ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣದ ಶಂಕಿತ ಆರೋಪಿಯು ಕೇವಲ 9 ನಿಮಿಷಗಳ ಅಂತರದಲ್ಲಿ ಕೆಫೆಗೆ ಬಂದು ತೆರಳಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೆಫೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು 'ಈಟಿವಿ ಭಾರತ್'ಗೆ ಲಭ್ಯವಾಗಿದೆ. ಈ ದೃಶ್ಯಗಳಲ್ಲಿ ಶಂಕಿತನ ಕೆಫೆ ಪ್ರವೇಶ ಹಾಗೂ ಹೊರ ಹೋಗುತ್ತಿರುವ ದೃಶ್ಯಗಳಿವೆ.
ಶುಕ್ರವಾರ ಬೆಳಗ್ಗೆ 11:34ಕ್ಕೆ ಬಸ್‌ನಿಂದ ಇಳಿದು ನೇರವಾಗಿ ಕೆಫೆಯತ್ತ ಬಂದಿರುವ ಆರೋಪಿ, ರವಾ ಇಡ್ಲಿ ಆರ್ಡರ್ ಮಾಡಿ ತಿಂದು 11:43 ಕ್ಕೆ ವಾಪಸ್ ತೆರಳಿದ್ದಾನೆ. ಆದರೆ ಬರುವಾಗ ಹಾಗೂ ವಾಪಸ್ ತೆರಳುವಾಗ ಎರಡೂ ಸಂದರ್ಭಗಳಲ್ಲೂ ಆತನೊಂದಿಗೆ ಬ್ಯಾಗ್ ಇತ್ತು. ವ್ಯಕ್ತಿಯು ಬ್ಯಾಗ್ನೊಂದಿಗೆ ಕೆಫೆ ಒಳಗೆ ಹೋಗುತ್ತಿರುವುದು ಹಾಗೂ ಅಲ್ಲಿಂದ ತೆರಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಶಂಕಿತನ ಚಲನವಲನದ ಮತ್ತೊಂದು ಸಿಸಿಟಿವಿ ದೃಶ್ಯವೂ ಲಭ್ಯ: ಶಂಕಿತ ಆರೋಪಿ ಕೆಫೆಗೆ ಆಗಮಿಸುವ ಮೊದಲು ಬ್ಯಾಗ್‌ಸಮೇತ ಬಸ್‌ನಿಂದ ಇಳಿಯುತ್ತಿರುವ ದೃಶ್ಯವೂ ದೊರಕಿದೆ. ರಾಮೇಶ್ವರಂ ಕೆಫೆ ಎದುರೆ ಇರುವಂಥಹ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ನಿಂದ ಶಂಕಿತ ಆರೋಪಿ ಇಳಿದು ಕೆಫೆಯತ್ತ ಹೊರಟಿದ್ದಾನೆ. ಆತ ತಲೆಗೆ ಬಿಳಿ ಕ್ಯಾಪ್, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನ ಚಲನವಲನದ ಮತ್ತೊಂದು ಸಿಸಿಟಿವಿ ದೃಶ್ಯ