ETV Bharat / state

ಹೈದರಾಬಾದ್​ನಿಂದ ಬೆಳಗಾವಿಗೆ ಹೊರಟಿದ್ದ ಖಾಸಗಿ​ ಬಸ್ ಪಲ್ಟಿ: 35 ಪ್ರಯಾಣಿಕರಿಗೆ ಗಾಯ

author img

By ETV Bharat Karnataka Team

Published : Feb 29, 2024, 10:32 AM IST

ಗಂಗಾವತಿಯಲ್ಲಿ ಎಸ್​ಅರ್​ಎಸ್​ ಬಸ್ ಪಲ್ಟಿಯಾಗಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಎಸ್​ಅರ್​ಎಸ್​ ಬಸ್ ಪಲ್ಟಿ
ಎಸ್​ಅರ್​ಎಸ್​ ಬಸ್ ಪಲ್ಟಿ

ಗಂಗಾವತಿ : ಹೈದರಾಬಾದ್​ನಿಂದ ಬೆಳಗಾವಿಗೆ ಹೊರಟಿದ್ದ ಎಸ್ಆರ್​ಎಸ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಪಲ್ಟಿಯಾಗಿದೆ. ಗಂಗಾವತಿ ತಾಲ್ಲೂಕಿನ ಹೆಚ್​ಅರ್​ಜಿ ನಗರದಲ್ಲಿ ಗುರುವಾರ ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಬಸ್​ನಲ್ಲಿದ್ದ 35 ಜನರಿಗೆ ಗಾಯಗಳಾಗಿದ್ದು, ಅದೃಷ್ಡವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೆಚ್​ಆರ್​ಜಿ ನಗರದ ಹತ್ತಿರ ಹೋಗುವಾಗ ಎದುರಿಗೆ ಬಂದ ಬೋಲೆರೋ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್​ ಅನ್ನು ಪಕ್ಕಕ್ಕೆ ಎಳೆದಾಗ ಪಲ್ಟಿಯಾಗಿದೆ ಎಂದು ಬೆಳಗಾವಿಗೆ ಹೊರಟಿದ್ದ ಪ್ರತ್ಯಕ್ಷದರ್ಶಿ ಇರ್ಫಾನ್ ಎಂಬ ಯುವಕ ಘಟನೆ ಬಗ್ಗೆ ತಿಳಿಸಿದ್ದಾನೆ. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಲಕ್ಷ್ಮಮ್ಮ ಉಡುಚಪ್ಪ ಎಂಬ (65) ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ದಾಖಲಿಸಲಾಗಿದೆ.

ಇದನ್ನೂ ಓದಿ :ಚಿಕ್ಕಮಗಳೂರು: ಅಯ್ಯಪ್ಪ ಭಕ್ತರಿದ್ದ ಬಸ್​ ಪಲ್ಟಿ, 15 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.