ETV Bharat / state

ವಿಮಾನದಲ್ಲಿ ಮುಂಬೈಗೆ ತೆರಳಿದ ಶಾಂತಾಯಿ ವೃದ್ಧಾಶ್ರಮದ ಹಿರಿಜೀವಗಳು - Shantai Old Age Home

ಶಾಂತಾಯಿ ವೃದ್ಧಾಶ್ರಮದ 42 ಜನರ ತಂಡ ಮುಂಬೈ ಪ್ರವಾಸ ಕೈಗೊಂಡಿದೆ.

Shantai Old Age Home members tour to Mumbai by plane
ವಿಮಾನದಲ್ಲಿ ಮುಂಬೈಗೆ ತೆರಳಿದ ಶಾಂತಾಯಿ ವೃದ್ಧಾಶ್ರಮದ ಹಿರಿಜೀವಗಳು
author img

By ETV Bharat Karnataka Team

Published : Feb 23, 2024, 10:51 AM IST

Updated : Feb 23, 2024, 12:31 PM IST

ವಿಮಾನದಲ್ಲಿ ಮುಂಬೈಗೆ ತೆರಳಿದ ಶಾಂತಾಯಿ ವೃದ್ಧಾಶ್ರಮದ ಹಿರಿಜೀವಗಳು

ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಹಿರಿಜೀವಗಳು ವಿಮಾನದಲ್ಲಿ ಮುಂಬೈಗೆ ಪ್ರವಾಸ ಕೈಗೊಂಡಿದ್ದಾರೆ. ವೃದ್ಧರ ತಂಡ ಇಂದು ಮುಂಬೈ ತಲುಪಿದ್ದು, ಫೆಬ್ರವರಿ 26ಕ್ಕೆ ವಾಪಸ್​ ಆಗಲಿದ್ದಾರೆ.

ಮುಂಜಾನೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಶಾಂತಾಯಿ ವೃದ್ಧಾಶ್ರಮದ 42 ಜನರ ತಂಡ ಆಗಮಿಸಿತು. ಈ ವೇಳೆ ಅನಾಥ ಹಿರಿಜೀವಗಳ ಖುಷಿಗೆ ಪಾರವೇ ಇರಲಿಲ್ಲ. ಯಾವಾಗ ವಿಮಾನ ಏರುವೆವು? ಯಾವಾಗ ಬಾನಂಗಳದಲ್ಲಿ ಹಾರುವೆವು? ಎಂದು ತುದಿಗಾಲಲ್ಲಿ ನಿಂತಿದ್ದರು. ಇಳಿ ವಯಸ್ಸಿನಲ್ಲಿ ಬಲು ಉತ್ಸಾಹದಿಂದ ಸ್ಟಾರ್ ಏರ್​​ವೇಸ್ ಏರಿದ ವೃದ್ಧಾಶ್ರಮದ ಸದಸ್ಯರು ಆಕಾಶಕ್ಕೆ ಎರಡೇ ಗೇಣು ಎನ್ನುವಂತೆ ಸಂಭ್ರಮಿಸಿದರು.

ಒಂದೇ ರೀತಿಯ ಹೊಸ ಸೀರೆ ಉಟ್ಟಿದ್ದ ಅಜ್ಜಿಯಂದಿರು, ಹೊಸ ಶರ್ಟ್​ ಪ್ಯಾಂಟ್​ ಧರಿಸಿದ್ದ ಅಜ್ಜಂದಿರ ಮೊಗ ನಗುವಿನಿಂದ ಕಂಗೊಳಿಸುತ್ತಿತ್ತು.‌ ಮುಂಬೈಗೆ ಇವರನ್ನು ರಾಜ್ಯಸಭಾ ಮಾಜಿ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಬೀಳ್ಕೊಟ್ಟರು.

ಮುಂಬೈಗೆ ವಿಮಾನದಲ್ಲಿ ಬಂದಿಳಿದ ಈ ಹಿರಿ ಜೀವಿಗಳನ್ನು ನೇರವಾಗಿ ತಾಜ್ ಹೋಟೆಲ್​ಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಉದ್ಯಮಿಗಳಾದ ಅನಿಲ್​ ಜೈನ್, ಸಂಜಯ ಮುತ್ತಾ ಅವರು ಬರಮಾಡಿಕೊಂಡರು. ಹೋಟೆಲ್ ಸಿಬ್ಬಂದಿ ವೃದ್ಧರ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದ್ದು, ವಿಶೇಷವಾಗಿತ್ತು. ತಾಜ್ ಹೋಟೆಲ್​ನಲ್ಲಿ ಉಪಹಾರ ಸೇವಿಸಿದ ಬಳಿಕ ಮುಂಬೈನ ಪ್ರಸಿದ್ಧ ಪ್ರವಾಸಿ ತಾಣಗಳತ್ತ ತೆರಳಿದರು.

ನಾಲ್ಕು ದಿನ ಮುಂಬೈನಲ್ಲೇ ಇರಲಿರುವ ಈ ತಂಡ ಅಟಲ್ ಜೀ ಸೇತುವೆ, ಗೇಟ್ ವೇ, ಮಹಾಲಕ್ಷ್ಮಿ ಮಂದಿರ, ಜೈನಮಂದಿರ, ಅನಿಲ್ ಅಂಬಾನಿಯವರ ಫೌಂಟೇನ್ ಅಫ್ ಎಂಜಾಯ್‌ಮೆಂಟ್, ಸಮುದ್ರ ಸಫಾರಿ‌ ಹಾಗೂ ಭಾವು ಕದಂ ಅಭಿನಯದ ನಾಟಕ ವೀಕ್ಷಣೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದೆ. ಫೆ.26ಕ್ಕೆ ವಿಮಾನದ ಮೂಲಕ ವಾಪಸ್ ಬೆಳಗಾವಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಶ್ವಾನ, ಬೆಕ್ಕುಗಳ ರಕ್ಷಣೆ: ಸಂಯುಕ್ತಾ ಹೊರನಾಡ್ ಜೊತೆ ಕೈಜೋಡಿಸಿದ ಟೆಕಿಯಾನ್

"ರಾಜಕುಮಾರ" ಸಿನಿಮಾದಲ್ಲಿ ಡಾ. ಪುನೀತ್ ರಾಜ್​​ಕುಮಾರ ವೃದ್ಧಾಶ್ರಮದಲ್ಲಿದ್ದ ಹಿರಿಯರನ್ನು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಎಂಜಾಯ್ ಮಾಡಿಸಿದ್ದರು. ಇದೀಗ ನಿಜ ಜೀವನದಲ್ಲೂ ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ವಿಮಾನದಲ್ಲಿ ಮುಂಬೈ ಪ್ರವಾಸಕ್ಕೆ ಕರೆದೊಯ್ದಿರುವ ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ವಿಜಯ್‌ ಮೋರೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: 'ಫಾರ್ ರಿಜಿಸ್ಟ್ರೇಷನ್' ರಿಲೀಸ್​: ಭಾರಿ ಮೊತ್ತಕ್ಕೆ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್

Last Updated : Feb 23, 2024, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.