ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ಆರೋಪಿಗಳಾದ ಮಹಮ್ಮದ್ ಶಫಿ ನಾಶಿಪುಡಿ, ಇಲ್ತಾಜ್ ಮತ್ತು ಮುನಾವರ್ ಎಂಬವರನ್ನು ಪೊಲೀಸರು ತನಿಖೆಗೊಳಪಡಿಸಿದ್ದಾರೆ. ವಿಧಾನಸೌಧ ಠಾಣಾ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಅವರಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಆರೋಪಿಗಳ ಹಿಂದೆ ಯಾರಿದ್ದಾರೆ?, ಪಾಕ್ ಪರ ಘೋಷಣೆ ಕೂಗುವುದರ ಹಿಂದಿನ ಉದ್ದೇಶವೇನು?, ಆರೋಪಿತರು ಯಾವುದಾದರೂ ನಿಷೇಧಿತ ಸಂಘಟನೆಯ ಸದಸ್ಯರೇ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪ್ರಾಥಮಿಕ ವಿಚಾರಣೆಯಲ್ಲಿ "ನಾನು ಆ ರೀತಿ ಘೋಷಣೆ ಕೂಗಿಲ್ಲ" ಎಂದು ಆರೋಪಿ ಮೊಹಮ್ಮದ್ ಶಫಿ ನಾಶಿಪುಡಿ ಹೇಳಿದ್ದಾನೆ. ಉಳಿದಿಬ್ಬರು ಯಾವುದೇ ಉತ್ತರ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಾಕ್ ಪರ ಘೋಷಣೆಗೆ ಪ್ರಚೋದನೆ ಸಿಕ್ಕ ಬಗ್ಗೆ ತನಿಖೆಯಾಗಬೇಕು: ಸಿ.ಟಿ.ರವಿ