ETV Bharat / state

ಯಾವುದೇ ಅನುಭವವಿಲ್ಲದೇ ಹುದ್ದೆ ಸೃಷ್ಟಿಸಲು ಆಗುತ್ತಾ?: ಶಾಸಕಿ ರೂಪಕಲಾ ಶಶಿಧರ್ - Rupkala Shashidhar - RUPKALA SHASHIDHAR

ಸಚಿವಾಲಯದಲ್ಲಿ ಕಾರ್ಯದರ್ಶಿ 2 ಹುದ್ದೆ ಸೃಷ್ಟಿಸಲಾಗಿದೆ ಎಂಬ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕಿ ರೂಪಕಲಾ ಶಶಿಧರ್, ಅನುಭವವಿಲ್ಲದೇ ಹುದ್ದೆ ಸೃಷ್ಟಿಸಲು ಆಗುತ್ತಾ ಎಂದು ಪ್ರಶ್ನಿಸಿದರು.

ರೂಪಕಲಾ ಶಶಿಧರ್
ರೂಪಕಲಾ ಶಶಿಧರ್ (ETV Bharat)
author img

By ETV Bharat Karnataka Team

Published : Jul 22, 2024, 2:24 PM IST

ಬೆಂಗಳೂರು: ಯಾವುದೇ ಅನುಭವವಿಲ್ಲದೇ ಹುದ್ದೆಯನ್ನು ಸೃಷ್ಟಿಸಲು ಆಗುತ್ತಾ? ಎಂದು ಶಾಸಕಿ ರೂಪಕಲಾ ಶಶಿಧರ್ ಕೇಳಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ತಮ್ಮ ಪತಿಗೆ ರಾಜಕೀಯ ಪ್ರಭಾವ ಬಳಸಿ ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ 2 ಹುದ್ದೆ ಸೃಷ್ಟಿಸಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ನಾವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಯಾವುದೇ ಅನುಭವವಿಲ್ಲದೇ ಈ‌ ರೀತಿ ಹುದ್ದೆ ಸೃಷ್ಟಿ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.

20, 25 ವರ್ಷಗಳ ಅನುಭವದ ಮೇಲೆ ಹುದ್ದೆ ಸಿಗಬೇಕು. ಸರ್ಕಾರದ ಹಂತದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಅನುಭವದ ಮೇಲೆ ಸಿಗುವ ಹುದ್ದೆ. ರಾಜಕೀಯವಾಗಿ ಸೃಷ್ಟಿ ಮಾಡುವ ಹುದ್ದೆಯಲ್ಲ ಎಂದು ಅಶೋಕ್‌ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ 2 ಹುದ್ದೆಯ ಮೇಲೆ 'ಶಾಸಕಿ ರೂಪಕಲಾ ಪತಿಯ ಕಣ್ಣು'? - Karnataka Assembly Secretariat

ETV Bharat Logo

Copyright © 2025 Ushodaya Enterprises Pvt. Ltd., All Rights Reserved.