ಶಿವಮೊಗ್ಗ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2024ನೇ ಸಾಲಿಗೆ ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವೈಯಕ್ತಿಕ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿಗಳಾದ ಸರ್ವಶ್ರೇಷ್ಟ ದಿವ್ಯಾಂಗಜನ, ಶ್ರೇಷ್ಟ ದಿವ್ಯಾಂಗಜನ, ಶ್ರೇಷ್ಠ ದಿವ್ಯಾಂಗ ಬಾಲಕ/ಬಾಲಕಿ, ದಿವ್ಯಾಂಗ ಕ್ಷೇತ್ರಗಳಲ್ಲಿ ಪುನರ್ವಸತಿಗೆ ಶ್ರಮಿಸುತ್ತಿರುವ ವ್ಯಕ್ತಿ, ದಿವ್ಯಾಂಗ ಕ್ಷೇತ್ರಗಳಲ್ಲಿ ಸರ್ವ ಶ್ರೇಷ್ಠ ಸಂಶೋಧನೆ/ಪರಿವರ್ತನೆ/ಉತ್ಪನ್ನ ಅಭಿವೃದ್ಧಿ ಪ್ರಶಸ್ತಿ ನೀಡಲಾಗುತ್ತದೆ.
ಇನ್ನು ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳಾದ ದಿವ್ಯಾಂಗಜನರ ಸಬಲೀಕರಣಕ್ಕಾಗಿ ಶ್ರಮಿಸಿದ ಸರ್ವಶ್ರೇಷ್ಠ ಸಂಸ್ಥೆ (ಖಾಸಗಿ ಸಂಸ್ಥೆ, ಎನ್.ಜಿ.ಓ), ದಿವ್ಯಾಂಗ ಜನರಿಗಾಗಿ ಇರುವ ಸರ್ವಶ್ರೇಷ್ಠ ಸಂಸ್ಥೆ, ದಿವ್ಯಾಂಗ ಜನರಿಗಾಗಿ ಇರುವ ಸರ್ವಶ್ರೇಷ್ಟ ಪ್ಲೇಸ್‍ಮೆಂಟ್ ಏಜೆನ್ಸಿ, ಸುಗಮ್ಯ ಭಾರತ ಅಭಿಯಾನದ ಕಾರ್ಯನ್ವಯನ/ಬಾಧಾಮುಕ್ತ ವಾತಾವರಣ ಸೃಷ್ಟಿಸುವಲ್ಲಿ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲೆ, ಸರ್ವಶ್ರೇಷ್ಠ ಸುಗಮ್ಯ ಯತಾಯತ್ ಕಾರ್ಯಸಾಧನ/ಸೂಚನಾ ಮತ್ತು ಸಂಚಾರ ಪ್ರೊದ್ಯೋಗಿಕಿ, ದಿವ್ಯಾಂಗಜನರ ಹಕ್ಕುಗಳ ಅಧಿನಿಯಮ/ಯು.ಡಿ.ಐ.ಡಿ ಮತ್ತು ದಿವ್ಯಾಂಗರ/ಯು.ಡಿ.ಐ.ಡಿ ಮತ್ತು ದಿವ್ಯಾಂಗರ ಸಬಲೀಕರಣ ಇತರೆ ಯೋಜನೆಗಳ ನಿರ್ವಹಣೆಯಲ್ಲಿನ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲೆ, ತಮ್ಮ ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಿವ್ಯಾಂಗಜನರ ಹಕ್ಕುಗಳ ಅಧಿನಿಯಮವನ್ನು ಸ್ಥಾಪಿಸಿ, ಸೇವೆ ಸಲ್ಲಿಸುತ್ತಿರುವ ಸರ್ವಶ್ರೇಷ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದ ರಾಜ್ಯ ದಿವ್ಯಾಂಗಜನರ ಆಯುಕ್ತರು, ಪುನರ್ವಸತಿ ಸೇವೆಗಳಿಗಾಗಿ ಕಾರ್ಯೋನ್ಮುಖ ಸಿದ್ಧತೆಗಳನ್ನು ಮಾಡಿಕೊಂಡಿರುವ ಸರ್ವಶ್ರೇಷ್ಠ ಸಂಸ್ಥೆ ಪ್ರಶಸ್ತಿ ನೀಡಲಾಗುತ್ತದೆ.
ಈ ಎಲ್ಲಾ ಪ್ರಶಸ್ತಿಗಳಿಗಾಗಿ ಗೃಹ ವ್ಯವಹಾರಗಳ ಸಚಿವಾಲಯದಿಂದ ವಿನ್ಯಾಸಗೊಳಿಸಿರುವ ಪಾಸ್‍ವರ್ಡ್ ಪ್ರೊಟೆಕ್ಟೆಡ್ ಸೆಂಟ್ರಲೈಸ್ಡ್ ಪೋರ್ಟಲ್ www.awards.gov.in ರಲ್ಲಿ ಜುಲೈ-31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಇಲಾಖಾ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ. 08182-295234 /251676 ಗಳನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ವಿಶೇಷಚೇತನ ವಿದ್ಯಾರ್ಥಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಸಹಾಯಕನ ನಿರಾಕರಣೆ ಆರೋಪ: ಪಾಲಕರಿಂದ ಕ್ರಮಕ್ಕೆ ಆಗ್ರಹ - SSLC Exam