ETV Bharat / state

ಮೈಸೂರು : ಆಕರ್ಷಕ ಸ್ತಬ್ಧಚಿತ್ರಕ್ಕೆ ಮನಸೋತ ಜನ, ಪ್ರವಾಸಿಗರು - DASARA TABLEAU

ಮೈಸೂರು ದಸರಾ ಬಂಜೂಸವಾರಿಯಲ್ಲಿ ಸಾಗಿದ ನಾನಾ ಸ್ತಬ್ಧಚಿತ್ರಗಳನ್ನ ಕಂಡು ಜನರು ಮನಸೋತರು.

dasara-tableau
ದಸರಾ ಸ್ತಬ್ಧಚಿತ್ರಗಳ ಮೆರವಣಿಗೆ (ETV Bharat)
author img

By ETV Bharat Karnataka Team

Published : Oct 12, 2024, 9:08 PM IST

ಮೈಸೂರು : ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಬಗು, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಹೀಗೆ ನಾನಾ ಸ್ತಬ್ಧಚಿತ್ರಗಳು ಜಂಬೂಸವಾರಿಯಲ್ಲಿ ಸ್ಥಳೀಯರ ಹಾಗೂ ಪ್ರವಾಸಿಗರ ಕಣ್ಮನ ಸೆಳೆದವು.

ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾದ ಸ್ತಬ್ಧಚಿತ್ರಗಳು, ಭರಪೂರ ಮಾಹಿತಿ ಒದಗಿಸುವುದರ ಜೊತೆಗೆ ಜಿಲ್ಲೆಗಳ ಇತಿಹಾಸವನ್ನು ಸಾರಿತು. ಭಾರತೀಯ ರೈಲ್ವೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಾಧನೆಗಳ ಜತೆಗೆ ಸ್ವಾತಂತ್ರ್ಯಪೂರ್ವ-ನಂತರದಲ್ಲಿ ಸಾಧಿಸಿರುವ ಪ್ರಗತಿಯ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಮೈಸೂರು ದಸರಾ ಬಂಜೂಸವಾರಿಯಲ್ಲಿ ಸಾಗಿದ ಆಕರ್ಷಕ ಸ್ತಬ್ಧಚಿತ್ರ (ETV Bharat)

ಮೈಸೂರು ರೇಷ್ಮೆಗಳನ್ನು ಉತ್ಪಾದನೆ ಮಾಡುವಂತಹ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಹೊರ ತರುತ್ತಿರುವ ಅಪ್ಪಟ ಜರಿ ಸೀರೆಗಳ ನೋಟ ಸೆರೆದಿಡುವಂತಹ ಸ್ತಬ್ಧಚಿತ್ರ, ಮೈಸೂರು ಸ್ಯಾಂಡಲ್ ಸೋಪ್, ಗಂಧದಕಡ್ಡಿ, ಕಲಾಕೃತಿಗಳನ್ನು ಬಿಂಬಿಸುವಂತಹ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸ್ತಬ್ಧಚಿತ್ರ ಪ್ರದರ್ಶನ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದರು.

tableau
ಸಾಮಾಜಿಕ ನ್ಯಾಯದ ಸ್ತಬ್ಧಚಿತ್ರ (ETV Bharat)
tableau
ಧಾರವಾಡ ಜಿಲ್ಲಾ ಪಂಚಾಯತ್​ ಸ್ತಬ್ಧಚಿತ್ರ (ETV Bharat)

ಕೋಲಾರದ ಕೋಟೆಲಿಂಗೇಶ್ವರ ದೇವಸ್ಥಾನ, ದಕ್ಷಿಣಕನ್ನಡದ ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ ಬಿಂಬಿಸುವ, ಹಾಸನ ಜಿಲ್ಲೆಯ ವಿಶ್ವಪರಂಪರೆಯ ಬೇಲೂರು ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ, ದಾವಣಗೆರೆ ಜಿಲ್ಲೆಯ ನಾವು ಮನುಜರು, ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ, ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ, ಕಿನ್ನಾಳೆ ಕಲೆ, ಇಟಗಿ ದೇವಸ್ಥಾನ, ಬೀದರ್​ ಜಿಲ್ಲೆಯ ಚೆನ್ನ ಬಸವಪಟ್ಟದಂತಹ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

tableau
ಸಾಮಾಜಿಕ ನ್ಯಾಯದ ಸ್ತಬ್ಧಚಿತ್ರ (ETV Bharat)

ಮೆರವಣಿಗೆಯಲ್ಲಿ ಸಾಗಿದ 51 ಸ್ತಬ್ಧಚಿತ್ರಗಳು : ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡನ್ನೊಮ್ಮೆ ಬಂದು ನೋಡು, ಕೊಡಗು ಜಿಲ್ಲೆಯ ಭೂಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ, ಕಾಳುಮೆಣಸು, ಆನೆ ಕ್ಯಾಂಪ್, ಮೈಸೂರಿನ ಮನುಷ್ಯ ಜಾತಿ ತಾನೊಂದೆ ವಲಂ, ಸಂಸತ್ ಭವನ, ಅನುಭವ ಮಂಟಪ, ಬುದ್ಧ, ಬಸವ, ಅಂಬೇಡ್ಕರ್​ ಅವರ ಮಾದರಿಗಳು, ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ದೇವಸ್ಥಾನ ಹಾಗೂ ಶಿವನ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಗಿತು. ರಾಜ್ಯದ 31 ಜಿಲ್ಲೆಗಳಿಂದ 51 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

Dance
ಕಲಾವಿದರ ನರ್ತನ (ETV Bharat)

ಜಂಬೂಸವಾರಿಯ ವೈಭವ ಹೆಚ್ಚಿಸಿದ ಕಲಾವಿದರ ಕಸರತ್ತು: ಇದರ ಜತೆಗೆ ವಿವಿಧ ಕಲಾ ಪ್ರಕಾರಗಳಾದ ಕರಡಿ ಕುಣಿತ, ವೀರಗಾಸೆ, ಕಂಸಾಳೆ, ಬೀಸು ಕಂಸಾಳೆ, ಮಹಿಳೆಯರ ನೃತ್ಯ ಹಾಗೂ ವಿವಿಧ ಸಂಸ್ಕೃತಿಯ ನೃತ್ಯ ಪ್ರಕಾರಗಳು ಕಲಾವಿದರ ವಿವಿಧ ಕಸರತ್ತುಗಳು, ದಸರಾ ಜಂಬೂಸವಾರಿಯ ವೈಭವವನ್ನು ಹೆಚ್ಚಿಸಿದವು.

dasara-tableau
ನೃತ್ಯದಲ್ಲಿ ತೊಡಗಿರುವ ಕಲಾವಿದರು (ETV Bharat)

ಇದನ್ನೂ ಓದಿ : ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.