ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಹತ್ಯೆ ಮರೆಮಾಚಲು ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗ - Renukaswamy murder case - RENUKASWAMY MURDER CASE

ರೇಣುಕಾಸ್ವಾಮಿ ಹತ್ಯೆ ಮಾರೆಮಾಚಲು ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಕೆಲ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅವರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಸುರಕ್ಷಿತ ದೃಷ್ಟಿಯಿಂದ ಅವರ ಹೆಸರನ್ನು ಗೋಪ್ಯತೆ ಕಾಪಾಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ.

RENUKASWAMY MURDER CASE
ಮೃತ ರೇಣುಕಾಸ್ವಾಮಿ (ETV Bharat)
author img

By ETV Bharat Karnataka Team

Published : Jun 22, 2024, 7:41 PM IST

Updated : Jun 22, 2024, 7:54 PM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಮಂದಿ ಆರೋಪಿಗಳಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ದಾರಿ ತೋರಿಸಿದ್ದು, ಹತ್ಯೆಯನ್ನು ಮರೆಮಾಚಲು ಬಂಧಿತ ಆರೋಪಿಗಳು ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಜೂನ್ 8ರಂದು ಪಟ್ಟಣಗೆರೆಯ ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ಆರೋಪಿಗಳು ಅಮಾನುಷವಾಗಿ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ, ಮೃತನು ಧರಿಸಿದ್ದ ಬಟ್ಟೆ ಕಳಚಿ ಅದನ್ನು ಬೇರೆಡೆ ಬಿಸಾಕುವಂತೆ ಮಾಡಿದ್ದರು. ಬಳಿಕ ಕೃತ್ಯದ ಬಗ್ಗೆ ಹೇಳದಂತೆ ಬಂಧಿತ ಆರೋಪಿಗಳು ಬೆದರಿಕೆ ಹಾಕಿರುವ ಬಗ್ಗೆ ತನಿಖೆಯಲ್ಲಿ ರೀವಿಲ್ ಆಗಿದೆ.

ಹತ್ಯೆ ಬಳಿಕ ಮೃತನ ಬಟ್ಟೆಯನ್ನು ಬದಲಾಯಿಸಿದ ಆರೋಪಿಗಳು ಹಾಗೂ ಕೆಲವರು ಬೇರೆಡೆ ಎಸೆದು ಸಾಕ್ಷ್ಯ ನಾಶಪಡಿಸಿದ್ದರು. ಮೃತನು ಧರಿಸಿದ್ದ ಪ್ಯಾಂಟ್ ಎಸೆದಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ಸಾಕ್ಷಿದಾರನಾಗಿ ಮಾಡಲಾಗಿದೆ. ಪ್ರಕರಣದಲ್ಲಿ ಕೆಲ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಅವರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದು ಸುರಕ್ಷಿತೆ ದೃಷ್ಟಿಯಿಂದ ಅವರ ಹೆಸರನ್ನು ಗೋಪ್ಯತೆ ಕಾಪಾಡಿರುವುದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಕೆಲ ಸಾಕ್ಷಿದಾರರನ್ನು ಸಿಆರ್​ಪಿಸಿ 164ರಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಮೊಬೈಲ್ ಜಪ್ತಿ: ಪ್ರಕರಣದಲ್ಲಿ ತಮ್ಮ ಹೆಸರು ಬರದಂತೆ ವ್ಯಕ್ತಿಯೊಬ್ಬನಿಂದ 40 ಲಕ್ಷ ರೂಪಾಯಿ ಸಾಲ ಪಡೆದಿರುವ ಬಗ್ಗೆ ತನಿಖೆಯಲ್ಲಿ ಬಯಲಾಗಿತ್ತು. ಹಣದ ಮೂಲ ಪತ್ತೆ ಹಚ್ಚಲು ಎರಡು ದಿನಗಳ ಕಾಲ ಮೂರನೇ ಬಾರಿ ಪೊಲೀಸ್ ಕಸ್ಟಡಿ ಪಡೆದಿದ್ದ ಪೊಲೀಸರು, ದರ್ಶನ್ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡೇಟಾ ನಿಷ್ಕ್ರಿಯಗೊಳಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ಮತ್ತೆ ರೀ-ಆಕ್ಸಿಸ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಮೃತ ರೇಣುಕಾಸ್ವಾಮಿಯ ಮೊಬೈಲ್ ಅನ್ನು ಅರೋಪಿಗಳು ಸಾಕ್ಷ್ಯ ನಾಶಪಡಿಸಲು ಉದ್ದೇಶದಿಂದ ಸುಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದು, ಆತನ ಮೊಬೈಲ್ ಡೇಟಾವನ್ನ ನಿಷ್ಕ್ರಿಯಗೊಳಿಸಿದ್ದು ಮೃತನ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್ ಸರ್ವೀಸ್ ಪ್ರೊವೈಡರ್​ಗಳಿಂದ ಖರೀದಿಸಿ ಪರಿಶೀಲಿಸಬೇಕಿದೆ ಎಂದು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿದ್ದಾರೆ.

40 ಲಕ್ಷ ಹಣದ ಮೂಲದ ಬಗ್ಗೆ ಮಾಹಿತಿ ನೀಡಿದ ದರ್ಶನ್: ಪ್ರಕರಣದಲ್ಲಿ ಕೈವಾಡವಿಲ್ಲದಂತೆ ಮಾಡಲು ವ್ಯಕ್ತಿಯಿಂದ 40 ಲಕ್ಷ ಸಾಲ ಪಡೆದಿರುವ ಬಗ್ಗೆ ವಿಚಾರಣೆಯಲ್ಲಿ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾರೆ. ಹಣದ ಮೂಲದ ಬಗ್ಗೆ ಹೇಳಿಕೆ ನೀಡಿದ್ದು, ಆ ವ್ಯಕ್ತಿಯ ಬಗ್ಗೆ ವಿಚಾರಣೆ ನಡೆಸಬೇಕಿದೆ. ಪ್ರಕರಣದ 14ನೇ ಆರೋಪಿ ಪ್ರದೂಷ್ ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನ ವಿಚಾರಣೆಗೊಳಪಡಿಸಬೇಕಿದೆ. ಪ್ರಕರಣದ 9ನೇ ಆರೋಪಿ ಧನರಾಜ್ ಸಹ ಎಲೆಕ್ಟ್ರಿಕಲ್ ಟಾರ್ಚ್ ಶಾಕ್ ಅನ್ನ ಆನ್​ಲೈನ್​ನಲ್ಲಿ ಖರೀದಿಸಿ ಹಣ ಸಂದಾಯ ಮಾಡಿದ್ದು, ಇದರ ದಾಖಲಾತಿಗಳನ್ನು ಪಡೆದುಕೊಳ್ಳಬೇಕಿದೆ. ಅಲ್ಲದೆ ಕೆಲ ಸಾಕ್ಷಿದಾರರನ್ನು 164ರಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್ ಸಹಚರರ ಮೇಲೆ ಜೈಲಿನಲ್ಲಿ ಹಲ್ಲೆ ಸಾಧ್ಯತೆ: ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿರುವ ಸಹ ಆರೋಪಿಗಳಿಗೆ ದರ್ಶನ್ ಬಗ್ಗೆ ಅಭಿಮಾನವಿರುವ ವಿಚಾರಣಾಧೀನ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಯಿದೆ. ಕೆಲ ವಿಚಾರಣಾಧೀನ ಕೈದಿಗಳ ಹೆಸರನ್ನು ಗೋಪ್ಯತೆ ಕಾಪಾಡಿಕೊಂಡಿರುವ ಪೊಲೀಸರು, ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಜೈಲು ಸೇರಿರುವ ದರ್ಶನ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ದರ್ಶನ್ (6106), ಧನರಾಜ್ (6107), ವಿನಯ್ (6108) ಹಾಗೂ ಪ್ರದೂಶ್ (6109) ಗೆ ಯುಟಿಪಿ ಸಂಖ್ಯೆ ನೀಡಲಾಗಿದೆ.

ಇದನ್ನೂ ಓದಿ: ದರ್ಶನ್‌ಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರದ ಸುತ್ತಮುತ್ತ ಸಾರ್ವಜನಿಕರಿಗೆ ನಿಷೇಧ! - Renukaswamy Murder Case

Last Updated : Jun 22, 2024, 7:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.