ETV Bharat / state

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಸೆಪ್ಟೆಂಬರ್​ನಲ್ಲಿ 2 ದಿನ ಪೀಣ್ಯದಿಂದ ನಾಗಸಂದ್ರದವರೆಗೆ ಮೆಟ್ರೋ ಸೇವೆ ಬಂದ್ - Namma Metro

ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ದಿನ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಬೆಂಗಳೂರು ಮೆಟ್ರೋ ಸೇವೆ ಬಂದ್​ ಆಗಿರಲಿದೆ.

metro
ನಮ್ಮ ಮೆಟ್ರೋ (ETV Bharat)
author img

By ETV Bharat Karnataka Team

Published : Aug 31, 2024, 7:13 AM IST

ಬೆಂಗಳೂರು: ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರ ನಿಲ್ದಾಣದವರೆಗೆ ಸೆಪ್ಟೆಂಬರ್ 6 ಮತ್ತು 11ರಂದು ಪೂರ್ಣ ದಿನ ನಮ್ಮ ಮೆಟ್ರೋ ಸೇವೆ ಸ್ಥಗಿತವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ವಿಸ್ತರಿಸಲಾದ ಮಾರ್ಗದಲ್ಲಿ ಮೆಟ್ರೋ ಸಿಗ್ನಲಿಂಗ್ ಪರೀಕ್ಷೆ ಹಿನ್ನೆಲೆಯಲ್ಲಿ ಇಡೀ ದಿನ ಟೆಸ್ಟಿಂಗ್ ನಡೆಯಲಿದೆ. ಹಸಿರು ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ. ಮುಖ್ಯವಾಗಿ ನಾಗಸಂದ್ರದಿಂದ ಮಾದಾವರ ನಡುವೆ ಸಿಗ್ನಲಿಂಗ್ ಸಂಬಂಧಿತ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಕೆಲ ದಿನಗಳು ರೈಲು ಸೇವೆಯ ಸಮಯ ಮತ್ತು ಕಾರ್ಯಾಚರಣೆಗಳಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿಸಿದೆ.

ಶುಕ್ರವಾರವೂ ಸ್ಥಗಿತಗೊಂಡ ನಮ್ಮ ಮೆಟ್ರೋ: ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೆ ಮೆಟ್ರೋ ರೈಲು ಸಂಚಾರ ಶುಕ್ರವಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು. ಪ್ರಯಾಣಿಕರು ನಿಲ್ದಾಣಕ್ಕೆ ಬಂದು ವಾಪಸ್​ ತೆರಳಿದರು. ಮೆಟ್ರೋ ಸಂಚಾರ ಇಲ್ಲ, ಇದರಿಂದ ಸರಿಯಾದ ಸಮಯಕ್ಕೆ ಆಫೀಸ್‌ಗೆ ಹೋಗಲು ಸಮಸ್ಯೆ ಆಗುತ್ತಿದೆ. ಆಟೋಗಳು ಬುಕ್ ಆಗುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಲ್‌ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ: ಬೆಸ್ಕಾಂ - Electricity Bill Payment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.