ETV Bharat / state

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಹುಬ್ಬಳ್ಳಿಯಲ್ಲಿ ಸಂಭ್ರಮೋಲ್ಲಾಸ

500 ವರ್ಷಗಳ ನಂತರ ಅಯೋಧ್ಯೆಗೆ ರಾಮನ ಆಗಮನವಾಗುತ್ತಿದೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ನಗರದ ಹಲವು ದೇವಸ್ಥಾನದಲ್ಲಿ ಪೂಜೆ, ಹೋಮ ಹವನಾದಿಗಳು ನಡೆಯುತ್ತಿವೆ.

ಹುಬ್ಬಳ್ಳಿಯಲ್ಲಿ ಸಂಭ್ರಮ
ಹುಬ್ಬಳ್ಳಿಯಲ್ಲಿ ಸಂಭ್ರಮ
author img

By ETV Bharat Karnataka Team

Published : Jan 22, 2024, 9:37 AM IST

Updated : Jan 22, 2024, 10:30 AM IST

ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಹಿನ್ನೆಲೆ ಹುಬ್ಬಳ್ಳಿಯಲ್ಲಿ ಸಂಭ್ರಮೋಲ್ಲಾಸ

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. 200ಕ್ಕೂ ಹೆಚ್ಚು ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಶ್ರೀರಾಮ ಹಾಗೂ ಹನುಮಂತನಿಗೆ ವಿಶೇಷ ಪೂಜೆ, ಹೋಮ ಹಾಗೂ ಹವನಗಳನ್ನು ಹಮ್ಮಿಕೊಳ್ಳಲಾಗಿದೆ.

ಅಯೋಧ್ಯೆಯಲ್ಲಿ ನಡೆಯುವ ಭವ್ಯ ಸಮಾರಂಭವನ್ನು ವೀಕ್ಷಿಸಲು ವಿವಿಧ ಸಂಘ, ಸಂಸ್ಥೆಗಳು 100ಕ್ಕೂ ಹೆಚ್ಚು ಕಡೆ ಎಲ್‌ಇಡಿ ಪರದೆ ಅಳವಡಿಸಿವೆ. ದೇಗುಲಗಳಲ್ಲಿ ಅನ್ನ ಸಮರ್ಪಣೆ, 15ಕ್ಕೂ ಹೆಚ್ಚು ಶೋಭಾಯಾತ್ರೆಗಳು, ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಠಾಧೀಶರಿಂದ ಪ್ರವಚನ, ಕರಸೇವಕರ ಸನ್ಮಾನ ಹಾಗೂ ಭಕ್ತಿ ಸಮಾರಂಭಗಳು ನಡೆಯುತ್ತಿವೆ.

ಸ್ಟೇಶನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ, ಕಮರಿಪೇಟ್ ರಾಮಮಂದಿರ, ದಾಜಿಬಾನಪೇಟನ ತುಳಜಾಭವಾನಿ ದೇವಸ್ಥಾನ, ಗಣೇಶ ದೇವಸ್ಥಾನ, ಮೂರು ಸಾವಿರ ಮಠ, ಸಾಯಿ ಬಾಬಾ ಮಂದಿರ, ಸಿದ್ಧಾರೂಢ ಮಠ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ರಾಮಜಪ, ಭಗವದ್ಗೀತೆ ಪಠಣ, ಭಜನೆ, ಭಕ್ತಿಗೀತೆ, ರಾಮನಾಧಾರಿತ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ, ಯಕ್ಷಗಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಅವಳಿ ನಗರದಲ್ಲಿ ಬಂದೋಬಸ್ತ್‌ಗಾಗಿ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಜೊತೆ ಕೆಎಸ್‌ಆರ್‌ಪಿ ತುಕುಡಿ, 100 ಮಂದಿ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಗರದ ಸೀತಾ ರಾಮ ಶಿವ ಮಂದಿರದಲ್ಲಿ ಹಾಗೂ ಕಮರಿಪೇಟ್‌ನಲ್ಲಿರುವ ರಾಮಮಂದಿರಲ್ಲಿ ಹೋಮ ಹವನದೊಂದಿಗೆ ಪೂಜೆಗಳು ನಡೆಯುತ್ತಿವೆ. ಅರ್ಚಕರು ಸೀತಾ ರಾಮನ ಮೂರ್ತಿಯನ್ನು ಅಲಂಕರಿಸಿ, ಬೆಳಿಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಆರಂಭಿಸಿದ್ದಾರೆ.

12 ಅಡಿ ಉದ್ಧದ ರಾಮನ ಮೂರ್ತಿ ಪ್ರತಿಷ್ಠಾಪನೆ: ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ಧದ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಬೆಳಗಾವಿಯ ಕಲಾವಿದರು ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ಮೂರ್ತಿ ತಯಾರಿಸಿದ್ದು, ಸಾರ್ವಜನಿಕರ ದರ್ಶನಕ್ಕಿಟ್ಟಿದ್ದಾರೆ. ಈ ಮೂರ್ತಿಯೆದುರು ರಾತ್ರಿಯಿಂದಲೇ ರಾಮಭಕ್ತರು ಆಗಮಿಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಿದ್ದಾರೆ.

ಇದನ್ನೂ ಓದಿ: ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ: ಬೆಂಗಳೂರಿನಲ್ಲಿ ನಡೆಯಲಿವೆ ವಿಶೇಷ ಕಾರ್ಯಕ್ರಮಗಳು

Last Updated : Jan 22, 2024, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.