ETV Bharat / state

ಅನಂತ್​ ಕುಮಾರ್​ ಹೆಗಡೆ ಫುಲ್ ಅಲರ್ಟ್: ಖಾನಾಪುರದಲ್ಲಿ ಕಾರ್ಯಕರ್ತರ ಸಭೆ, ಸಂಸದರ ಕಾರಿಗೆ ರೈತರ ಮುತ್ತಿಗೆ ಯತ್ನ

ಲೋಕಸಭಾ ಚುನಾವಣೆ ಹಿನ್ನೆಲೆ ಖಾನಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಂಸದ ಅನಂತ್​ ಕುಮಾರ್​ ಹೆಗಡೆ ಅವರು ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯಾಗಿಸಲು ಕೆಲಸ ಮಾಡುವಂತೆ ಕರೆ ನೀಡಿದರು.

author img

By ETV Bharat Karnataka Team

Published : Mar 6, 2024, 7:56 PM IST

Updated : Mar 6, 2024, 8:21 PM IST

MP Ananth Kumar Hegade
ಸಂಸದ ಅನಂತ್​ ಕುಮಾರ್​ ಹೆಗಡೆ

ಬೆಳಗಾವಿ: "ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತದೆ.‌ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗಲಿದ್ದು, ಆಗ ನೋಡಿ ಮಾರಿಹಬ್ಬ ಆರಂಭ ಆಗುತ್ತದೆ" ಎಂದು ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿದರು.

ಸಂಸದ ಅನಂತ್​ ಕುಮಾರ್​ ಹೆಗಡೆ

ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ದೇಶದ ಪ್ರತಿ ಮನೆಗೆ ಮೋದಿ ಯೋಜನೆಗಳು ತಲುಪಿವೆ. 350 ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡಿದೆ. ಓದಿ ಹೇಳಲು ಆಗದಷ್ಟು ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ನೀಡಿದೆ. ಮಕ್ಕಳಿಗೆ, ವೃದ್ಧರಿಗೆ, ರೈತರು, ಉದ್ಯಮಿಗಳಿಗೆಲ್ಲ ಯೋಜನೆಗಳು ಜಾರಿಯಾಗಿವೆ. ಪ್ರತೀ ಕ್ಷೇತ್ರದಲ್ಲೂ ಮೋದಿ ಸರ್ಕಾರದ ಕೊಡುಗೆ ಇದೆ. ಹೇಳಿಕೊಳ್ಳಲು ನಮ್ಮಲ್ಲಿ ಬಹಳಷ್ಟು ಇವೆ. ಹಾಗಾಗಿ, ಕಾಂಗ್ರೆಸ್‌ನವರು ಬಡಿಬಡಿಸುತ್ತಿದ್ದಾರೆ. ಹಿಂದೆ ಮುಂದೆ ಎಂದೆಂದಿಗೂ ಬಡಬಡಿಸೋದೆ ಕಾಂಗ್ರೆಸ್ ಕೆಲಸ ಆಗಿದೆ" ಎಂದು ಲೇವಡಿ ಮಾಡಿದರು.

ರಾಹುಲ್ ಗಾಂಧಿ ದೇಶದ ಪ್ರತಿ ಮೂಲೆಗೂ ಹೋಗಿ ಬಟಾಟೆಯಿಂದ ಬಂಗಾರ ತೆಗೆಯೋದು ಹೇಗೆ ಅಂತಾ ಹೇಳ್ತಿದ್ದಾರೆ. ಇಂತಹ ಮಾತುಗಳಿಗೆ ಕಿವಿ ಮತ್ತು ಸಮಯ ನೀಡೋದು ಬೇಡ. ಬರುವ ದಿನಗಳಲ್ಲಿ ನಾವು 400ಕ್ಕೂ ಅಧಿಕ ಸೀಟು ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು. 400 ಸೀಟು ಯಾಕೆ ಬರಬೇಕು ಅನೋದನ್ನು ಜನರಿಗೆ ಒತ್ತಿ ಹೇಳಬೇಕು. ರಾಜ್ಯಸಭೆಯಲ್ಲಿ ಟು ಥರ್ಡ್‌ ಮೆಜಾರಿಟಿ ಆಗಬೇಕು. ಇವತ್ತಲ್ಲ ನಾಳೆ ಮತ್ತೆ ಚುನಾವಣೆಯಲ್ಲಿ ಬಿಜೆಪಿಗೆ ಟು ಥರ್ಡ್‌ ಮೆಜಾರಿಟಿ ಬರುತ್ತೆ" ಎಂದರು.

"ರಾಜ್ಯಸಭೆಯಲ್ಲಿ ಮೆಜಾರಿಟಿ ಬಂದಾಗಲೇ ಅಭಿವೃದ್ಧಿ ಕೆಲಸದ ಬಗ್ಗೆ ಗೊತ್ತಾಗುತ್ತದೆ. ಪ್ರತಿಯೊಂದು ಮತದಲ್ಲೂ ಮಹತ್ವದ ಇದೆ. ಈ ಹಿಂದೆ ಸರ್ಕಾರ ಕೇವಲ ಒಂದು ಮತದ ಅಂತರದಿಂದ ಸೋಲಾಗಿ ವಾಜಪೇಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು. ಎಪ್ರಿಲ್ ಕೊನೇ ವಾರದಲ್ಲಿ ಚುನಾವಣೆ ಮುಗಿಯುತ್ತೆ, ಅಲ್ಲಿಯವರೆಗೆ ನಾವು ಕೆಲಸ ಮಾಡಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಬರಲಿದೆ. ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ, ಹೊಸಬರಿಗೆ ಚುನಾವಣೆ ಮಹತ್ವ ಮತ್ತು ಮೋದಿ ಬಗ್ಗೆ ಹೇಳಬೇಕು" ಎಂದು ತಿಳಿಸಿದರು.

ಒಂದು ವರ್ಷದಲ್ಲಿ ಸಿದ್ದು ಸರ್ಕಾರ ಹರಾಜು: "ದೇಶ ಉಳಿಯಬೇಕು, ಅಭಿವೃದ್ಧಿ ಆಗಬೇಕಾದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಇರಬೇಕು. ಸಿದ್ದರಾಮಯ್ಯ‌ನವರ ಗ್ಯಾರಂಟಿ ಯೋಜನೆಗಳಿಂದ ಎಲ್ಲೆಡೆ ಸುತ್ತಬಹುದು ಎಂದು ಕಾಂಗ್ರೆಸ್‌ನವರು ಹೇಳ್ತಿದ್ದಾರೆ. ಒಂದು ವರ್ಷದ ಆಡಳಿತ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗುತ್ತಿದೆ. ವೇತನ ಕೊಡೋದಕ್ಕೂ ಅವರ ಹತ್ತಿರ ದುಡ್ಡು ಇಲ್ಲ. ನಿಮ್ಮ ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರರಿದ್ದರೆ ಕೇಳಿ, ಸಂಬಳದಲ್ಲೂ ವ್ಯತ್ಯಯ ಆಗಿರುತ್ತದೆ. ಆ ಕಡೆ ನರೇಂದ್ರ ಮೋದಿ ಗ್ಯಾರಂಟಿ ಕಳೆದ ಹತ್ತು ವರ್ಷಗಳಿಂದ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಭಾರತ ದೇಶ ಗಟ್ಟಿಯಾಗುತ್ತಿದೆ. ದೇಶ ಸಾಧನೆಯ ಕಡೆ ಹೊರಟಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ" ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

"ಕಾಶ್ಮೀರ, ರಾಮಮಂದಿರ, ಮುಂದಿನ ದಿನಗಳಲ್ಲಿ ಮಥುರಾ, ಕಾಶಿ ವಿಶ್ವನಾಥ ಸೇರಿದಂತೆ ಕೆಲವೊಂದು ಇನ್ನೂ ಕೆಲವು ದೇವಾಲಯಗಳು ಇವತ್ತಲ್ಲ ನಾಳೆ ಹಿಂದೂಗಳ ಸುಪರ್ದಿಗೆ ಬರುತ್ತವೆ. ಈ ಎಲ್ಲವೂ ಸಾಧ್ಯವಾಗಲು ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಬರಬೇಕು. ಇದುವರೆಗೆ ಕಾಂಗ್ರೆಸ್​ನಿಂದ ಯಾರು ನಿಲ್ಲುತ್ತಾರೆ ಗೊತ್ತಿಲ್ಲ. ಖಾನಾಪುರ ಮತಕ್ಷೇತ್ರದಲ್ಲಿ ರಿಜೆಕ್ಟ್ ಮೆಟೀರಿಯಲ್ ಲೋಕಸಭಾ ಅಭ್ಯರ್ಥಿ ಆಗಲಿದ್ದಾರಂತೆ. ಮಾಜಿ ಶಾಸಕಿ ಅಂಜಲಿ ಅವರಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ನಿಮಗೆ ಗೊತ್ತಿದೆ. ಕ್ಷೇತ್ರದ ಜನರು ಬಹಳ ಬುದ್ಧಿವಂತರಿದ್ದಾರೆ. ಹೆಚ್ಚು ಹೇಳುವ ಅವಶ್ಯಕತೆ ಇಲ್ಲ" ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ವಿರುದ್ಧ ಅನಂತ್​ ಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.

ಸಂಸದರ ಕಾರಿಗೆ ಮುತ್ತಿಗೆ ಹಾಕಲು ರೈತರ ಯತ್ನ

ಅನಂತ್​ ಕುಮಾರ ಕಾರಿಗೆ ರೈತರ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರ ಸಭೆ ಮುಗಿಸಿ ಹೋಗುತ್ತಿದ್ದ ಅನಂತ್​ ಕುಮಾರ್ ಹೆಗಡೆ ಅವರ ಕಾರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ ಘಟನೆ ನಡೆಯಿತು. ಕ್ಷೇತ್ರದ ‌ಸಮಸ್ಯೆ ಪರಿಹರಿಸುವಂತೆ ಸಂಸದರಿಗೆ ಮನವಿ ಕೊಡಲು ರೈತರು ಬಂದಿದ್ದರು. ರೈತರನ್ನು ಕಂಡು ಕಾರಿನಿಂದ ಕೆಳಗಿಳಿದು ಮನವಿ ಪಡೆಯದೇ ಹೆಗಡೆ ಹೊರಟು ಹೋದರು. ಸಂಸದರ ವರ್ತನೆಗೆ ಆಕ್ರೋಶಗೊಂಡ ರೈತರು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಅನಂತ್​ ಕುಮಾರ್​ ಹೆಗಡೆ ವಿರುದ್ಧ "ಅನಂತಕುಮಾರ್ ಹೆಗಡೆಯಂಥ ಸಂಸದರು ನಮಗೆ ಬೇಡ" ಎಂದು ಘೋಷಣೆ ಕೂಗಿ ಕಿಡಿಕಾರಿದರು.

ಇದನ್ನೂ ಓದಿ: ಅನಂತ್​ಕುಮಾರ್​ ಹೆಗಡೆ ಹೇಳಿಕೆ ಸಮರ್ಥನೀಯವಲ್ಲ; ಸ್ವ-ಪಕ್ಷದವರಿಂದ ಬೇಸರ

Last Updated : Mar 6, 2024, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.