ETV Bharat / state

ವಾರೆಂಟ್ ಇರುವುದರಿಂದ ಪ್ರಜ್ವಲ್ ಬಂದ ಮೇಲೆ ಅರೆಸ್ಟ್ ಮಾಡುತ್ತಾರೆ: ಸಚಿವ ಜಿ. ಪರಮೇಶ್ವರ್ - Prajwal Revanna Sex Scandal Case

ವಾರೆಂಟ್ ಇರುವುದರಿಂದ ಪ್ರಜ್ವಲ್ ಬಂದ ಮೇಲೆ ಪೊಲೀಸರು ಬಂಧಿಸುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

author img

By ETV Bharat Karnataka Team

Published : May 29, 2024, 1:52 PM IST

Updated : May 29, 2024, 3:17 PM IST

PRAJWAL REVANNA  ARRESTED ON ARRIVAL  MINISTER PARAMESHWAR
ಸಚಿವ ಜಿ.ಪರಮೇಶ್ವರ್ (ಕೃಪೆ: ETV Bharat Karnataka)
ಸಚಿವ ಜಿ.ಪರಮೇಶ್ವರ್ ಹೇಳಿಕೆ (ಕೃಪೆ: ETV Bharat Karnataka)

ಬೆಂಗಳೂರು: ವಾರೆಂಟ್ ಇರೋದರಿಂದ ಪ್ರಜ್ವಲ್ ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ವಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಮೇಲೆ ವಾರೆಂಟ್ ಇದೆ. ಪ್ರಜ್ವಲ್ ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ವಾ?. ಎಸ್​​ಐಟಿಯವರು ಅದನ್ನು ಗಮನಿಸ್ತಾರೆ. ವಾರೆಂಟ್ ಇರೋದ್ರಿಂದ ಅರೆಸ್ಟ್ ಮಾಡ್ತಾರೆ. ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ಏರ್‌ಪೋರ್ಟ್​ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು.. ಮತ್ತೊಂದು.. ನಡೆಯುತ್ತೆ ಎಂದರು.

ಫ್ಲೈಟ್​ ಟಿಕೆಟ್​ ವೈರಲ್​: ಲೈಂಗಿಕ ದೌರ್ಜನ್ಯದ ಆರೋಪದ ಕುರಿತು ಮೇ 31ರಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಮೂಲಕ ಹೇಳಿರುವ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಸಿದ್ಧತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜರ್ಮನಿಯಿಂದ ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಟಿಕೆಟ್ ಬುಕ್ ಮಾಡಿದ್ದಾರೆ ಎನ್ನಲಾಗಿದ್ದು, ಅದರ ಪ್ರತಿಯೊಂದು ವೈರಲ್ ಆಗಿದೆ.

ಟಿಕೆಟ್‌ನಲ್ಲಿರುವ ಮಾಹಿತಿಯ ಪ್ರಕಾರ ಗುರುವಾರ(ಮೇ 30) ಮಧ್ಯಾಹ್ನ 12:05ಕ್ಕೆ ಜರ್ಮನಿಯ ಮ್ಯೂನಿಚ್ ಏರ್‌ಪೋರ್ಟ್​ನಿಂದ ಹೊರಡಲಿರುವ ಲುಫ್ಥಾನ್ಸ ಏರ್‌ಲೈನ್ಸ್ ಮೂಲಕ ಪ್ರಜ್ವಲ್ ಪ್ರಯಾಣಿಸಲಿದ್ದು ಶುಕ್ರವಾರ ಬೆಳಗ್ಗಿನ ಜಾವ 12:30ಕ್ಕೆ ಬೆಂಗಳೂರಿನ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟಿಗೆ ಅವರು ತಲುಪಲಿದ್ದಾರೆ.

ಡೆತ್​ನೋಟ್​ನಲ್ಲಿ ಸಚಿವರ ಹೆಸರಿಲ್ಲ: ಅಧಿಕಾರಿ ಚಂದ್ರಶೇಖರನ್​ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್​, ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಆ ಇಲಾಖೆಯಿಂದ ದೂರು ಬಂದಿದೆ. ಒಬ್ಬರು ಒಂದು ಅಮೌಂಟ್ ಹೇಳ್ತಾ ಇದ್ದಾರೆ. ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರುತ್ತೆ. ಬೇರೆ ಅಕೌಂಟ್​ಗಳಿಗೆ ಹಣ ಹೋಗಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿಯವರು ರಾಜೀನಾಮೆ ‌ಕೇಳ್ತಾನೆ ಇರ್ತಾರೆ. ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಡೆತ್​ನೋಟ್​ನಲ್ಲಿ ಸಚಿವರು ಅಂತ ಬರೆದಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ನೇರವಾಗಿ ಎಲ್ಲಿಯೂ ಸಚಿವರ ಹೆಸರು ಹೇಳಿಲ್ಲ. ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ್ ಸಚಿವರ ಹೆಸರು ಹೇಳಿದ್ರು. ಈಶ್ವರಪ್ಪ ಕೇಸ್​ನಲ್ಲಿ ಹೇಳಿದ್ರು. ಹಾಗಾಗಿ ನಾವು ರಾಜೀನಾಮೆ ಕೇಳಿದ್ದೆವು. ಇಲ್ಲಿ‌ ಸಚಿವರ ಹೆಸರು ಹೇಳಿಲ್ಲ ಎಂದರು.

ಇನ್ನು ಮೇಲ್ಮನೆ ಟಿಕೆಟ್ ಹಂಚಿಕೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ಕೊಡಬೇಕು. ಅವರು ನಮ್ಮ ಸಲಹೆಯನ್ನು ಕೇಳಿಲ್ಲ. ಇಲಾಖೆ ವಿಚಾರವಾಗಿ ನಾನು ಸಿಎಂ ಭೇಟಿ ಮಾಡಿದ್ದೇನೆ. ಈ ವೇಳೆ ಪರಿಷತ್ ವಿಚಾರ ಚರ್ಚೆಯಾಗಿಲ್ಲ. ಅಲ್ಲಿ ಇರೋದು 7 ಸ್ಥಾನಗಳು. ಎಷ್ಟು ಅರ್ಜಿಗಳು ಬಂದಿವೆ ಅಂತಾ ನನಗೆ ಗೊತ್ತಿಲ್ಲ. ನಾನು ಇದನ್ನು ಪತ್ರಿಕೆಯಲ್ಲಿ ನೋಡಿದೆ. ಅದನ್ನು ಸ್ಕ್ರೀನಿಂಗ್ ಮಾಡೋದು ತುಂಬಾ ಕಷ್ಟ. ಮೊದಲೇ ಹೈ ಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಅದರೆ ಈಗ ಕಾಲ ಮೀರಿ ಹೋಗಿದೆ. ಈಗಾಗಲೇ ಸಿಎಂ, ಡಿಸಿಎಂ ದೆಹಲಿಗೆ ಹೋಗಿ ಬಿಟ್ಟಿದ್ದಾರೆ ಎಂದರು.

ಹಾಸನದಲ್ಲಿ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿ, ಇಲ್ಲಿ ಬಿಜೆಪಿ, ಕಾಂಗ್ರೆಸ್, ದಳ ಅನ್ನೋ ಪ್ರಶ್ನೆ ಇಲ್ಲ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೋ ಅಂತವರನ್ನ ಪೊಲೀಸರು ಅರೆಸ್ಟ್ ಮಾಡ್ತಾರೆ. ಇದೀಗ 11 ಜನರನ್ನ ಅರೆಸ್ಟ್ ಮಾಡಿದ್ದಾರೆ. ಯಾರ ಮೇಲೆ ಡೌಟ್ ಬರುತ್ತೋ ಅರೆಸ್ಟ್ ಮಾಡ್ತಾರೆ ಎಂದು ತಿಳಿಸಿದರು.

ಓದಿ: ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿ ಹೈಕಮಾಂಡ್​ಗೆ ಸಲ್ಲಿಕೆ; ಯುವಕರು, ಹಿರಿಯರಿಗೆ ಅವಕಾಶ: ಡಿ.ಕೆ.ಶಿವಕುಮಾರ್ - D K Shivakumar

Last Updated : May 29, 2024, 3:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.