ETV Bharat / state

ಕೇಂದ್ರದ ಮಧ್ಯಂತರ ಬಜೆಟ್: ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ - ಮಧ್ಯಂತರ ಬಜೆಟ್ ಮಂಡನೆ

ಕೇಂದ್ರದ ಮಧ್ಯಂತರ ಬಜೆಟ್​ ಕುರಿತು ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಜೆಟ್ ಕುರಿತು ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

author img

By ETV Bharat Karnataka Team

Published : Feb 1, 2024, 3:49 PM IST

ಹುಬ್ಬಳ್ಳಿ: ಕೇಂದ್ರದ ಬಜೆಟ್​ ಕುರಿತು ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯಂತರ ಬಜೆಟ್​ನಲ್ಲಿ ಪ್ರಮುಖವಾಗಗಿ ನಾಲ್ಕು ಸೆಕ್ಟರ್​ಗಳಿಗೆ ಆದ್ಯತೆ ನೀಡಲಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಫಲಕ ಅಳವಡಿಕೆ, ಮಹಿಳೆಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆ, ಯುವ ಜನತೆಗೆ ಆದ್ಯತೆ, ಬಡವರಿಗೆ ಮನೆ ನಿರ್ಮಾಣದ ಬಗ್ಗೆ ಬಜೆಟ್​ನಲ್ಲಿ ಉಲ್ಲೇಖಿಸಲಾಗಿದೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್ ಪಿ ಸಂಶಿಮಠ, ಜಿಎಸ್‌ಟಿಯಲ್ಲಿ ಸರಳೀಕರಣ ಮಾಡ್ತಾರೆ ಅಂತ ಅಂದುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಇದೊಂದು ಮಧ್ಯಂತರ ಬಜೆಟ್ ಆಗಿರುವುದರಿಂದ ವಿಶೇಷವೇನು ಇಲ್ಲ. ಹಳೇ ಯೋಜನೆಗಳನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ.‌ ಇದೊಂದು ಸಾಮಾನ್ಯ ಬಜೆಟ್ ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ಪ್ರಸ್ತಾವನೆ ಇಲ್ಲದ್ದಕ್ಕೆ ಬೇಸರ: ಇದೇ ವೇಳೆ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ವೈ ಎಂ ಕಟಾವಕರ್, ಈ ಬಜೆಟ್​ನಲ್ಲಿ ಆದಯಾ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾವನೆ ಆಗಿಲ್ಲ. ಹಿಂದಿನ ವರ್ಷ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ತೆರಿಗೆ ವಿನಾಯಿತಿಯನ್ನು ಮುಂದು ವರೆಸಿದ್ದಾರೆ. ಜಿಎಸ್​ಟಿ ಬಗ್ಗೆ ನಿರೀಕ್ಷೆ ಇತ್ತು. ಇದನ್ನು ತಗೆದುಕೊಂಡಿಲ್ಲ. ಹೀಗಾಗಿ ಕೈಗಾರಿಕೋದ್ಯಮಿಗಳಿಗೆ ಅಸಮಾಧಾನವಾಗಿದೆ‌. ಮುಂಬರು ಬಜೆಟ್​ನಲ್ಲಾದರೂ ಈ ಬಗ್ಗೆ ಗಮನ ಹರಿಸಿ ಪ್ರಸ್ತಾವನೆ ಮಾಡಬೇಕಿದೆ. ಉಳಿದಂತೆ ಇದರಲ್ಲಿ ಯಾವುದೇ ಗ್ಯಾರಂಟಿಗಳ ಘೋಷಣೆಯಾಗಿಲ್ಲ. ಉಚಿತ ಭಾಗ್ಯಗಳ ಘೋಷಣೆಯಾಗಿಲ್ಲ. ಯಾವುದೇ ವಿನಾಯಿತಿ‌ ಘೋಷಣೆಗಯಾಗದಿರುವುದು ಬಜೆಟ್​ನ ವಿಶೇಷವಾಗಿದೆ. ಇದೊಂದು ಯಥಾಸ್ಥಿತಿಯ ಬಜೆಟ್ ಆಗಿದೆ ಎಂದು ಹೇಳಿದರು.

ಪೂರ್ಣ ಪ್ರಮಾಣದ ಬಜೆಟ್​ ಕೊಡಬಹುದಿತ್ತು: ಪೂರ್ಣಪ್ರಮಾಣದ ಬಜೆಟ್ ಕೊಡಲು ಅವಕಾಶವಿತ್ತು. ಆದರೆ ಕೊಡದಿರುವುದು ವಿಷಾದನೀಯ ಎಂದು ವಾಣಿಜೋದ್ಯಮ ಸಂಸ್ಥೆ ಜಂಟಿ‌ಕಾರ್ಯದರ್ಶಿ ಮಹೇಂದ್ರ ಸಿಂಘಿ ಹೇಳಿದರು. ಜಿಎಸ್​ಟಿ ಸರಳೀಕರಣ ಮಾಡಬೇಕಿತ್ತು. ರೈಲ್ವೆಯಲ್ಲಿ ಮೂರು ಕಾರಿಡಾರ್​ಗಳನ್ನು ಘೋಷಣೆ ಮಾಡಿದ್ದು ಸ್ವಾಗತ. ಪ್ರವಾಸೋದ್ಯಮಕ್ಕೆ ಒತ್ತು ಕೊಡುವುದಾಗಿ ಹೇಳಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳಿಗೆ ಒತ್ತುಕೊಟ್ಟರೆ ಒಳ್ಳೆಯದಾಗುತ್ತೆ. ಮೂರು ಕಾರಿಡಾರ್ ಒತ್ತು ಕೊಡುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಿಮೆಂಟ್ ಉದ್ಯಮಗಳು ಹೆಚ್ಚಿರುವುದರಿಂದ ಸಿಮೆಂಟ್ ಕಾರಿಡಾರ್ ಮಾಡಬೇಕು. ಟೈರ್​ 2 ಸಿಟಿಗಳಲ್ಲಿಯೂ ಮೆಟ್ರೋ ಯೋಜನೆ ಜಾರಿಗೆ ತರುವ ಕುರಿತು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಬಜೆಟ್ ಮಂಡನೆ ಆಗಿಲ್ಲ. ಹೀಗಾಗಿ ಹೆಚ್ಚಿನದನ್ನು ನಿರೀಕ್ಷೆ ಮಾಡುವಂತಿಲ್ಲ. ಚುನಾವಣೆ ನಂತರ ಇದರಲ್ಲಿ ಹಲವಾರು ಬದಲಾವಣೆಗಳ ನಿರೀಕ್ಷಿಸಿದ್ದೇವೆ ಎಂದರು.

ಇನ್ನು ಈ ಮಧ್ಯಂತರ ಬಜೆಟ್​ನಲ್ಲಿ, ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕಳೆದ ವರ್ಷದ ಘೋಷಣೆಯಂತೆ ಈ ವರ್ಷವೂ 7ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ನೀತಿಯಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ.

ಇದನ್ನೂ ಓದಿ: ರೈಲ್ವೆಯಲ್ಲಿ ಭಾರಿ ಬದಲಾವಣೆಗೆ ಬಜೆಟ್​​ನಲ್ಲಿ ಮುನ್ನುಡಿ: ಮೂರು ರೈಲ್ವೆ ಕಾರಿಡಾರ್​ಗಳ​ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.