ETV Bharat / state

ಮತಗಟ್ಟೆ ಧ್ವಂಸ ಮಾಡಿದ್ದ ಇಂಡಿಗನತ್ತದಲ್ಲಿ ಮರು ಮತದಾನ: ಬೆಳಗ್ಗೆ 10 ರವರೆಗೆ 54 ಮಂದಿಯಿಂದ ಹಕ್ಕು ಚಲಾವಣೆ - Re Voting In Indiganatta - RE VOTING IN INDIGANATTA

ಮತಗಟ್ಟೆ ಧ್ವಂಸ ಮಾಡಿದ್ದ ಗ್ರಾಮದಲ್ಲಿ ಮರು ಮತದಾನ ಆರಂಭವಾಗಿದ್ದು, ಈವರೆಗೆ 54 ಮಂದಿ ಹಕ್ಕು ಚಲಾಯಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Apr 29, 2024, 10:32 AM IST

Updated : Apr 29, 2024, 10:41 AM IST

ಚಾಮರಾಜನಗರ: ಲೋಕಸಭಾ ಚುನಾವಣೆ-2024 ಮತದಾನ ಬಹಿಷ್ಕಾರ ಮಾಡಿ, ಮತಗಟ್ಟೆಯನ್ನೇ ಧ್ಚಂಸಗೊಳಿಸಿದ್ದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಇಂದು ಮರು ಮತದಾನ ಆರಂಭವಾಗಿದೆ. ಇಂಡಿಗನತ್ತ ಗ್ರಾಮದ ಮತಗಟ್ಟೆ 146 ರಲ್ಲಿ 528 ಮತದಾರರಿದ್ದು, ಬೆಳಗ್ಗೆ 10 ರವರೆಗೆ ಮೆಂದಾರೆ ಗ್ರಾಮದ ಒಟ್ಟು 54 ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾರರು ಮತ ಚಲಾಯಿಸಲು ಮತಗಟ್ಟೆಗಳತ್ತ ಬರುತ್ತಿದ್ದಾರೆ.

ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಎಸ್ಪಿ ಉದೇಶ್, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗ್ರಾಮದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಮತಹಕ್ಕು ಚಲಾಯಿಸಲು ಜನರಿಗೆ ಧೈರ್ಯ ತುಂಬಲಾಗಿದೆ.

ಇಂಡಿಗನತ್ತದಲ್ಲಿ ಮರು ಮತದಾನ
ಇಂಡಿಗನತ್ತದಲ್ಲಿ ಮರು ಮತದಾನ

ಮೂಲ ಸೌಕರ್ಯ ಕೊರತೆ ಇದ್ದರೂ ಸಹ ಯಾರೂ ಇದುವರೆಗೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ, ತುಳಿಸಿಕರೆ, ತೇಕಣೆ, ಪಡಸಲನತ್ತ ಗ್ರಾಮಗಳಲ್ಲಿ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದರು. ಅಂತೆಯೇ ಶುಕ್ರವಾರ (ಏ.26) ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿರಲಿಲ್ಲ. ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ಗ್ರಾಮದ ಕೆಲ ಯುವಕರು ಮತಗಟ್ಟೆಯನ್ನೇ ಧ್ವಂಸ ಮಾಡಿದ ಘಟನೆ ನಡೆದಿತ್ತು. ಈ ಸಂಬಂಧ ಪೊಲೀಸರು ದೂರು ದಾಖಲಿಸಿ, 25 ಜನರನ್ನು ಬಂಧಿಸಿದ್ದರು.

ಇಂಡಿಗನತ್ತದಲ್ಲಿ ಮರು ಮತದಾನ
ಇಂಡಿಗನತ್ತದಲ್ಲಿ ಮರು ಮತದಾನ

ಇದನ್ನೂ ಓದಿ: ಮತಗಟ್ಟೆ ಧ್ವಂಸ ಪ್ರಕರಣ: 25 ಆರೋಪಿಗಳ ಬಂಧನ, ಗ್ರಾಮವೇ ಖಾಲಿ ಖಾಲಿ! - Polling booth vandalism case

ಇದನ್ನೂ ಓದಿ: ಎಲ್ಲೆಡೆ ಬಿರುಸಿನಿಂದ ಸಾಗಿದ ಮತದಾನ; ಈ ಹಳ್ಳಿಗಳಲ್ಲಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು - Boycott of Voting

Last Updated : Apr 29, 2024, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.