ETV Bharat / state

ಹುಬ್ಬಳ್ಳಿಯಲ್ಲಿ ಏ.1 ರಿಂದ ವಿಶೇಷ ಚೇತನರಿಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್ - cricket for physically challenged - CRICKET FOR PHYSICALLY CHALLENGED

ಅಜಿತ್ ವಾಡೇಕರ್ ಅವರ ಸ್ಮರಣಾರ್ಥ ಏಪ್ರಿಲ್ 1ರಿಂದ 3ರ ವರೆಗೆ ಹುಬ್ಬಳ್ಳಿ ನಗರದಲ್ಲಿ ರಾಷ್ಟ್ರಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಿವಾನಂದ ಗುಂಜಾಳ ತಿಳಿಸಿದ್ದಾರೆ.

Etv Bharatಹುಬ್ಬಳ್ಳಿಯಲ್ಲಿ ಏ.1 ರಿಂದ ವಿಶೇಷ ಚೇತನರಿಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್
Etv Bharaಹುಬ್ಬಳ್ಳಿಯಲ್ಲಿ ಏ.1 ರಿಂದ ವಿಶೇಷ ಚೇತನರಿಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್t
author img

By ETV Bharat Karnataka Team

Published : Mar 30, 2024, 11:01 PM IST

ಹುಬ್ಬಳ್ಳಿ: ಮುಂಬೈನ ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆ (ಎಐಸಿಎಪಿಸಿ) ಹಾಗೂ ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಆಶ್ರಯದಲ್ಲಿ ಅಜಿತ್ ವಾಡೇಕರ್ ಅವರ ಸ್ಮರಣಾರ್ಥ ಏಪ್ರಿಲ್ 1ರಿಂದ 3ರ ವರೆಗೆ ನಗರದಲ್ಲಿ ರಾಷ್ಟ್ರಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆಯ ಪ್ರಧಾನ ಕಾರ್ಯದಶಿರ್ ಶಿವಾನಂದ ಗುಂಜಾಳ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಾವಂತ ವಿಶೇಷ ಚೇತನ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 1998 ರಿಂದ ನಗರದಲ್ಲಿ ಇಂತಹ ಪಂದ್ಯಾವಳಿ ಆಯೋಜಿಸುತ್ತ ಬರಲಾಗಿದೆ. ಈ ಬಾರಿ ರಾಜನಗರ ಕೆಎಸಿಎ ಕ್ರೀಡಾಂಗಣ, ಕರ್ನಾಟಕ ಜಿಮ್ಖಾನಾ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಈಗಾಗಲೇ ಎಂಟು ಆವೃತ್ತಿಗಳನ್ನು ಪೂರೈಸಲಾಗಿದ್ದು, ಇದು 9ನೇ ಆವೃತ್ತಿಯಾಗಿದೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳಿಂದ 8 ತಂಡಗಳು ಭಾಗವಹಿಸುತ್ತಿವೆ. ಅಂಗವಿಕಲರ ಕ್ರಿಕೆಟ್ ತಂಡ ಪ್ರತಿನಿಧಿಸಿದ ಅನೀಶ್ ರಾಜನ್, ಜಿತೇಂದ್ರ ವಿಎನ್, ನರೇಂದ್ರ ಮಂಗೋರೆ, ರಮೇಶ ನಾಯ್ಡು, ಅನ್ಯುಲ್, ಕುನಾಲ್ ಫನಾಸೆ, ಸುಗುನೇಶ್ ಮತ್ತು ಅವನೀಶ ತಿವಾರಿ ಸೇರಿ 130 ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಏ. 1ರಂದು ಬೆಳಗ್ಗೆ 8.30ಕ್ಕೆ ರಾಜನಗರ ಮೈದಾನದಲ್ಲಿ ಪಂದ್ಯಾವಳಿ ಉದ್ಘಾಟನೆ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಮಾಜಿ ಕ್ರಿಕೆಟಿಗ ಮತ್ತು ಎಐಸಿಎಪಿಸಿ ಅಧ್ಯಕ್ಷ ಕರ್ಸನ್ ಘಾವರಿ, ಕರ್ನಾಟಕ ಜಿಮ್ಖಾನ್ ಚೇರ್ಮನ್ ನಂದಕುಮಾರ, ಕಾರ್ಯದರ್ಶಿ ವೀರಣ್ಣ ಸವಡಿ, ವಿನೋದ ದೇಶಪಾಂಡೆ, ಪ್ರಸಾದ್ ದೇಸಾಯಿ, ದೀಪಕ್ ಜಾದವ್, ಬ್ರಿಜೇಶ ಸುಣಕರ ಇತರರು ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಗಳಿಗೆ ಮೊದಲ ಬಹುಮಾನ 2.5 ಲಕ್ಷ ನಗದು, ಟ್ರೋಫಿ, ರನ್ನರ್ ಅಪ್​ಗೆ 1.5 ಲಕ್ಷ ನಗದು ಟ್ರೋಫಿ ನೀಡಲಾಗುವುದು. ಕ್ಲಿಕ್ ಕಿಂಗ್ಡಮ್ ಅವರ ನೆರವಿನೊಂದಿಗೆ ಉತ್ತಮ ಬ್ಯಾಟ್ಸ್ಮನ್, ಬೌಲರ್, ಆಲ್ ರೌಂಡರ್, ಸರಣಿ ಶ್ರೇಷ್ಠ ಬಹುಮಾನ ನೀಡಲಾಗುವುದು. ಉತ್ತಮ ಪ್ರದರ್ಶನ ಆಧಾರದ ಮೇಲೆ ಭಾರತ ತಂಡಕ್ಕೆ ಆಯ್ಕೆ ಕೂಡ ನಡೆಯಲಿದೆ ಎಂದರು.

ಭಾಗವಹಿಸುವ ತಂಡಗಳು: ಸೌಥ್ ಸ್ಮಾಷರ್ಸ್, ಸೆಂಟ್ರಲ್ ಕಮಾಂಡೋಸ್, ನಾರ್ದನ್ ಫ್ರಾಂಟಿಯರ್ಸ್, ವೆಸ್ಟರ್ನ್ ರೇಂಜರ್ಸ್, ಈಸ್ಟನ್ ಈಗಲ್ಸ್,
ಅಜಿತ ವಡೇಕರ್ ವಾರಿಯರ್ಸ್ , ಸಿಎಸ್ ಇನ್ಫೋಕಾಮ್ ಚಾಲೆಂಜರ್ಸ್, ಬೋರ್ಡ್ ಪ್ರೆಸಿಡೆಂಟ್ ಬ್ಲಾಸ್ಟರ್ಸ್

ಇದನ್ನೂ ಓದಿ: ಸಾಂಪ್ರದಾಯಿಕ ಕೊಡವ ಕುಟುಂಬಗಳ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ಚಾಲನೆ - hockey festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.