ETV Bharat / state

ನಟ ದರ್ಶನ್​ಗೆ ಸಿಟ್ಟು, ಸ್ವಲ್ಪ ಮುಂಗೋಪ ಇದೆಯೇ ಹೊರತು ಕೊಲೆ ಮಾಡುವ ವ್ಯಕ್ತಿಯಲ್ಲ: ಶಾಸಕ ಉದಯ್ ಗೌಡ - MLA uday gowda

author img

By ETV Bharat Karnataka Team

Published : Jun 22, 2024, 6:46 AM IST

ನಟ ದರ್ಶನ್ ತುಂಬಾ ಸಿಡುಕು, ಸಿಟ್ಟಿನ ಸ್ವಭಾವದವರು. ಆದರೆ ಕೊಲೆ ಮಾಡುವ ವ್ಯಕ್ತಿ ಅಲ್ಲ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ ಇದರಲ್ಲಿ ಸತ್ಯ ಹೊರಗೆ ಬರಲಿ ಎಂದು ಮದ್ದೂರು ಕ್ಷೇತ್ರದ ಶಾಸಕ ಉದಯ್​ ಗೌಡ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶಾಸಕ ಉದಯ್ ಗೌಡ
ಶಾಸಕ ಉದಯ್ ಗೌಡ (ETV Bharat)

ಬೆಂಗಳೂರು: ನಟ ದರ್ಶನ್ ಅವರಿಗೆ ಸಿಟ್ಟು, ಸ್ವಲ್ಪ ಮುಂಗೋಪ ಇದೆಯೇ ಹೊರತು ಕೊಲೆ ಮಾಡುವ ವ್ಯಕ್ತಿಯಲ್ಲ ಎಂದು ಮದ್ದೂರು ಕ್ಷೇತ್ರದ ಶಾಸಕ ಉದಯ್ ಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್ ಅಭಿಮಾನಿಗಳ ಬಳಿ ಹಾಗೂ ಮಾಧ್ಯಮವರ ಬಳಿ ಸ್ವಲ್ಪ ಸಿಟ್ಟಿನಿಂದಲೇ ಮಾತನಾಡುತ್ತಾರೆ. ಅವರಿಗೆ ಮುಂಗೋಪ ಹಾಗೂ ಸಿಟ್ಟು ಜಾಸ್ತಿ. ಆದರೆ, ಕೊಲೆ ಮಾಡುವ ವ್ಯಕ್ತಿ ಅಲ್ಲ. ಸದ್ಯಕ್ಕೆ ಈ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಮಾತನಾಡೋಣ ಎಂದರು.

ದರ್ಶನ್ ನನಗೆ ಉತ್ತಮ ಸ್ನೇಹಿತ. ದರ್ಶನ್ ತುಂಬಾ ಸಿಡುಕು, ಸಿಟ್ಟು ಸ್ವಭಾವದವರು. ಆದರೆ, ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗುವುದಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ಆಗಲಿ, ಸತ್ಯ ಹೊರಗೆ ಬರಲಿ. ಇನ್ನೇನು‌ ಕೆಲವೇ ದಿನಗಳಲ್ಲಿ ಹೊರಬರುತ್ತದೆ. ರಾಜ್ಯದ ಜನರಿಗೂ‌ ಗೊತ್ತಾಗುತ್ತದೆ ಎಂದು ಹೇಳಿದರು.

ನಾವ್ಯಾರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ. ಈ ಪ್ರಕರಣ ನಡೆದು ಹದಿನೈದು ದಿನ ಆಗಿದೆ. ಒಂದು ವೇಳೆ ಆ ರೀತಿ ಮಾಡಿದ್ರೆ ಹೀಗೆ ನಡೆಯುತ್ತಿರಲಿಲ್ಲ ಎಂದು ದರ್ಶನ್‌ ಪರವಾಗಿ ಸಿಎಂ ಜೊತೆಗೆ ಲಾಬಿ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು.

ನನ್ನ ಗನ್‌ಮ್ಯಾನ್‌ಗೆ ಹಲ್ಲೆ ಮಾಡಿಲ್ಲ: ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ವಿಚಾರವಾಗಿ ಮಾಧ್ಯಮದವರು ಕೇಳಿದಾಗ, ನನ್ನ ಗನ್ ಮ್ಯಾನ್‌ ಮೇಲೆ ಹಲ್ಲೆ ನಡೆದಿರುವುದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲವೇ?. ಅಂತಹ ಘಟನೆ ಯಾವುದೂ ಆಗಿಲ್ಲ. ಅದೆಲ್ಲವೂ‌ ಸುಳ್ಳು ಸೃಷ್ಟಿಯಷ್ಟೇ ಎಂದು ಶಾಸಕ ಉದಯ್ ಗೌಡ ಅವರು ಸ್ಟಷ್ಟನೆ ನೀಡಿದರು.

ಇದನ್ನೂ ಓದಿ: ಕೊಲೆ ಪ್ರಕರಣ ನಿಭಾಯಿಸಲು ಸಾಲ ಪಡೆದಿದ್ದ ದರ್ಶನ್: ಪೊಲೀಸ್​ ಮೂಲಗಳ ಮಾಹಿತಿ - Renukaswamy murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.