ETV Bharat / state

ಹುಬ್ಬಳ್ಳಿ - ಬೆಳಗಾವಿ - ಪುಣೆ 'ವಂದೇ ಭಾರತ್' ರೈಲಿಗೆ ಸೆ.15ರಂದು ಪ್ರಧಾನಿ ಮೋದಿ ಚಾಲನೆ - Vande Bharat Express - VANDE BHARAT EXPRESS

ಹುಬ್ಬಳ್ಳಿ - ಪುಣೆ ನಡುವೆ ಸಂಚರಿಸಲಿರುವ 'ವಂದೇ ಭಾರತ್' ರೈಲಿಗೆ ಸೆ. 15ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

vande bharat express
ವಂದೇ ಭಾರತ್ ರೈಲು (Railways)
author img

By ETV Bharat Karnataka Team

Published : Sep 11, 2024, 3:09 PM IST

ಹುಬ್ಬಳ್ಳಿ: ಹುಬ್ಬಳ್ಳಿ - ಪುಣೆ ನಡುವೆ 'ವಂದೇ ಭಾರತ್' ರೈಲು ಸಂಚಾರಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಸೆಪ್ಟೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ರೈಲಿಗೆ ಚಾಲನೆ ನೀಡಲಿದ್ದಾರೆ.

ಸೆಪ್ಟೆಂಬರ್ 13 ಅಥವಾ 14ರಂದು ಪ್ರಾಯೋಗಿಕ ಸಂಚಾರ ನಡೆಯಲಿದೆ. ರೈಲು 558 ಕಿ.ಮೀ ದೂರವನ್ನು 9 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ. ಬೆಳಗ್ಗೆ 5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 2.40ಕ್ಕೆ ಅಲ್ಲಿಂದ ಹೊರಡುವ ರೈಲು ರಾತ್ರಿ 11.50ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

''8 ಬೋಗಿಗಳನ್ನು ಹೊಂದಿರುವ ರೈಲು, ಧಾರವಾಡ, ಬೆಳಗಾವಿ, ಮೀರಜ್ ನಿಲ್ದಾಣಗಳಲ್ಲಿ ನಿಲುಗಡೆ
ಇರಲಿದೆ. ಸೋಮವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ರೈಲು ಸಂಚರಿಸಲಿದೆ. ರೈಲು ಗಂಟೆಗೆ 60 ಕಿ.ಮೀ ವೇಗದಲ್ಲಿ ಸಾಗಲಿದೆ'' ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ‌ಕನಮಡಿ ಮಾಹಿತಿ ನೀಡಿದರು.

''ವೇಳಾಪಟ್ಟಿಯನ್ನು ಈಗಾಗಲೇ ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ. ಪುಣೆಯಿಂದ ಹುಬ್ಬಳ್ಳಿಗೆ ಬರುವಾಗ ರೈಲು ವಾರದಲ್ಲಿ ಒಂದು ದಿನ ಕೊಲ್ಲಾಪುರಕ್ಕೆ ಹೋಗಲಿದೆ. ಯಾವ ದಿನ ಎಂಬುದನ್ನು ರೈಲ್ವೆ ಮಂಡಳಿ ನಿರ್ಧರಿಸಲಿದೆ'' ಎಂದರು.

ನೈರುತ್ಯ ರೈಲ್ವೆ ವಲಯದ ಬಳಕೆದಾರರ ರೈಲ್ವೆ ಸಮಾಲೋಚನಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, ''ಹುಬ್ಬಳ್ಳಿ - ಪುಣೆ ವಂದೇ ಭಾರತ್ ರೈಲು ಸಂಚಾರದಿಂದ ಈ ಭಾಗದ ಉದ್ಯಮಿಗಳು, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ. ಹಲವು ವರ್ಷಗಳ ಬೇಡಿಕೆಗೆ ಈಗ ಸ್ಪಂದನೆ ಸಿಕ್ಕಿದೆ. ಆದರೆ ಕೊಲ್ಲಾಪುರಕ್ಕೆ ಹೋಗುವುದರಿಂದ ಒಂದೂವರೆ ಗಂಟೆ ಪ್ರಯಾಣ ಹೆಚ್ಚಾಗಲಿದೆ. ಕೊಲ್ಹಾಪುರಕ್ಕೆ ತೆರಳುವುದನ್ನು ಬಿಟ್ಟರೆ ಒಳ್ಳೆಯದು'' ಎಂದಿದ್ದಾರೆ.

ಇದನ್ನೂ ಓದಿ: ಹಣ ಉಳಿತಾಯಕ್ಕೆ ಆದ್ಯತೆ: ₹8 ಕೋಟಿ ವೆಚ್ಚದಲ್ಲಿ 100 ಹಳೆಯ NWKRTC ಬಸ್​ಗಳ ದುರಸ್ತಿ - NWKRTC Bus

ETV Bharat Logo

Copyright © 2025 Ushodaya Enterprises Pvt. Ltd., All Rights Reserved.