ETV Bharat / state

ಲೋಕಸಭಾ ಚುನಾವಣೆ - 2024: ಪೊಲೀಸರು, ಸಿಐಎಸ್ಎಫ್ ಪಡೆಗಳಿಂದ ಪಥಸಂಚಲನ

ಬೆಂಗಳೂರಿನ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮತ್ತು ಸಿಐಎಸ್ಎಫ್ ಪಡೆ ಪಥಸಂಚಲನ ನಡೆಸಿದವು.

ಸಿಐಎಸ್ಎಫ್ ಪಡೆಗಳಿಂದ ಪಥಸಂಚಲನ
ಸಿಐಎಸ್ಎಫ್ ಪಡೆಗಳಿಂದ ಪಥಸಂಚಲನ
author img

By ETV Bharat Karnataka Team

Published : Mar 17, 2024, 8:06 PM IST

ಬೆಂಗಳೂರು : ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ ಹಾಗೂ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಭದ್ರತಾ ಪಡೆಗಳಿಂದ ಪಥಸಂಚಲನ ಆರಂಭಿಸಲಾಗಿದೆ. ಬೆಂಗಳೂರು ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಂಡಗಳಿಂದ ಇಂದು ನಗರದ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಗಿದೆ.

ಶಸ್ತ್ರಾಸ್ತ್ರಧಾರಿ ಸಿಐಎಸ್ಎಫ್ ಯೋಧರು ಹಾಗೂ ಪೊಲೀಸರನ್ನೊಳಗೊಂಡ ಸುಮಾರು 300ಕ್ಕೂ ಅಧಿಕ ಜನರ ತಂಡ ಪಥಸಂಚಲನದಲ್ಲಿ ಭಾಗಿಯಾಗಿದೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುವವರು, ನೀತಿ ಸಂಹಿತೆ ಉಲ್ಲಂಘಿಸುವವರಿಗೆ ಎಚ್ಚರಿಕೆ ಹಾಗೂ ಚುನಾವಣಾ ಪ್ರಕ್ರಿಯೆ ಮೇಲೆ ಗಮನ ಇರಿಸುವುದರ ಭಾಗವಾಗಿ ಪಥ ಸಂಚಲನ ಆರಂಭಿಸಲಾಗಿದೆ.

ವಿಚಕ್ಷಣಾ ದಳಗಳ ಕಣ್ಗಾವಲು : ಜೊತೆಗೆ ರಾಜ್ಯದಲ್ಲಿ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೇಲೆ ಹದ್ದಿನ‌ ಕಣ್ಣಿಡಲಿದೆ. ಅದಕ್ಕಾಗಿ 2,357 ಕ್ಷಿಪ್ರ ಪಡೆ, 2,669 ಸ್ಥಿರ ಕಣ್ಗಾವಲು ತಂಡ, 647 ವಿಡಿಯೋ ಕಣ್ಗಾವಲು ತಂಡ, 258 ಲೆಕ್ಕಪರಿಶೋಧಕ ಟೀಂಗಳು ಹಾಗೂ 257 ವಿಡಿಯೋ ವೀಕ್ಷಣೆ ತಂಡಗಳನ್ನು ನಿಯೋಜಿಸಲಾಗಿದೆ. ಅಂತಾರಾಜ್ಯ ಗಡಿ ಚೆಕ್​​ಪೋಸ್ಟ್ ಹಾಗೂ ಇತರ ಚೆಕ್​ಪೋಸ್ಟ್​​ಗಳನ್ನು ರಚಿಸಲಾಗಿದೆ. 172 ಪೊಲೀಸ್ ಇಲಾಖೆಯ ಚೆಕ್​ಪೋಸ್ಟ್ ಹಾಗೂ 40 ಅಬಕಾರಿ ಚೆಕ್​ಪೋಸ್ಟ್​ ಇರಲಿವೆ ಎಂದು ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತದಾರರೆಷ್ಟು?: ರಾಜ್ಯದಲ್ಲಿ ಒಟ್ಟು 5,42,54,500 ಮತದಾರರಿದ್ದಾರೆ. 2,71,66,220 ಪುರುಷರು ಹಾಗೂ 2,70,81,748 ಮಂದಿ ಮಹಿಳಾ ಮತದಾರರಿದ್ದಾರೆ. 11,24,622 ಯುವ ಮತದಾರರಿದ್ದು, 6,12,154 ದಿವ್ಯಾಂಗ ಮತದಾರರು, 85 + ವಯಸ್ಸಿನವರು 5,70,168 ಜನ, 100+ ವಯಸ್ಸಾದ 11,000 ಮಂದಿ ಹಾಗೂ 38,794 ಬುಡಗಟ್ಟು ಜನಾಂಗದವರಿದ್ದಾರೆ. 31,74,098 ಮತದಾರರೊಂದಿಗೆ ಬೆಂಗಳೂರು ಉತ್ತರವು ಅತಿ ಹೆಚ್ಚು ಮತದಾರರ ಇರುವ ಕ್ಷೇತ್ರವಾಗಿದ್ದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ 15,72,958 ಮತದಾರರಿದ್ದಾರೆ.

ಒಟ್ಟು 58,834 ಮತಗಟ್ಟೆಗಳು ಇರಲಿದ್ದು, 1,10,946 ಮತಯಂತ್ರಗಳು ಬ್ಯಾಲೆಟ್ ಯುನಿಟ್, 76,667 ಕಂಟ್ರೋಲ್ ಯುನಿಟ್ ಹಾಗೂ 82,575 ವಿವಿಪ್ಯಾಟ್​​ಗಳಿವೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - ಪೊಲೀಸರಿಂದ ರೂಟ್ ಮಾರ್ಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.