹಣವನ್ನು ಆರ್​ಟಿಜಿಎಸ್ ಮಾಡಿದ್ದರು. ಮರುದಿನ ಆ ಸ್ಟಾಕ್ ಅನ್ನು ಸೇಲ್ ಮಾಡಿದ್ದು, ಇದರಿಂದ 50,000 ರೂ ಲಾಭವಾಗಿ ಬಂದಿರುತ್ತದೆ. ಇದನ್ನು ನಂಬಿದ ಈ ವ್ಯಕ್ತಿ ಇನ್ನು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅದೇ ಖಾತೆಗೆ ಪುನಃ 5,00,000 ರೂ ಹಣವನ್ನು ಹೂಡಿಕೆ ಮಾಡಿದ್ದಾರೆ. ನಂತರ 9,00,000 ರೂ ಹಣ ಸೇರಿದಂತೆ ನವೆಂಬರ್ 1 ರಿಂದ 19 ರವರೆಗೆ ಒಟ್ಟು 29,00,000 ರೂ ಹಾಗೂ ನವೆಂಬರ್ 27ರಂದು 1,00,000 ರೂ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟು 46,00,000 ರೂ ಹಣ ವರ್ಗಾವಣೆ ಮಾಡಿದ್ದಾರೆ.

ನವೆಂಬರ್ 29 ರಂದು ಈ ವ್ಯಕ್ತಿಗೆ ಹಣದ ಅವಶ್ಯಕತೆ ಇದ್ದು, 20,00,000 ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದ್ದರು. ಆದರೆ ಹಣ ವಿತ್ ಡ್ರಾ ಮಾಡಲು ಆಗಿರಲಿಲ್ಲ. ಈ ಬಗ್ಗೆ ಶ್ರದ್ಧಾ ಬೆಲಾನಿ ಹಾಗೂ ಅಭಿಷೇಕ್ ರಾಮ್ ಜೀ ಅವರನ್ನು ಸಂಪರ್ಕಿಸಿದಾಗ ಅವರು ಹಣವನ್ನು ವಾಪಾಸ್ ತೆಗೆಯಬೇಕಾದರೆ ಮತ್ತೆ 8.78 ಲಕ್ಷ ರೂ ಹಣ ವರ್ಗಾವಣೆ ಮಾಡಿ ನಿಮ್ಮ ಖಾತೆಯನ್ನು ಮುಕ್ತಾಯ ಮಾಡಿಕೊಳ್ಳಬಹುದಾಗಿ ತಿಳಿಸಿದ್ದರು. ಈ ಬಗ್ಗೆ ಅನುಮಾನ ಬಂದು ಅವರು ದೂರು ದಾಖಲಿಸಿದ್ದಾರೆ.

ಶ್ರದ್ದಾ ಬೆಲಾನಿ ಮತ್ತು ಅಭಿಷೇಕ್ ರಾಮ್ ಜೀ ಎಂಬುವರು ಖಾಸಗಿ ಶೇರು ಕಂಪನಿಯ ಹೆಸರಿನಲ್ಲಿ ಆನ್​ಲೈನ್ ಮೂಲಕ ಅಕ್ಟೋಬರ್ 24 ರಿಂದ ನವೆಂಬರ್​ 27ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 46,00,000 ಹಣ ಪಾವತಿಸಿಕೊಂಡು ಬಳಿಕ ಮರು ಪಾವತಿ ಮಾಡದೆ ಆನ್ ಲೈನ್ ಮುಖಾಂತರ ಷೇರು ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ಇದನ್ನೂ ಓದಿ : 3 ಕೋಟಿ ರೂ ವಂಚನೆ ಆರೋಪ: ಆನ್‌ಲೈನ್‌ ಗೇಮಿಂಗ್ ಆ್ಯಪ್‌ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.