ETV Bharat / state

ಪ್ರತ್ಯೇಕ ಘಟನೆ: ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆ; ಅಪಘಾತದಲ್ಲಿ ವ್ಯಕ್ತಿ ಸಾವು - Crime News

ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತದಲ್ಲಿ ಮ್ಯಾನೇಜರ್​ ಸಾವನ್ನಪ್ಪಿದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

MANAGER KILLED IN ACCIDENT  WOMAN BODY FOUND  SHIVAMOGGA  CHIKKABALLAPURA
ಅಪಘಾತದಲ್ಲಿ ಮ್ಯಾನೇಜರ್​ ಸಾವು
author img

By ETV Bharat Karnataka Team

Published : Apr 8, 2024, 12:45 PM IST

Updated : Apr 8, 2024, 1:03 PM IST

ಚಿಕ್ಕಬಳ್ಳಾಪುರ/ಶಿವಮೊಗ್ಗ: ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಿಳೆ ಶವ ಪತ್ತೆಯಾದರೆ, ಇನ್ನೊಂಡೆದೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.

ರೈಲ್ವೇ ಟ್ರ್ಯಾಕ್​​ ಬಳಿ ಮಹಿಳೆ ಶವ ಪತ್ತೆ: ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹಾಗೂ ಬಸವಪುರನ ರೈಲ್ವೆ ಟ್ರ್ಯಾಕ್​ ಪಕ್ಕದ ಲೇಔಟ್​ವೊಂದರಲ್ಲಿ ಘಟನೆ ನಡೆದಿದೆ.

ಮಹಿಳೆಯ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತ ಮಹಿಳೆಗೆ ಅಂದಾಜು 35 ವರ್ಷ ವಯಸ್ಸಾಗಿದ್ದು, ಪೊಲೀಸರು ಆಕೆಯ ಕುಟುಂಬಸ್ಥರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಮಹಿಳೆಯ ಶವ ಇರುವ ಕಾರಣ, ಆಯತಪ್ಪಿ ರೈಲಿನಿಂದ ಬಿದ್ದಿರಬಹುದು ಅಥವಾ ಯಾರಾದರೂ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Manager killed in accident  woman body found  Shivamogga  Chikkaballapura
ಅಪಘಾತದಲ್ಲಿ ಮ್ಯಾನೇಜರ್​ ಸಾವು

ಶಿವಮೊಗ್ಗದಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ‌, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಹೊರವಲಯ ನಿದಿಗೆ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಮೇಘರಾಜ್ (45) ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಮೇಘರಾಜ್ ಶಿವಮೊಗ್ಗದ ಮಾಚೇನಹಳ್ಳಿಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಶಾಂತಲಾ ಸ್ಪಿರೋಕಾಸ್ಟ್ ಮ್ಯಾನೇಜರ್ ಎಂದು ಗುರುತಿಸಲಾಗಿದೆ.

ನಿದಿಗೆ ಗ್ರಾಮದ ಬಳಿ ತುಮಕೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 207ರ ಕಾಮಗಾರಿ ನಡೆಯುತ್ತಿದೆ. ಎರಡು ಕಾರುಗಳು ಮಧ್ಯೆ ಅಪಘಾತ ಸಂಭವಿಸಿವೆ. ಕಾಮಗಾರಿ ನಡೆಯುತ್ತಿರುವುದರಿಂದ ದ್ವಿಪಥದ ರಸ್ತೆ ಬಿಟ್ಟು ಏಕಮುಖ ಸಂಚಾರ ಇರುವ ಕಡೆ ಕಾರು ಬಂದ ಕಾರಣಕ್ಕೆ ಅಪಘಾತವಾಗಿದೆ ಎನ್ನಲಾಗಿದೆ.

ಮೃತ ಮೇಘರಾಜ್ ತಮ್ಮ ಕಾರಿನಲ್ಲಿ ಶಿವಮೊಗ್ಗದಿಂದ ಮಾಚೇನಹಳ್ಳಿ ಕಡೆ ಹೊರಟಿದ್ದರು. ಈ ವೇಳೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಿಂದ ಮತ್ತೊಂದು ಕಾರು ಶಿವಮೊಗ್ಗದ ಕಡೆ ಬರುತ್ತಿತ್ತು. ಕಾರು ಏಕಮುಖ ಸಂಚಾರ ರಸ್ತೆಗೆ ಬಂದು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಿಂದ ಈ ಭಾಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಬಳ್ಳಾರಿ: ದಾಖಲೆ ಇಲ್ಲದ ₹5.60 ಕೋಟಿ ನಗದು, 3 ಕೆಜಿ ಚಿನ್ನ, 124 ಕೆಜಿ ಬೆಳ್ಳಿ ಜಪ್ತಿ - Ballari Police Raid

Last Updated : Apr 8, 2024, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.