ETV Bharat / state

ಸವದತ್ತಿ ಯಲ್ಲಮ್ಮದೇವಿ ಹುಂಡಿ ಎಣಿಕೆ: ₹11.23 ಕೋಟಿ ಕಾಣಿಕೆ ಸಂಗ್ರಹ - Savadatti Yellamma Temple - SAVADATTI YELLAMMA TEMPLE

ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿದೇವತೆ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದೆ.

Etv Bharat
Etv Bharat
author img

By ETV Bharat Karnataka Team

Published : Mar 29, 2024, 2:21 PM IST

Updated : Mar 29, 2024, 3:28 PM IST

ಸವದತ್ತಿ ಯಲ್ಲಮ್ಮದೇವಿ ಹುಂಡಿ ಎಣಿಕೆ

ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡ. ಈ ಬಾರಿ ಭೀಕರ ಬರಗಾಲವಿದ್ದರೂ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭರಪೂರ ಕಾಣಿಕೆ ಹರಿದು ಬಂದಿದೆ. ಈ ಹಿಂದಿನ ವರ್ಷಕ್ಕಿಂತ ಕಾಣಿಕೆಯಲ್ಲಿ 2 ಕೋಟಿ ರೂ ಹೆಚ್ಚಳವಾಗಿದೆ.

ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ 2023 ಮತ್ತು 24ರ ಸಾಲಿನಲ್ಲಿ ಒಟ್ಟು 11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 2.40 ಕೋಟಿ ರೂ ಕಾಣಿಕೆ ಹೆಚ್ಚಿದೆ. ಜಿಲ್ಲೆ, ಹೊರ ಜಿಲ್ಲೆಗಳೂ ಸೇರಿ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತರು ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹುಂಡಿಯಲ್ಲಿ ಹಾಕಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ.

2022-23ರಲ್ಲಿ 8.01 ಕೋಟಿ ರೂ. ನಗದು, 66.28 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 15.43 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳೂ ಸೇರಿದಂತೆ ಒಟ್ಟು 8.83 ಕೋಟಿ ಕಾಣಿಕೆಯನ್ನು ಭಕ್ತರು ದೇವಿಗೆ ಅರ್ಪಿಸಿದ್ದರು. 2023-24ರಲ್ಲಿ 10.22 ಕೋಟಿ ರೂ. ನಗದು, 84.14 ಲಕ್ಷ ಚಿನ್ನ ಮತ್ತು 16.65 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಹುಂಡಿಯಲ್ಲಿ ಹಾಕಿ ಯಲ್ಲಮ್ಮನ ಭಕ್ತರು‌ ಭಕ್ತಿ ಮೆರೆದಿದ್ದಾರೆ. ಕೆನಡಾ, ಸೌದಿ ಅರೇಬಿಯಾ ದೇಶಗಳ ನೋಟ್​ಗಳು ಕೂಡ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.

ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‍ಪಿಬಿ ಮಹೇಶ್ ಈ ಕುರಿತು ಪ್ರತಿಕ್ರಿಯಿಸಿ, "ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದೇವಸ್ಥಾನಕ್ಕೆ ಬಂದ ಆದಾಯ ಹೆಚ್ಚಿದೆ. ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ರೂಪಿಸಿದ್ದೇವೆ. ಅದಕ್ಕೆ ಸರ್ಕಾರದಿಂದ ಅನುಮೋದನೆ ಪಡೆದು, ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ: ಮಸೀದಿ ಮುಂದೆ ಕೊಂಡ ಹಾಯ್ದು ಭಾವೈಕ್ಯತೆ - Maramma Fair

Last Updated : Mar 29, 2024, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.