ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಪ್ರಮುಖ ಶಂಕಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಬುಧವಾರ 18 ಕಡೆ ದಾಳಿ ನಡೆಸಿದ್ದ ಎನ್ಐಎ ತಂಡ, ತೀವ್ರ ಪರಿಶೀಲನೆ ನಡೆಸಿತ್ತು.
ಕರ್ನಾಟಕ, ತಮಿಳುನಾಡು ಹಾಗೂ ಕೇರಳದ 18 ಕಡೆ ದಾಳಿ ನಡೆಸಿ ಹಲವು ವಸ್ತುಗಳು, ಹಣ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ, ಓರ್ವ ಶಂಕಿತನ ಬಂಧನ ಮಾಡಲಾಗಿದೆ. ಮುಜಾಮಿಲ್ ಶರೀಫ್ ಎಂಬಾತನೇ ಬಂಧಿತನಾಗಿದ್ದು, ಈತ ಬಾಂಬರ್ಗೆ ಸಹಾಯ ಮಾಡಿದ್ದ. ಪ್ರಮುಖ ಆರೋಪಿಯ ಓಡಾಟ ಹಾಗೂ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಎಂದು ಎನ್ಐಎ ತಿಳಿಸಿದೆ. ಜೊತೆಗೆ ಡಿಜಿಟಲ್ ಡಿವೈಸ್ಗಳು, ಒಂದಷ್ಟು ಹಣ ಸೀಜ್ ಮಾಡಲಾಗಿದೆ.
ಬಂಧಿತನು ಸುಧಾರಿತ ಸ್ಫೋಟಕ ಸಾಧನವನ್ನು ಸರಬರಾಜು ಮಾಡುತ್ತಿದ್ದ. ದಾಳಿ ವೇಳೆ ದೊಡ್ಡ ಮಟ್ಟದಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಶಂಕಿತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಎನ್ಐಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು, ಶಿವಮೊಗ್ಗ, ಚೆನ್ನೈನಲ್ಲಿ ಎನ್ಐಎ ಶೋಧ - NIA Raid