ETV Bharat / state

ರಾಮೋಜಿ ರಾವ್ ಮಾಧ್ಯಮ ಕ್ಷೇತ್ರದ ನಿಜವಾದ 'ಭಾರತ ರತ್ನ': ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ - Tribute To Ramoji Rao

author img

By ETV Bharat Karnataka Team

Published : Jun 19, 2024, 5:51 PM IST

Updated : Jun 19, 2024, 5:59 PM IST

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಮಾಧ್ಯಮ ಲೋಕದ ದಿಗ್ಗಜ ದಿ.ರಾಮೋಜಿ ರಾವ್ ಹಾಗೂ ಹಿರಿಯ ಪತ್ರಕರ್ತ ದಿ.ಮತ್ತಿಹಳ್ಳಿ ಮದನ ಮೋಹನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

tribute program of Ramoji Rao and Mattihalli Madana Mohan.
ದಿ.ರಾಮೋಜಿ ರಾವ್, ದಿ.ಮತ್ತಿಹಳ್ಳಿ ಮದನ ಮೋಹನ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ (ETV Bharat)

ದಿ.ರಾಮೋಜಿ ರಾವ್, ದಿ.ಮತ್ತಿಹಳ್ಳಿ ಮದನ ಮೋಹನ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತ್ರಕರ್ತ ರವಿಕುಮಾರ್ ಮಾತನಾಡಿದರು. (ETV Bharat)

ಬೆಂಗಳೂರು: ದೇಶದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ಕೊಟ್ಟು, ತಾವು ಸ್ಥಾಪಿಸಿದ ಎಲ್ಲ ಉದ್ಯಮಗಳಲ್ಲೂ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಬದುಕಿನ ಪಾಠ ಕಲಿಸಿದ ರಾಮೋಜಿ ರಾವ್ ಅವರು ನಿಜವಾದ 'ಭಾರತ ರತ್ನ' ಎಂದು ನ್ಯೂಸ್ ಫಸ್ಟ್ ಕನ್ನಡ ವಾಹಿನಿ ಸಿಇಒ ರವಿಕುಮಾರ್ ಹೇಳಿದರು.

ಇತ್ತೀಚೆಗೆ ಇಹಲೋಕ ತ್ಯಜಿಸಿದ ಮಾಧ್ಯಮ ರಂಗದ ಹಿರಿಯರಾದ ರಾಮೋಜಿ ರಾವ್ ಹಾಗೂ ಮತ್ತಿಹಳ್ಳಿ ಮದನ ಮೋಹನ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

''ರಾಮೋಜಿ ರಾವ್ ಅವರಲ್ಲಿದ್ದ ಹಠ, ಛಲ, ಅರ್ಪಣಾ ಮನೋಭಾವದ ಧ್ಯೇಯಗಳು ನನ್ನನ್ನು ಆಕರ್ಷಿಸಿದವು. ಅದನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ. 'ಪ್ರಿಯ' ಉಪ್ಪಿನಕಾಯಿ ಉದ್ಯಮದಿಂದ ಮಾಧ್ಯಮವರೆಗೂ ಎಲ್ಲ ಉದ್ಯಮಗಳಲ್ಲೂ ಅವರು ಯಶಸ್ಸು ಸಾಧಿಸಿದವರು. ಅವರ ಯೋಜನೆಗಳು ಹಾಗೂ ಯೋಚನಾ ಲಹರಿ ನನ್ನನ್ನು ಮಂತ್ರಮುಗ್ಧವಾಗಿಸಿದೆ. ನನ್ನಂತಹ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಬದುಕು ರೂಪಿಸಿದರು'' ಎಂದು ಸ್ಮರಿಸಿದರು.

ವಯಸ್ಸು, ಅನುಭವವಲ್ಲ; ಉತ್ಸಾಹಿಗಳಿಗೆ ಮನ್ನಣೆ: ''ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಬೇಕೆಂಬ ಹಂಬಲದೊಂದಿಗೆ ನಾನು ಹೈದರಾಬಾದ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಈಟಿವಿ' ತೆಲುಗು ವಾಹಿನಿಯಲ್ಲಿ ಕೆಲಸಕ್ಕೆ ಸೇರಿ ತರಬೇತಿ ಪಡೆದುಕೊಂಡೆ. ಇದಾದ ಮೂರು ವರ್ಷಗಳಲ್ಲಿ ಆರಂಭವಾದ 'ಈಟಿವಿ' ಕನ್ನಡ ವಾಹಿನಿಯಲ್ಲಿ ನನಗೆ ರಾಮೋಜಿ ರಾವ್ ಅವರು ಕೆಲಸ ನೀಡಿದರು. ಬಳಿಕ ಗುಜರಾತಿ, ಮಧ್ಯಪ್ರದೇಶ ಡೆಸ್ಕ್ ತರಬೇತಿಯನ್ನು ನನ್ನಿಂದ ಕೊಡಿಸಿದರು. 'ಈಟಿವಿ' ಸಂಸ್ಥೆಯಲ್ಲಿ 7 ಏಳು ವರ್ಷಗಳ ಕೆಲಸ ಮಾಡಿ ಅನುಭವ ಪಡೆದುಕೊಂಡೆ. ರಾಮೋಜಿ ರಾವ್ ಅವರು ಎಂದಿಗೂ ವಯಸ್ಸು, ಅನುಭವ ನೋಡುತ್ತಿರಲಿಲ್ಲ‌‌. ಕೆಲಸ ಮಾಡುವ ಸಾಮರ್ಥ್ಯ ಹಾಗೂ ಉತ್ಸಾಹವಿದ್ದವರಿಗೆ ಮಾತ್ರ ಕೆಲಸ ನೀಡುತ್ತಿದ್ದರು'' ಎಂದು ರವಿಕುಮಾರ್ ಮೆಲುಕು ಹಾಕಿದರು.

''ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು 'ಈನಾಡು' ಪತ್ರಿಕೆ ಓದುತ್ತಿದ್ದ ಅವರು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಿ ಎಲ್ಲಿಲ್ಲಿ ಯಾವ ಸುದ್ದಿ ಎಲ್ಲಿ ಬರಬೇಕು, ತಪ್ಪಾಗಿರುವ ಬಗ್ಗೆ ಮಾರ್ಕ್ ಮಾಡಿ ಕಳುಹಿಸುತ್ತಿದ್ದರು. ಇದು ಅವರಲ್ಲಿದ್ದ ಬದ್ಧತೆಯನ್ನು ತೋರಿಸುತ್ತಿತ್ತು. ರಾಮೋಜಿ ರಾವ್ ದೇಶದ 13 ವಾಹಿನಿ​ಗಳನ್ನು ಒಬ್ಬರೇ ನಿರ್ವಹಿಸುತಿದ್ದರು. ಜನರು ಸುದ್ಧಿ ನೋಡಿ ಮತ್ತೆ, ಮತ್ತೆ ನಮ್ಮ ವಾಹಿನಿ ನೋಡಲು ಬರಬೇಕು. ಈ ಮೂಲಕ ಲಾಯಲ್ ವ್ಯೂವರ್‌ಶಿಪ್ ಇರಬೇಕು. ಯಾವುದೇ ಪ್ರಮೋಷನ್ ಇಲ್ಲದೇ‌ ನಮ್ಮ ವಾಹಿನಿ ನೋಡುವಂತಾಗಬೇಕು.‌ ಎಂಟರ್​ಟೈನ್​ಮೆಂಟ್​ಗಿಂತ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು'' ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

ಸಂಪಾದಕೀಯ ಸ್ವಾತಂತ್ರ್ಯ-ಜಿ.ಎನ್.ಮೋಹನ್: ಅವಧಿ ಡಾಟ್ ಇನ್ ಸಂಪಾದಕ ಜಿ.ಎನ್.ಮೋಹನ್ ಮಾತನಾಡಿ, ''ಉದ್ಯಮಿಗಳಿಗೆ ಯಾವಾಗಲೂ ಹಣ ಸಂಪಾದಿಸುವುದೇ ಪ್ರಥಮ ಆದ್ಯತೆಯಾಗಿರುತ್ತದೆ. ಆದರೆ, ರಾಮೋಜಿ ರಾವ್ ಇದಕ್ಕೆ ಅಪವಾದವಾಗಿದ್ದರು. ಮಾಧ್ಯಮದ ಪಾಠದ ಜೊತೆ ಬದುಕಿನ ಪಾಠವನ್ನೂ ಕಲಿಸುತ್ತಿದ್ದರು. ಅವರ ಜೊತೆ ಐದು ವರ್ಷ ಕೆಲಸ ಮಾಡಿದ ಅನುಭವ ಬಹಳ ಖುಷಿ ನೀಡಿರುವ ಜೊತೆಗೆ ಅರ್ಥಪೂರ್ಣವಾಗಿತ್ತು. ನಮಗೆ ಸಂಪಾದಕೀಯ ಸ್ವಾತಂತ್ರ್ಯ ನೀಡುತ್ತಿದ್ದರು. ಮಾಧ್ಯಮದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರ ಹೆಸರು ತಿಳಿದುಕೊಂಡು ಅವರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದರು. ಅವರು ಸುದ್ದಿ ನೋಡುವ ದೃಷ್ಟಿಕೋನವೇ ವಿಭಿನ್ನವಾಗಿತ್ತು'' ಎಂದು ಹೇಳಿದರು.

''ರಾಮೋಜಿ ರಾವ್ ಅವರು ಇವತ್ತಿನ ಕಾಲಕ್ಕೆ ಬದುಕಿರಲಿಲ್ಲ. ನಾಳಿನ ಕಾಲಕ್ಕೆ ಬದುಕುತ್ತಿದ್ದರು. ಮುಂದಾಗುವ ಬದಲಾವಣೆಗೆ ಅವರಲ್ಲಿ ಸ್ಪಷ್ಟತೆಯಿತ್ತು. ಸುದ್ದಿವಾಹಿನಿ ಅಂದರೆ ಏನೂ ಗೊತ್ತಿಲ್ಲದ ಕಾಲದಲ್ಲಿ 'ಈಟಿವಿ' ವಾಹಿನಿ ಆರಂಭಿಸಿದ ಅವರು ತದನಂತರ ದೇಶದ ಪ್ರಾದೇಶಿಕ ಭಾಷೆಗಳಲ್ಲೂ ಸುದ್ದಿ ಚಾನೆಲ್ ಆರಂಭಿಸಿದ‌ ದೊಡ್ಡ ಮನಸ್ಸಿನ ಧೀಮಂತ ಮಾಲೀಕ'' ಎಂದು ಬಣ್ಣಿಸಿದರು.

ಇಂದು ಪತ್ರಿಕಾ ಧರ್ಮ ಕಣ್ಮರೆ-ಮುರುಳಿಧರ್: ದಿ ಫೆಡರಲ್ ಮುಖ್ಯಸ್ಥ ಮುರಳೀಧರ್ ಖಜಾನೆ ಮಾತನಾಡಿ, ''ಪತ್ರಿಕೋದ್ಯಮದಲ್ಲಿ ಆಗಿನ ಕಾಲದಲ್ಲಿದ್ದ ಮೌಲ್ಯಗಳು ಈಗಲೂ ಪ್ರಸ್ತುತ. ಆದರೆ, ಆ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಹಿರಿಯ ಪತ್ರಕರ್ತರು ಮರೆಯಾದಾಗಲೆಲ್ಲ ಒಂದು ಕಾಲದ ಅನುಭವ, ಸಂಸ್ಕೃತಿ, ಮೌಲ್ಯಗಳು ಹಿಂದೆ ಸರಿಯುತ್ತಿವೆ'' ಎಂದು ಆತಂಕ ವ್ಯಕ್ತಪಡಿಸಿದರು.

ಮತ್ತಿಹಳ್ಳಿ ಮದನ ಮೋಹನ ಅವರ ಬಗ್ಗೆ ಮಾತನಾಡಿದ ಅವರು, ''ವೃತ್ತಿ ಧರ್ಮದಲ್ಲಿ ಅವರು ಗಳಿಸಿಕೊಂಡಿದ್ದ ಜ್ಞಾನ, ರಾಜ್ಯದ ಜ್ವಲತ ಸಮಸ್ಯೆಗಳ ಬಗ್ಗೆ ಅವರ ವರದಿಗಾರಿಕೆ, ಅದನ್ನು ಅವರು ನೋಡುವ ದೃಷ್ಟಿಕೋನವನ್ನು ಈಗ ನೆನಸಿಕೊಂಡರೆ ಅದೆಲ್ಲವೂ ದಂತಕಥೆಯಾಗಿ ಉಳಿಯುತ್ತದೆ.
ಪತ್ರಿಕೋದ್ಯಮವಲ್ಲದೇ ಪತ್ರಿಕಾಧರ್ಮದ ಬಗ್ಗೆ ಅವರು ಮಾತನಾಡುತ್ತಿದ್ದರು‌. ಬರವಣಿಗೆಯನ್ನು ಕಲುಷಿತಗೊಳಿಸದೆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂಬುದು ಅವರ ಆಶಯವಾಗಿತ್ತು'' ಎಂದು ಹೇಳಿದರು.

ಇದನ್ನೂ ಓದಿ: ರಾಮೋಜಿ ರಾವ್​ ಅವರಿಗೆ ಈಟಿವಿ ಕನ್ನಡ ಬಳಗದಿಂದ ನುಡಿನಮನ: ಮಹತ್ವಾಕಾಂಕ್ಷೆಯ ಕನಸುಗಾರ, ಅಸಾಧಾರಣ ಸಾಧಕನ ಸ್ಮರಣೆ

Last Updated : Jun 19, 2024, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.