ETV Bharat / state

ಡಿಟೆಕ್ಟಿವ್‌ ಏಜೆನ್ಸಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸಿಡಿಆರ್ ಕಲೆಹಾಕುತ್ತಿದ್ದ ಏಳು ಜನರ ಬಂಧನ - illegally collecting CDR

ಅನಧಿಕೃತವಾಗಿ ಸಿಡಿಆರ್ ಕಲೆಹಾಕುತ್ತಿದ್ದ ಏಳು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

illegally collecting cdr
ಅನಧಿಕೃತ ಸಿಡಿಆರ್ ಸಂಗ್ರಹ ಪ್ರಕರಣ (ETV Bharat)
author img

By ETV Bharat Karnataka Team

Published : May 28, 2024, 5:23 PM IST

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ (ETV Bharat)

ಬೆಂಗಳೂರು: ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅನಧಿಕೃತವಾಗಿ ಸಿಡಿಆರ್ (ಕರೆ ವಿವರಗಳ ದಾಖಲೆ) ಕಲೆಹಾಕುತ್ತಿದ್ದ ಏಳು ಜನ ಆರೋಪಿಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಸತೀಶ್ ಕುಮಾರ್, ಭರತ್, ಶ್ರೀನಿವಾಸ ವಿ., ಪುರುಷೋತ್ತಮ, ಗುರುಪಾದ್, ರೇವಂತ್ ಹಾಗೂ ತಿಪ್ಪೇಸ್ವಾಮಿ ಬಂಧಿತ ಆರೋಪಿಗಳು. ವಿಜಯನಗರ ಹಾಗೂ ಗೋವಿಂದರಾಜನಗರ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಅಕ್ರಮದ ಮೇಲೆ ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮಹಾನಗರಿ ಡಿಟೆಕ್ಟಿವ್‌ & ಸೆಕ್ಯುರಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಪ್ರಕರಣಗಳ ತನಿಖೆ ಕೈಗೊಳ್ಳುವ ತನಿಖಾ ಏಜೆನ್ಸಿಗಳು ಕಾನೂನಾತ್ಮಕವಾಗಿ ಸಿಡಿಆರ್ ಕಲೆಹಾಕುವ ಅಧಿಕಾರ ಹೊಂದಿರುತ್ತವೆ. ಅನಧಿಕೃತವಾಗಿ ಸಿಡಿಆರ್ ಕಲೆ ಹಾಕುವುದು ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತಂದ ಆರೋಪವಾಗುತ್ತದೆ. ಆದರೆ, ಡಿಟೆಕ್ಟಿವ್‌ ಏಜೆನ್ಸಿ ಸ್ಥಾಪಿಸುವುದಾಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದ ಆರೋಪಿಗಳು, ಸರ್ಕಾರದ ಪರವಾನಗಿ ಪಡೆಯದೇ ಸರ್ವಿಸ್ ಪ್ರೊವೈಡರ್ ಕಂಪನಿಗಳ ಏಜೆಂಟರ್​​ಗಳೊಂದಿಗೆ ಶಾಮೀಲಾಗಿ ಬೇರೆ ಬೇರೆ ವ್ಯಕ್ತಿಗಳ ಮೊಬೈಲ್ ನಂಬರ್‌ಗಳ ಸಿಡಿಆರ್ ಕಲೆಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯರ ಮೇಲೆ ಅನುಮಾನಗೊಂಡ ರೌಡಿಶೀಟರ್​​ಗಳು, ಪಾಲುದಾರರ ಮೇಲೆ ಅನುಮಾನ ಹೊಂದಿರುವ ಉದ್ಯಮಿಗಳು ಸಿಡಿಆರ್ ಪಡೆಯುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿಗಳು 20-30 ಸಾವಿರ ರೂ.ಗಳಿಗೆ ನಿರ್ದಿಷ್ಟ ಅವಧಿಯ ಸಿಡಿಆರ್ ನೀಡುತ್ತಿದ್ದರು. ಒಟ್ಟು 43 ಮೊಬೈಲ್ ನಂಬರ್‌ಗಳ ಸಿಡಿಆರ್ ಪಡೆದುಕೊಂಡಿರುವುದು ಸದ್ಯ ಬೆಳಕಿಗೆ ಬಂದಿದೆ.

ವಿಜಯನಗರ, ಗೋವಿಂದರಾಜನಗರದಲ್ಲಿ ಒಟ್ಟು ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದುವರೆಗೂ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಗಿದ್ದು, ಆರೋಪಿಗಳು ಯಾವ ಉದ್ದೇಶಕ್ಕಾಗಿ ಸಿಡಿಆರ್ ಪಡೆದಿದ್ದಾರೆ? ಹೇಗೆ ಪಡೆದಿದ್ದಾರೆ? ಸುಳ್ಳು ವರದಿಗಳನ್ನು ನೀಡಿ ಹಣ ಸಂಪಾದಿಸುತ್ತಿದ್ದರಾ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಇದನ್ನೂ ಓದಿ : ಅನಧಿಕೃತವಾಗಿ ಐಎಎಸ್ ಅಧಿಕಾರಿಯ ಸಿಡಿಆರ್ ಪಡೆದ ಆರೋಪ; ಮಾಜಿ ಐಪಿಎಸ್ ಅಧಿಕಾರಿ, ಇನ್ಸ್‌ಪೆಕ್ಟರ್ ವಿರುದ್ಧ ಎಫ್ಐಆರ್ - CDR Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.