ETV Bharat / state

ಶತಾಯುಷಿ ತಾತನ ಜೊತೆ ಸಾಗರ್ ಖಂಡ್ರೆ ಮತದಾನ: ಉಮೇಶ ಜಾಧವ್​, ಈ.ತುಕರಾಂ, ಶ್ರೀರಾಮುಲು ವೋಟ್​​ - lok sabha voting - LOK SABHA VOTING

ಬೀದರ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ತಾತ ಹಾಗೂ ತಂದೆ ಜತೆ ಮತ ಚಲಾಯಿಸಿದರೆ, ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕರಾಂ, ಮತ್ತು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮತದಾನದ ಹಕ್ಕು ಚಲಾಯಿಸಿದರು.

ತಾತನ ಜೊತೆ ಸಾಗರ್ ಖಂಡ್ರೆ,  ಉಮೇಶ ಜಾಧವ್,  ಶ್ರೀರಾಮುಲು ಮತದಾನ
ತಾತನ ಜೊತೆ ಸಾಗರ್ ಖಂಡ್ರೆ, ಉಮೇಶ ಜಾಧವ್, ಶ್ರೀರಾಮುಲು ಮತದಾನ (ETV Bharat)
author img

By ETV Bharat Karnataka Team

Published : May 7, 2024, 1:37 PM IST

Updated : May 7, 2024, 3:31 PM IST

ಬೀದರ್​: ಲೋಕಸಭಾ ಕ್ಷೇತ್ರದಲ್ಲಿ ಶತಾಯುಷಿ ಡಾ. ಭೀಮಣ್ಣ ಖಂಡ್ರೆ, ಅವರ ಮಗ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಮೊಮ್ಮಗ ಬೀದರ್ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಮತ ಚಲಾಯಿಸಿದರು.

ಕಲಬುರಗಿಯಲ್ಲಿ ಉಮೇಶ್ ಜಾಧವ್​ ಮತದಾನ: ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್​ ಅವರು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಣೇತ್ರದ ಮತಗಟ್ಟೆ ಸಂಖ್ಯೆ 93ರಲ್ಲಿ ಮತ ಚಲಾಯಿಸಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್​, ಬಿಜೆಪಿ ಅಭ್ಯರ್ಥಿ ವೋಟಿಂಗ್​​: ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ.ತುಕರಾಂ ತಮ್ಮ ಸ್ವಕ್ಷೇತ್ರ ಬಳ್ಳಾರಿಯ ಸಂಡೂರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಬಳಿಕ ಪ್ರತಿಯೊಬ್ಬರು ತಪ್ಪದೇ ಮತ ಹಾಕುವಂತೆ ಮನವಿ ಮಾಡಿದರು.

ಕಾಂಗ್ರೆಸ್​ ಅಭ್ಯರ್ಥಿ ಈ.ತುಕರಾಂ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಕುಟುಂಬ ಸಮೇತ ಮತ ಚಲಾಯಿಸಿದರು​​ (ETV Bharat)

ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ದೇವಿನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರುವ ಮತಕೇಂದ್ರಕ್ಕೆ ಪತ್ನಿ, ಪುತ್ರನ ಜೊತೆ ಆಗಮಿಸಿ ವೋಟ್​ ಮಾಡಿದರು. ಈ ವೇಳೆ ಮಾಜಿ ಮೇಯರ್ ಹಾಲುಮತ ಸಮಾಜದ ಮುಖಂಡ ಹನುಮಂತಪ್ಪ ಆರೋಗ್ಯ ವಿಚಾರಿಸಿದ್ದಲ್ಲದೇ, ಅವರ ಕಾಲಿಗೆ ನಮಸ್ಕರಿಸಿದರು.

ಇದನ್ನೂ ಓದಿ: ಒಂದೇ ಮತಗಟ್ಟೆಯಲ್ಲಿ ಮೂರು ತಲೆಮಾರಿನ ಜನ: ಅಜ್ಜಿ, ಮಗಳು, ಮೊಮ್ಮಗಳಿಂದ ವೋಟಿಂಗ್ - Hubballi Voting

Last Updated : May 7, 2024, 3:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.