ETV Bharat / state

ಮಂಗಳೂರು: ದಶಕಗಳ ಬಳಿಕ ಒಂದಾದ ತಾಯಿ–ಮಕ್ಕಳು - MOTHER AND CHILDREN UNITED

ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥೆಯಾಗಿ ಪತ್ತೆಯಾಗಿದ್ದ ಮಹಿಳೆಯೊಬ್ಬರು ದಶಕಗಳ ಬಳಿಕ ತನ್ನ ಮಕ್ಕಳನ್ನು ಸೇರಿದ್ದಾರೆ.

ಬರೋಬ್ಬರಿ 15 ವರ್ಷಗಳ ಬಳಿಕ ಒಂದಾದ ತಾಯಿ – ಮಕ್ಕಳು
15 ವರ್ಷಗಳ ಬಳಿಕ ಒಂದಾದ ತಾಯಿ – ಮಕ್ಕಳು (ETV Bharat)
author img

By ETV Bharat Karnataka Team

Published : Oct 18, 2024, 9:52 PM IST

ಮಂಗಳೂರು: ನಗರದ ಬೀದಿಯಲ್ಲಿ ನಿರ್ಗತಿಕಳಾಗಿ ಪತ್ತೆಯಾಗಿದ್ದ ಮಹಿಳೆ 15 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ್ದಾರೆ.

ಫರ್ಜಾನ ಎಂಬವರು ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ 2009ರಲ್ಲಿ ನಿರ್ಗತಿಕರಾಗಿ, ಮಾನಸಿಕ ಅಸ್ವಸ್ಥೆಯಾಗಿ ಅಲೆದಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್‌ನ ಕೊರಿನಾ ರಸ್ಕಿನ್ ಅವರು, ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಈ ವೇಳೆ ಮಹಿಳೆ ಬಳಿ ತನ್ನೂರಿನ ಮತ್ತು ಕುಟುಂಬದ ಬಗ್ಗೆ ಕೇಳಿದಾಗ ನಿಖರ ಮಾಹಿತಿ ನೀಡುತ್ತಿರಲಿಲ್ಲ.

15 ವರ್ಷಗಳ ಬಳಿಕ ಒಂದಾದ ತಾಯಿ–ಮಕ್ಕಳು (ETV Bharat)

ಕೇವಲ ಮದ್ದೂರು ಮಾಂಸದಂಗಡಿ ಬಳಿ ಮನೆ ಇರುವುದಾಗಿ ಹೇಳುತ್ತಿದ್ದರು. ರಾಜ್ಯದ ಹಲವೆಡೆ ಮದ್ದೂರು ಹೆಸರಿನಲ್ಲಿ ಊರುಗಳಿದ್ದು, ಯಾವ ಮದ್ದೂರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ವೈಟ್ ಡೌಸ್ ಸಂಸ್ಥೆ ಹಲವೆಡೆಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹುಡುಕಿಸಿದ್ದರೂ ಕುಟುಂಬಸ್ಥರು ಪತ್ತೆಯಾಗಿರಲಿಲ್ಲ.

ಇತ್ತೀಚೆಗೆ ಮಡ್ಯದ ಮದ್ದೂರಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಆಕೆಯ ಕುಟುಂಬಸ್ಥರು ಗುರುತಿಸಿ ಕರೆದುಕೊಂಡು ಹೋಗಲು ವೈಟ್ ಡೌಸ್​ಗೆ ಬಂದಿದ್ದರು. ಈ ವೇಳೆ ಅವರಿಗೆ ಫರ್ಜಾನ ಬಗ್ಗೆ ಮದ್ದೂರಿನಲ್ಲಿರುವ ಮಾಂಸದಂಗಡಿಯವರಿಗೆ ಮಾಹಿತಿ ನೀಡುವಂತೆ ಚೀಟಿಯೊಂದನ್ನು ಕೊಟ್ಟು ಕಳುಹಿಸಲಾಗಿತ್ತು. ಈ ಚೀಟಿ ಅದೃಷ್ಟವಶಾತ್ ಫರ್ಜಾನ ಪುತ್ರ ಆಸೀಫ್​ಗೆ ಸಿಕ್ಕಿದೆ. ನಂತರ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಲು ತಂಗಿ, ಬಾವ ಮತ್ತು ಹೆಂಡತಿ - ಮಕ್ಕಳೊಂದಿಗೆ ಇಂದು ಮಂಗಳೂರಿನ ವೈಟ್ ಡೌಸ್​ಗೆ ಆಗಮಿಸಿದ್ದರು.

ತನ್ನನ್ನು ಕರೆದುಕೊಂಡು ಹೋಗಲು ಬಂದ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಂಡ ಫರ್ಜಾನ ಖುಷಿಗೆ ಪಾರವೇ ಇರಲಿಲ್ಲ. ಫರ್ಜಾನ ಮನೆ ಬಿಟ್ಟು ಬಂದಾಗ ಮಗ ಆಸೀಫ್​ಗೆ ಮೂರು ವರ್ಷ ಆಗಿತ್ತು. ಇಂದು ಆಸೀಫ್​ ಮಗನನ್ನು ಕಂಡ ಫರ್ಜಾನ ಇವನೇ ತನ್ನ ಪುತ್ರ ಎಂದು ಭಾವಿಸಿದ್ದರು.

ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಆಸೀಫ್, "ಹಲವು ವರ್ಷಗಳಿಂದ ಹುಡುಕಾಡಿದ್ದರೂ ತಾಯಿ ಪತ್ತೆಯಾಗಿರಲಿಲ್ಲ. ಇಂದು ತುಂಬಾ ಖುಷಿಯಾಗಿದೆ. ನನಗೆ ತಾಯಿಯ ನೆನಪಿದೆ, ಆದರೆ ನನ್ನ ತಂಗಿಗೆ ತಾಯಿಯ ನೆನಪಿಲ್ಲ. ಆಕೆ ಇದೇ ಮೊದಲ ಬಾರಿಗೆ ತಾಯಿಯನ್ನು ನೋಡುತ್ತಿದ್ದಾಳೆ" ಎಂದು ಸಂತಸ ವ್ಯಕ್ತಪಡಿಸಿದರು.

ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನಾ ರಸ್ಕಿನ್ ಮಾತನಾಡಿ, "2009 ಆಗಸ್ಟ್​ನಲ್ಲಿ ಫರ್ಜಾನ ಸಿಕ್ಕಿದ್ದರು. ಆಗ ಅವರು ಸರಿಯಾದ ಮಾಹಿತಿ ನೀಡಿರಲಿಲ್ಲ. ನಮಗೆ ಆಕೆ ಮನೆ ಸೇರುವ ಬಗ್ಗೆ ವಿಶ್ವಾಸವೇ ಇರಲಿಲ್ಲ. ಎರಡು ವಾರದ ಹಿಂದೆ ಮದ್ದೂರಿನ ಮಹಿಳೆಯೊಬ್ಬರನ್ನು ಮನೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಫರ್ಜಾನ ಬಗ್ಗೆ ಮಾಹಿತಿ ನೀಡಿದ್ದೆವು. ಅವರ ಸಹಾಯದಿಂದ ಇದೀಗ ಫರ್ಜಾನ ಕುಟುಂಬಸ್ಥರು ಸಿಕ್ಕಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಂಗಳೂರು - ಬೆಂಗಳೂರು ವಿಶೇಷ ರೈಲು ಓಡಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.