ETV Bharat / state

ನಿನ್ನೆ ಅಮಾಯಕರ ಬಂಧನವಾಗಿದೆ, ವಿಡಿಯೋ ಇದೆ ಅಂತ ಎಲ್ಲರನ್ನೂ ಬಂಧನ ಮಾಡೋಕಾಗುತ್ತಾ: ಪ್ರೀತಂಗೌಡ ಪ್ರಶ್ನೆ - preetham gowda - PREETHAM GOWDA

ನಮ್ಮ ಕಾರ್ಯಕರ್ತರು ಅಂತ ಬಂದಾಗ ನಾನು ಬೆನ್ನು ತೋರಿಸಿ ಹೋಗಲ್ಲ. ನಿನ್ನೆ ಬಂಧಿತರಾದವರು ಅಮಾಯಕರು ಎಂದು ಬಿಜೆಪಿ ನಾಯಕ ಪ್ರೀತಂಗೌಡ ಹೇಳಿದ್ದಾರೆ.

ಪ್ರೀತಂಗೌಡ
ಪ್ರೀತಂಗೌಡ (ETV Bharat)
author img

By ETV Bharat Karnataka Team

Published : May 13, 2024, 4:55 PM IST

ಬೆಂಗಳೂರು: ಭಾನುವಾರ ಬಂಧಿತರಾದವರು ಅಮಾಯಕರು. ಲಕ್ಷಾಂತರ ಜನರ ಬಳಿ ವಿಡಿಯೋ ಇದೆ, ಆದರೆ ಒಬ್ಬಿಬ್ಬರನ್ನು ವಶಕ್ಕೆ ತೆಗೊಂಡಿದ್ದೀರಾ. ಇದರ ಹಿಂದೆ ಯಾವ ಕಾರಣ ಇದೆ ಅಂತ ಪ್ರಪಂಚಕ್ಕೇ ಗೊತ್ತು. ಮೊಬೈಲ್​ನಲ್ಲಿ ವಿಡಿಯೋ ಇರುವುದೇ ಅಪರಾಧ ಅಂದರೆ ಎಸ್ಐಟಿ ಯಾವ ಮಾನದಂಡದಲ್ಲಿ ತನಿಖೆ ಮಾಡುತ್ತಿದೆ ಎಂದು ಆಪ್ತರ ಬಂಧನಕ್ಕೆ ಮಾಜಿ ಶಾಸಕ ಪ್ರೀತಂಗೌಡ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಹೀಗಾಗಬಾರದಿತ್ತು ಅಂತನೇ ಹಲವರು‌ ಮಾತಾಡ್ತಾರೆ. ನಾನು ಯಾರೇ ಸಿಕ್ಕಿದರೂ ವಿಡಿಯೋ ಸಿಕ್ಕಿದ್ದರೆ ಸರ್ಕ್ಯುಲೇಟ್ ಮಾಡಬೇಡಿ, ಇಟ್ಕೋಬೇಡಿ, ಅದು ನೀಚ ಕೆಲಸ ಅಂತಿರ್ತೇನೆ. ನಮಗೆ ಜವಾಬ್ದಾರಿ ಇದೆ, ವಿಡಿಯೋ ಹಂಚಬೇಡಿ, ಡಿಲೀಟ್ ಮಾಡಿ ಎಂದೇ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ. ಹಾಸನದಲ್ಲಿ ಬಹಳ ಜನರ ಬಳಿ ವಿಡಿಯೋ ಹರಿದಾಡ್ತಿದೆ. ಎಲ್ಲರ ಬಳಿ ವಿಡಿಯೋ ಇದೆ, ಹಾಗಂತ ಎಲ್ಲರನ್ನೂ ಬಂಧನ ಮಾಡುವುದಕ್ಕಾಗುತ್ತಾ?. ಚೇತನ್ ಗೌಡ ಬೇರೆ, ಚೇತನ್ ಬೇರೆ. ನಮ್ಮ ಕಚೇರಿಯಲ್ಲಿ 24 ವರ್ಷದ ಆ ಯುವಕ ಇದ್ದ, ಅವನು ಅಮಾಯಕ. ಅವನ ಬಳಿ ಹೀಗೇ ವಿಡಿಯೋ ಬಂದಿರುತ್ತೆ. ಅದೇ ಅಪರಾಧ ಅಂದರೆ ಹಾಸನದಲ್ಲಿ ಯುವಕರಿಂದ ಮುದುಕರವರೆಗೆ ಎಲ್ಲರ ಬಳಿಯೂ ಇದೆ ಎಂದರು.

ನಾನು ಪ್ರಜ್ವಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ, ಈ ಪ್ರಕರಣದಲ್ಲಿ ನನ್ನದು ನೋ‌ ಕಾಮೆಂಟ್. ನಮ್ಮ ಕಾರ್ಯಕರ್ತರ ಬಂಧನ ಆಯಿತು ಅಂತ ಮಾತನಾಡುತ್ತಿದ್ದೇನೆ. ಇವತ್ತು ನಮಗೂ ವಿಡಿಯೋಗೂ ಸಂಬಂಧ‌ ಇಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ‌ ಮೇಲೆ ಏನು ಪರಿಣಾಮ ಅನ್ನೋ ಬಗ್ಗೆಯೂ ನೋ ಕಾಮೆಂಟ್. ಇದರ ಬಗ್ಗೆ ಸಂಬಂಧಪಟ್ಟವರು ನಿರ್ಧಾರ ಮಾಡುತ್ತಾರೆ. ಈ ಪ್ರಕರಣದಲ್ಲಿ ಮೊದಲ ದಿನದಿಂದಲೂ ನಾನು ಮಾತಾಡಿಲ್ಲ. ಆದರೆ ಸಂತ್ರಸ್ತೆಯರ ವಿಡಿಯೋ‌ ಯಾರೂ ಹಂಚಿಕೊಳ್ಳಬೇಡಿ, ಎಸ್ಐಟಿ ಮಾನದಂಡ ಪ್ರಕಾರ ಡಿಲೀಟ್ ಮಾಡಿ. ಸಂತ್ರಸ್ತೆಯರ ವಿಚಾರದಲ್ಲಿ ಸೂಕ್ಷ್ಮತೆ ತೋರಿಸಿ, ಎಲ್ಲರೂ ಸಾಮಾಜಿಕ ಬದ್ಧತೆ ಮೆರೆಯಿರಿ ಎನ್ನುತ್ತಿದ್ದೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರು ಅಂತ ಬಂದಾಗ ನಾನು ಬೆನ್ನು ತೋರಿಸಿ ಹೋಗಲ್ಲ. ನಿನ್ನೆ ಬಂಧಿತರಾದವರು ಅಮಾಯಕರು, ಅಮಾಯಕರ ಬಂಧ‌ನ ಆಗಿದೆ. ಪೆನ್‌ಡ್ರೈವ್ ಇದೆ, ವಿಡಿಯೋ ಇದೆ ಅಂತ ವಶಕ್ಕೆ ತೆಗೊಳ್ಳುತ್ತಿದ್ದರೆ, ಹಾಸನದಲ್ಲಿ ಅಂಥ 1.5 ಲಕ್ಷ ಜನರನ್ನ ವಶಕ್ಕೆ ತೆಗೋಬೇಕಾಗುತ್ತದೆ. ಫಾರ್ವರ್ಡ್ ಆಗಿ ವಾಟ್ಸ್​ ಆ್ಯಪ್​ನಲ್ಲಿ ಬರುತ್ತದೆ. ಒಂದೂವರೆ‌ ಲಕ್ಷ ಜನರ ಮೊಬೈಲ್ ಗಳಲ್ಲಿ ವಿಡಿಯೋಗಳು ಇವೆ. ಆದರೆ ತನಿಖೆಯನ್ನು ವ್ಯವಸ್ಥಿತವಾಗಿ ಮಾಡಬೇಕು, ಈಗ ಎಸ್ಐಟಿ ತನಿಖೆ ನಡೆಸುತ್ತಿದೆ, ತನಿಖೆ ಬಗ್ಗೆ ಮಾತನಾಡೋದು ಸಮಂಜಸ ಅಲ್ಲ. ತನಿಖೆ ಯಾವ ದಿಕ್ಕಿನಲ್ಲಿ ನಡೀತಿದೆ ಅಂತ ಕಾದು ನೋಡೋಣ. ನಾನು ಯಾವುದರ ಬಗ್ಗೆಯೂ ಮಾತನಾಡಲ್ಲ, ಯಾರು ಏನು ಮಾಡಿದ್ದಾರೆ ಅಂತ ತನಿಖೆಯಿಂದ ಗೊತ್ತಾಗುತ್ತದೆ ಎಂದರು.

ನನ್ನನ್ನ ಟಾರ್ಗೆಟ್ ಮಾಡಲಾಗ್ತಿದೆ ಅಂತ ಹೇಳಲ್ಲ. ಆದರೆ ತನಿಖೆ ದಿಕ್ಕು ಸರಿಯಾಗಿ ನಡೆಯಲಿ ಪ್ರಜ್ವಲ್ ಪ್ರಕರಣದಲ್ಲಿ ನನ್ನದು ಯಾವಾಗಲೂ ನೋ ಕಾಮೆಂಟ್. ಏ. 23 ರಂದು ಲಾಯರ್ ಪೆನ್‌ಡ್ರೈವ್ ತಂದುಕೊಟ್ಟರು, ಹಾಗಂತ ಆ ಲಾಯರ್ ಮೇಲೆ ಕೇಸ್ ಮಾಡುವುದಕ್ಕಾಗುತ್ತಾ? ಎಲೆಕ್ಷನ್ ಏಜೆಂಟ್ ಪೆನ್‌ಡ್ರೈವ್ ಸಿಕ್ತು ಅಂತ ಮೊದಲು ತಂದುಕೊಟ್ಟರು. ಹಾಗಂತ ಅವರ ಮೇಲೂ ಕೇಸ್ ಮಾಡಲಿಕ್ಕಾಗುತ್ತಾ?. ಆ ರೀತಿಯಾದರೆ 15 ಲಕ್ಷ ಜನರ ಮೇಲೆ ಕೇಸ್ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಅಮಾಯಕರ ಬಂಧನ ಆಗಬಾರದು ಎಂದು ಪ್ರೀತಂಗೌಡ ಮನವಿ ಮಾಡಿದರು.

ವಿಡಿಯೋ ಬಗ್ಗೆ ಮೊದಲು ಯಾರು ಮಾಹಿತಿ ಕೊಟ್ಟರೋ ಅವರನ್ನೇ ಕೇಳಲಿ. ಯಾರು ಮಾಹಿತಿ ಕೊಟ್ಟರು?. ವಿಡಿಯೋ ಮಾಡ್ಕೊಂಡೋರು ಯಾರು?. ಒಂದು ವರ್ಷದಿಂದಲೇ ವಿಡಿಯೋ ಹರಿದಾಡುತ್ತಿದೆ ಅಂತ ಹೇಳ್ತಾರೆ ಒಂದು ವರ್ಷದ ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಚರ್ಚೆ ಮಾಡಿದರೆ ಏನು ಪ್ರಯೋಜನ?. ಸಂತ್ರಸ್ತರ ಬಗ್ಗೆಯೂ ಯೋಚಿಸಬೇಕು. ಯಾವ ದಿಕ್ಕಿನಲ್ಲಿ ತನಿಖೆ ಆಗಬೇಕೋ ಆ ದಿಕ್ಕಿನಲ್ಲಿ ಆಗಲಿ ಎಂದರು.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪ ತಳ್ಳಿಹಾಕಿದ ಶಾಸಕ ಎ.ಮಂಜು - MLA Manju

ETV Bharat Logo

Copyright © 2025 Ushodaya Enterprises Pvt. Ltd., All Rights Reserved.