ETV Bharat / state

ತವರು ಮನೆ ಸಂಕಷ್ಟಕ್ಕೆ 12 ಲಕ್ಷ ಹಣ, ಚಿನ್ನ ನೀಡಿ ಸುಳ್ಳು ದರೋಡೆ ಕೇಸ್ ದಾಖಲು! ಇದು PSI ಪತ್ನಿಯ ಫಜೀತಿ - Fake Robbery Complaint

ಮನೆಯಲ್ಲಿ ದರೋಡೆ ನಡೆದಿರುವುದಾಗಿ ಪಿಎಸ್​ಐ ಪತ್ನಿಯೇ ಸುಳ್ಳು ದೂರು ನೀಡಿರುವುದು ಬೆಂಗಳೂರು ಪೊಲೀಸರಯ ವಿಚಾರಣೆ ವೇಳೆ ತಿಳಿದು ಬಂದಿದೆ. ಪಿಎಸ್​ಐ ಪುಟ್ಟಸ್ವಾಮಿ ಎಂಬವರ ಪತ್ನಿ ಹಾಗೂ ಆಕೆಯ ಸಹೋದರನ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Police Commissioner office
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ (ETV Bharat)
author img

By ETV Bharat Karnataka Team

Published : Aug 16, 2024, 5:32 PM IST

Updated : Aug 16, 2024, 8:24 PM IST

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ಬೆಂಗಳೂರು: ಮನೆಯಲ್ಲಿ ದರೋಡೆ ನಡೆದಿರುವುದಾಗಿ ಸುಳ್ಳು ದೂರು ನೀಡಿದ್ದ ಪಿಎಸ್ಐ ಪತ್ನಿ ಹಾಗೂ ಆಕೆಯ ಸಹೋದರನ ವಿರುದ್ಧ ಕೋರಮಂಗಲ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಮನೆಯಲ್ಲಿದ್ದ 12 ಲಕ್ಷ ರೂಪಾಯಿ ನಗದು, ಚಿನ್ನಾಭರಣ ದರೋಡೆಯಾಗಿದೆ ಎಂದು ಕೋರಮಂಗಲ ಠಾಣೆಗೆ ನೀಡಲಾಗಿತ್ತು. ಅಶೋಕನಗರ ಠಾಣಾ ಪಿಎಸ್ಐ ಪುಟ್ಟಸ್ವಾಮಿ ಅವರ ಪತ್ನಿ ದೂರು ನೀಡಿದ್ದರು. ಕೋರಮಂಗಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಮನೆಗೆ ಜುಲೈ 11ರಂದು ನುಗ್ಗಿದ್ದ ಕಳ್ಳರು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ನಗದು, ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಪುಟ್ಟಸ್ವಾಮಿಯವರ ಪತ್ನಿ ದೂರು ನೀಡಿದ್ದರು. ವಿಚಾರಣೆ ಬಳಿಕ ಇದು ಸುಳ್ಳು ದೂರು ಎಂದು ತಿಳಿದು ಬಂದಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಪ್ರಕರಣದ ವಿಚಾರವಾಗಿ ಪಿಎಸ್ಐ ಪುಟ್ಟಸ್ವಾಮಿ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಕೋರಮಂಗಲ ಪೊಲೀಸರು, ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಸಹ ಮನೆಗೆ ಯಾರೂ ಕೂಡಾ ಬಂದಿರುವುದರ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಕೂಲಂಕಷವಾಗಿ ದೂರುದಾರರು ಮತ್ತು ಸಂಬಧಿಕರ ವಿಚಾರಣೆ ನಡೆಸಿದಾಗ ಇಂತಹ ಕಳ್ಳತನ ಆಗಿಯೇ ಇಲ್ಲ ಎಂಬುವುದು ತಿಳಿದು ಬಂದಿರುವುದಾಗಿ ಆಯುಕ್ತರು ತಿಳಿಸಿದ್ದಾರೆ. 12 ಲಕ್ಷ ಹಣ ಮತ್ತು ಚಿನ್ನಾಭರಣವನ್ನು ತವರು ಮನೆಯವರಿಗೆ ಕೊಟ್ಟಿದ್ದಾರೆ. ತವರು ಮನೆಯ ಆರ್ಥಿಕ ಬಿಕ್ಕಟ್ಟಿನ ವೇಳೆ ಸಹಾಯಕ್ಕಾಗಿ ಕಟ್ಟು ಕಥೆ ಕಟ್ಟಿ ಪ್ರಕರಣ ದಾಖಲಿಸಿದ್ದು ತಿಳಿದು ಬಂದಿದೆ. ಹಣ ನೀಡಲಾದ ಮಾಹಿತಿ ತಿಳಿದು ಬಂದಿದ್ದು, ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Mobile​ ಗೇಮ್ ಆಡ್ತಿದ್ದವನ ಮೇಲೆ ಗಾಂಜಾ ಕೇಸ್: ಇನ್ಸ್​ಪೆಕ್ಟರ್, PSI, ಕಾನ್ಸ್​ಟೇಬಲ್​ಗೆ ಅಮಾನತು ಶಿಕ್ಷೆ

Last Updated : Aug 16, 2024, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.