ರಾಯಚೂರು: ಮಕ್ಕಳ ಅಪಹರಣ ಮಾಡಿದ ಅಂತಾರಾಜ್ಯ ಕಳ್ಳರನ್ನು ಮಹಾರಾಷ್ಟ್ರ ಪೊಲೀಸರು ಮತ್ತು ರಾಯಚೂರಿನ ಸಿಂಧನೂರು ಗ್ರಾಮೀಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಕುನ್ನಟಗಿ ಕ್ಯಾಂಪ್ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಎಂಟು ಮಂದಿ ಮಕ್ಕಳನ್ನು ಕಿಡ್ನಾಪ್ ಮಾಡಲಾಗಿತ್ತು. ಕಿಡ್ನಾಪ್ ಮಾಡಿದ ನಂತರ ಎರಡು ತಂಡವಾಗಿ ವಿಂಗಡನೆ ಮಾಡಲಾಗಿತ್ತು. ಒಂದು ತಂಡದ ಅಪಹರಣಕಾರರಿಬ್ಬರು ನಾಲ್ವರು ಮಕ್ಕಳನ್ನು ರಾಯಚೂರು ಜಿಲ್ಲೆಯ ಸಿಂಧನೂರಿನ ತಾಲೂಕಿನ ಕುನ್ನಟಗಿ ಕ್ಯಾಂಪ್ಗೆ ತಂದಿದ್ದರು. ಅಲ್ಲಿ ಒಂದು ಕೊಣೆಯಲ್ಲಿ ನಾಲ್ವರು ಮಕ್ಕಳನ್ನು ಬಂಧಿಸಿ ಇರಿಸಿದ್ದರು. ಈ ವೇಳೆ ಮಹಾರಾಷ್ಟ್ರದ ಪುಣೆ ಪೊಲೀಸರು ಅಪಹರಣಕಾರರ ಲೊಕೇಶನ್ ಆಧರಿಸಿ ಸಿಂಧನೂರಿಗೆ ಆಗಮಿಸಿದ್ದರು. ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದಾದ ಬಳಿಕ ಸಿಂಧನೂರು ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರದಂದು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳ ಬಳಿಯಿದ್ದ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಮಹಾರಾಷ್ಟ್ರದ ಪೊಲೀಸರಿಗೆ ಒಪ್ಪಿಸಿದರು.
ಮಹಾರಾಷ್ಟ್ರದ ಸಾಂಗ್ಲಿ ತಾಲೂಕಿನ ಜಂತ್ ಮೂಲದ ರಾಮು, ದತ್ತಾ ಆರೋಪಿಗಳಾಗಿದ್ದು, ಮುಖ್ಯ ಆರೋಪಿ ರಾಮು ಕುನ್ನಟಗಿ ಕ್ಯಾಂಪಿನ ಹೆಂಡತಿಯ ತವರು ಮನೆಯಾಗಿದೆ. ಹೀಗಾಗಿ, ಮಕ್ಕಳನ್ನು ಅಪಹರಿಸಿ ತನ್ನ ಹೆಂಡತಿ ತವರು ಮನೆಗೆ ಕರೆ ತಂದಿದ್ದ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಈ ಘಟನೆ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಪುಣೆಯಲ್ಲಿ ಹೆಲಿಕಾಪ್ಟರ್ ಪತನ: ಇಂಜಿನಿಯರ್, ಇಬ್ಬರು ಪೈಲಟ್ಗಳು ಸಾವು - HELICOPTER CRASH