ETV Bharat / state

ಯತ್ನಾಳ್ ಬೆಂಬಲಕ್ಕೆ ಧಾವಿಸಿದ ಬಿಜೆಪಿ ಹಿರಿಯ ನಾಯಕರು; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ - Basangouda Yatnal - BASANGOUDA YATNAL

ಸಕ್ಕರೆ ಕಾರ್ಖಾನೆ ಆರಂಭಿಸಲು ಎನ್​ಒಸಿಗಾಗಿ ಪಿಸಿಬಿ ಕಚೇರಿಯಲ್ಲಿ ಕಾದು ಕುಳಿತು ಧರಣಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಕ್ಕೆ ಬಿಜೆಪಿ ಹಿರಿಯ ನಾಯಕರು ಧಾವಿಸಿದ್ದಾರೆ.

senior-bjp-leaders
ಬಿಜೆಪಿ ಹಿರಿಯ ನಾಯಕರು (ETV Bharat)
author img

By ETV Bharat Karnataka Team

Published : Aug 28, 2024, 4:32 PM IST

ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಎನ್ಒಸಿ ನೀಡದೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದು, ಯತ್ನಾಳ್ ಬೆಂಬಲಕ್ಕೆ ಧಾವಿಸಿದ್ದಾರೆ. ಪಿಸಿಬಿ, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.

ಮಂಗಳವಾರದಿಂದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಎನ್ಒಸಿಗಾಗಿ ಕಾದು ಕುಳಿತು ಧರಣಿ ರೂಪದಲ್ಲಿ ಪಿಸಿಬಿ ಕಚೇರಿಯಲ್ಲಿಯೇ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಕ್ಕೆ ಬಿಜೆಪಿ ನಾಯಕರು ಧಾವಿಸಿದ್ದಾರೆ. ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ್​ನಾರಾಯಣ್, ಶಾಸಕ ಅರವಿಂದ ಬೆಲ್ಲದ್, ಎಂಎಲ್​ಸಿ ಸಿ ಟಿ ರವಿ ಸೇರಿದಂತೆ ಹಲವು ನಾಯಕರು ಪಿಸಿಬಿ ಕಚೇರಿಗೆ ತೆರಳಿ ಯತ್ನಾಳ್ ಬೆಂಬಲಕ್ಕೆ ನಿಂತಿದ್ದಾರೆ. ಎನ್ಒಸಿ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕಾನೂನು, ನ್ಯಾಯ ಸತ್ತುಹೋಗಿದೆ. ದ್ವೇಷದ ರಾಜಕಾರಣ ನಡೆಯುತ್ತಿದೆ. ಎಲ್ಲವೂ ಕಾನೂನು ಪ್ರಕಾರ ಮಾಡಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಕ್ಕರೆ ಕಾರ್ಖಾನೆ ಶುರು ಮಾಡಿದ್ದರು. ಆದರೆ ಕಳೆದ ವರ್ಷ ಇವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಕಾರ್ಖಾನೆ ಮುಚ್ಚಿಸಿತ್ತು. ಆಗ ಯತ್ನಾಳ್ ಕೋರ್ಟ್ ಮೊರೆ ಹೋದರು. ಕೋರ್ಟ್ ನಾಲ್ಕು ವಾರದೊಳಗೆ ಕಾರ್ಖಾನೆ ಪುನಾರಂಭಕ್ಕೆ ಆದೇಶ ಕೊಟ್ಟಿತು. ಯತ್ನಾಳ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಈಗ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನುಮತಿ ಕೊಡ್ತಿಲ್ಲ. ಪಿಸಿಬಿಯವರು ತಾಂತ್ರಿಕ ಕಾರಣದ ನೆಪ ಹೇಳ್ತಿದ್ದಾರೆ ಎಂದರು.

ಬಹಳ ದೊಡ್ಡ ತಾರತಮ್ಯ ಮಾಡ್ತಿದೆ ಪಿಸಿಬಿ. ಹಲವು ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಟ್ಟು, ಇವರಿಗೆ ತಾರತಮ್ಯ ಮಾಡಲಾಗ್ತಿದೆ. ಕಾನೂನು ಉಲ್ಲಂಘಿಸಿದ ಕಾರ್ಖಾನೆಗಳಿಗೆ ಅನುಮತಿ ಕೊಟ್ಟಿದೆ. ನಾವು ಇದನ್ನು ಇಲ್ಲಿಗೆ ಬಿಡಲ್ಲ, ಹೋರಾಟ ಮಾಡ್ತೇವೆ. ಈ ಕಾರ್ಖಾನೆ ನಂಬಿ ಸಾವಿರಾರು ರೈತರು ಇದ್ದಾರೆ. ಈ ಸಲ ಆ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆದಿದ್ದಾರೆ. ಈಗ ಕಾರ್ಖಾನೆ ತೆರೆಯಬೇಕಿದೆ. ಸರ್ಕಾರ ಒಂದು ಕಡೆ ಉತ್ತರ ಕರ್ನಾಟಕ ಕಡೆ ಕೈಗಾರಿಕೆಗಳು ಬರಬೇಕು ಅನ್ನುತ್ತದೆ. ಆದರೆ ಇನ್ನೊಂದು ಕಡೆ ಈ ರೀತಿಯ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ಕೊಟ್ಟಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿ ಸ್ವಾಯತ್ತ ಮಂಡಳಿ. ಆದರೆ ಇದಕ್ಕೆ ಸ್ವಾಯತ್ತ ಇಲ್ಲ. ಸರ್ಕಾರ, ಮಂತ್ರಿಗಳ ಪ್ರಭಾವವಿದೆ. ಮಂಡಳಿ ಅಧಿಕಾರಿಗಳು ಎಲ್ಲದಕ್ಕೂ ಮಂತ್ರಿಗಳ ಕಡೆ ನೋಡುತ್ತಿದ್ದಾರೆ. ಪಿಸಿಬಿಯಲ್ಲಿ ಸೂಟು ಬೂಟು ಧರಿಸಿ ಸೂಟ್‌ಕೇಸ್‌ ಹಿಡಿದು ಬಂದವರಿಗೆ ಮಾತ್ರ ಅವಕಾಶ ಎನ್ನುವಂತಾಗಿದೆ ಎಂದು ಟೀಕಿಸಿದರು.

ಕೋರ್ಟ್ ಆದೇಶವಾಗಿ ಒಂದು ವಾರವಾದರೂ ಆದೇಶ ಪ್ರತಿ ಬಂದಿಲ್ಲ ಅಂತಾರೆ ಪಿಸಿಬಿ ಅಧ್ಯಕ್ಷರು. ಕೋರ್ಟ್ ಆದೇಶದ ಅಧಿಕೃತ ಪ್ರತಿ ಕೊಟ್ಟರೂ ಅನುಮತಿ ಕೊಡ್ತಿಲ್ಲ. ಪಿಸಿಬಿ ಅಧ್ಯಕ್ಷರು ಕಾಣೆಯಾಗಿದ್ದಾರೆ. ನಾವೆಲ್ಲ ಬಂದಿದ್ದರೂ ತಪ್ಪಿಸಿಕೊಂಡು ಕಳ್ಳನ ತರ ಹೋಗಿದ್ದಾರೆ. ಸರ್ಕಾರದ ಒತ್ತಡ ಇದೆ. ಅನುಮತಿ ಕೊಡ್ತಿಲ್ಲ ಅಂತ ಪಿಸಿಬಿ ಅಧ್ಯಕ್ಷರು ಹೇಳಲಿ ಎಂದರು.

ಯತ್ನಾಳ್ ಅವರಿಗೆ ತೊಂದರೆ ಕೊಡಬೇಕು ಅಂತಾನೇ ಅನುಮತಿ ಕೊಡ್ತಿಲ್ಲ. ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಇವರಿಗೆ ನಾಚಿಕೆ ಇಲ್ಲ‌, ಪಿಸಿಬಿ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಸ್ತಕ್ಷೇಪಕ್ಕೆ ಅವಕಾಶವೂ ಇಲ್ಲ. ಆದರೂ ಸರ್ಕಾರ ರಾಜಕೀಯ ಮಾಡ್ತಿದೆ. ಯತ್ನಾಳ್​ಗೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ರೈತರ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡಬಾರದು: ಎಂಎಲ್​ಸಿ ಸಿ ಟಿ ರವಿ ಮಾತನಾಡಿ, ಕಲ್ಯಾಣ ಕರ್ನಾಟಕದ ರೈತರ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡಬಾರದು. ನಿಮ್ಮ ಪಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಅನುಮತಿ ಕೊಟ್ಟರೆ ಸರಿ. ಇಲ್ಲದಿದ್ರೆ ಹೇಗೆ ಅನುಮತಿ ತಗೋಬೇಕು ಅಂತ ನಮಗೆ ಗೊತ್ತಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು‌. ಇನ್ವೆಸ್ಟ್ ಕರ್ನಾಟಕ ಅಂತೀರಿ, ಹೀಗೆ ಕಿರುಕುಳ ಕೊಟ್ರೆ ಇನ್ವೆಸ್ಟ್ ಮಾಡೋಕ್ಕೆ ಯಾರು ಬರ್ತಾರೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಸಕ್ಕರೆ ಕಾರ್ಖಾನೆಗೆ ಸಿಗದ ಅನುಮತಿ: ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಯತ್ನಾಳ್ ಧರಣಿ: ಆರ್​.ಅಶೋಕ್ ಹೋರಾಟ ಎಚ್ಚರಿಕೆ - MLA Yatnal Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.