ETV Bharat / state

ಡ್ರಗ್ಸ್ ಮುಕ್ತ ನಗರಕ್ಕೆ ಕಮೀಷನರೇಟ್ ನಿರ್ಧಾರ ; ಪಾಲಕರ ಸಮ್ಮುಖದಲ್ಲಿಯೇ ಸ್ಪೆಷಲ್‌ ಡ್ರೈವ್ - drug free city

author img

By ETV Bharat Karnataka Team

Published : Aug 4, 2024, 10:57 PM IST

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್​ ಈಗ ಸ್ಪೆಷಲ್ ಡ್ರೈವ್ ಮೂಲಕ ಅವಳಿನಗರವನ್ನು ಡ್ರಗ್​ ಮುಕ್ತ ನಗರವನ್ನಾಗಿಸಲು ಮುಂದಾಗಿದೆ.

Medical counseling
ವೈದ್ಯಕೀಯ ಕೌನ್ಸಲಿಂಗ್ (ETV Bharat)
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ (ETV Bharat)

ಹುಬ್ಬಳ್ಳಿ : ಗಾಂಜಾ ಘಾಟು ಹಾಗೂ ಮಾದಕ ವಸ್ತುಗಳ ಹಾವಳಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರನ್ನು ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಉಸಿರುಗಟ್ಟಿಸುವಂತೆ ಮಾಡಿತ್ತು. ಇಂತಹ ಅವ್ಯವಸ್ಥೆಯನ್ನು ಚಾಲೆಂಜ್ ಆಗಿ ತೆಗೆದುಕೊಂಡ ಕಮೀಷನರೇಟ್ ಈಗ ಸ್ಪೆಷಲ್‌ ಡ್ರೈವ್ ಮೂಲಕ ಅವಳಿನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಮಾಡಲು ಮುಂದಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿನಗರದ ಒಟ್ಟು 16 ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಬಳಕೆದಾರರ ಸ್ಪೆಷಲ್‌ ಡ್ರೈವ್ ನಡೆಸಿರುವ ಕಮೀಷನರೇಟ್ ಒಟ್ಟು 467 ಜನರನ್ನು ತಪಾಸಣೆಗೆ ಒಳಪಡಿಸಿದ್ದು, 251 ಕೇಸ್ ಪಾಸಿಟಿವ್ ಬಂದಿವೆ.

216 ನೆಗೆಟಿವ್ ಬಂದಿದ್ದು, 45 ಎಫ್​ಐಆರ್ ದಾಖಲು ಮಾಡಲಾಗಿದೆ. ಈ ನಿಟ್ಟಿನಲ್ಲಿ ಪಾಸಿಟಿವ್ ಬಂದಿರುವ 251 ಹಾಗೂ ಕಳೆದ ವಾರದ 259 ಪಾಸಿಟಿವ್ ಬಂದವರನ್ನು ಆರ್. ಎನ್ ಶೆಟ್ಟಿ ಕಲ್ಯಾಣಮಂಟಪದಲ್ಲಿ ವೈದ್ಯಕೀಯ ಕೌನ್ಸಲಿಂಗ್ ಮಾಡುವ ಮೂಲಕ ಜಾಗೃತಿ ಮೂಡಿಸುವ ಮತ್ತು ಅವಳಿನಗರವನ್ನು ಮಾದಕ ವಸ್ತುಗಳ ಮುಕ್ತವಾಗಿಸಲು ಮುಂದಾಗಿದ್ದಾರೆ.

ಪಾಸಿಟಿವ್ ಬಂದಿರುವ ಪಾಲಕರನ್ನು ಕೂಡ ಕರೆಸಿದ್ದು, ಪಾಲಕರ ಸಮ್ಮುಖದಲ್ಲಿಯೇ ಎಚ್ಚರಿಕೆ ನೀಡಲಾಗಿದೆ. ಈ ವೇಳೆ ನೂರಾರು ಜನ ಪಾಲಕರು ಆಗಮಿಸಿದ್ದು, ಮಕ್ಕಳ ವ್ಯವಸ್ಥೆ ನೋಡಿ ಕಣ್ಣೀರು ಹಾಕಿದರು.

ಗಾಂಜಾ ಘಾಟಿನ ಬಗ್ಗೆ ಮಾಹಿತಿ ಬಿಚ್ಚಿಟ್ಟ ಕಮಿಷನರ್ : ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲರ್ ಮೇಲೆ 12 ಡ್ರಗ್ಸ್ ಪ್ರಕರಣ ದಾಖಲು ಮಾಡಿದ್ದು, 64 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.

ನಗರದಲ್ಲಿಂದು ಸ್ಪೆಷಲ್‌ ಡ್ರೈವ್ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಗಾಂಜಾ ವಹಿವಾಟು, ಮಾದಕ ವಸ್ತುಗಳ ಬಳಕೆ ಜೋರಾಗಿರುವ ಹಿನ್ನೆಲೆ ಸ್ಪೆಷಲ್‌ ಡ್ರೈವ್ ಮಾಡಲಾಗುತ್ತಿದೆ ಎಂದರು.

ಒಟ್ಟು 467 ಜನರನ್ನು ವಶಕ್ಕೆ ಪಡೆದು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಎಸ್.ಡಿ.ಎಂ, ಡಿಮಾನ್ಸ್​ಗಳಲ್ಲಿ ತಪಾಸಣೆ ಮಾಡಲಾಗಿದ್ದು, ಕಳೆದ ಭಾನುವಾರ ಒಂದನೇ ಸುತ್ತಿನ ಜಾಗೃತಿ ಕಾರ್ಯಾಗಾರ ಮಾಡಿದ್ದೇವೆ. ಇಂದು ಮತ್ತೆ ಎರಡನೇ ಸುತ್ತಿನ ಜಾಗೃತಿ ಕಾರ್ಯಗಾರ ಮಾಡಲಾಗಿದ್ದು, 467 ಗಾಂಜಾ ವ್ಯಸನಿಗಳಲ್ಲಿ 251 ಜನರ ರಿಸಲ್ಟ್ ಪಾಸಿಟಿವ್ ಬಂದಿದೆ. 216 ಜನರ ವೈದ್ಯಕೀಯ ಪರೀಕ್ಷೆ ರಿಪೋರ್ಟ್ ನೆಗೆಟಿವ್ ಬಂದಿದ್ದು, ವಶಕ್ಕೆ ಪಡೆದವರಲ್ಲಿ 45 ಜನರ ಮೇಲೆ ದೂರು ದಾಖಲು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವ್ಯಸನಿಗಳ ಪೋಷಕರಿಗೂ ಪೊಲೀಸರಿಂದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ಹೊರ ಬರಲು ಸಲಹೆ ನೀಡಲಾಗುತ್ತಿದೆ. ಮಕ್ಕಳ ನಡತೆಯಿಂದ ಬೇಸತ್ತು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಪಾಲಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಇದನ್ನೂ ಓದಿ : ಧಾರವಾಡ: ಮಾದಕ ವಸ್ತು ಬಳಕೆದಾರರು ವಶಕ್ಕೆ - Drug Users Detained

ETV Bharat Logo

Copyright © 2024 Ushodaya Enterprises Pvt. Ltd., All Rights Reserved.