ETV Bharat / state

ಚಿಕ್ಕಮಗಳೂರು ಎಫ್​ಡಿಎ ನೌಕರನ ಬಳಿ ಶಾಸಕನ ಲೆಟರ್ ಪ್ಯಾಡ್, ಸೀಲ್​ - ಸಹಿ: ಜಿ.ಪಂ ಸಿಇಒ ಹೇಳಿದ್ದೇನು?

author img

By ETV Bharat Karnataka Team

Published : Feb 11, 2024, 4:24 PM IST

Updated : Feb 11, 2024, 4:41 PM IST

ಸಮಾಜ ಕಲ್ಯಾಣ ಇಲಾಖೆಯ ಎಫ್​ಡಿಎ ನೌಕರನ ಬಳಿ ಶಾಸಕರೊಬ್ಬರ ಲೆಟರ್ ಪ್ಯಾಡ್, ಬುಕ್‍ಲೆಟ್, ಸೀಲ್-ಸಹಿಗಳು ಸಿಕ್ಕಿದ್ದು, ಅವುಗಳನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.

mla-letter-pad-and-seal-signature-found-with-fda-employee-in-chikkamagaluru
ಚಿಕ್ಕಮಗಳೂರು ಎಫ್​ಡಿಎ ನೌಕರನ ಬಳಿ ಶಾಸಕನ ಲೆಟರ್ ಪ್ಯಾಡ್, ಸೀಲ್​ - ಸಹಿ: ಜಿ.ಪಂ ಸಿಇಒ ಹೇಳಿದ್ದೇನು?
ಜಿಲ್ಲಾ ಪಂಚಾಯಿತಿ ಸಿಇಒ ಗೋಪಾಲಕೃಷ್ಣ

ಚಿಕ್ಕಮಗಳೂರು: ಸಮಾಜ ಕಲ್ಯಾಣ ಇಲಾಖೆಯ ಎಫ್​ಡಿಎ ನೌಕರನ ಬಳಿ ಶಾಸಕರೊಬ್ಬರ ಲೆಟರ್ ಪ್ಯಾಡ್, ಬುಕ್‍ಲೆಟ್, ಸೀಲ್-ಸಹಿಗಳು ಸಿಕ್ಕಿರುವ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಎಂಬುವರ ಬಳಿ ಶಾಸಕರೊಬ್ಬರ ಲೆಟರ್ ಪ್ಯಾಡ್, ಬುಕ್‍ಲೆಟ್, ಸೀಲ್-ಸಹಿಗಳು ಪತ್ತೆಯಾಗಿದ್ದು, ಅವುಗಳನ್ನು ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಗೋಪಾಲಕೃಷ್ಣ ಮಾತನಾಡಿ, "ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಎಂಬುವರು ಶಾಸಕರೊಬ್ಬರ ಮತ್ತು ಹಿರಿಯ ಅಧಿಕಾರಿಗಳ ಸೀಲ್ ಇಟ್ಟುಕೊಂಡು ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಶೋಕಾಸ್​​ ನೋಟಿಸ್​ ಕೊಟ್ಟು, ಕಚೇರಿಯ ತಪಾಸಣೆಯನ್ನು ಮಾಡಿದ್ದಾರೆ. ತಪಾಸಣೆಯಲ್ಲಿ ಯಾವುದೇ ರೀತಿಯ ಸೀಲ್​ಗಳು ಪತ್ತೆಯಾಗಿಲ್ಲ. ಆರೋಪ ಸಂಬಂಧ ಫೋಟೋ​ಗಳನ್ನು ಇಲಾಖೆಯ ಮುಖ್ಯಸ್ಥರಿಗೆ ನೀಡಿದ್ದಾರೆ. ​ಈ ಕುರಿತು ಅವರು ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ" ಎಂದರು.

"ಲೆಟರ್ ಪ್ಯಾಡ್ ಹಾಗೂ ಸೀಲ್-ಸಹಿಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಹೆಚ್ಚಿನ ತನಿಖೆ ಮಾಡುವಂತೆ ಸೂಚನೆ ನೀಡಿದ್ದೇನೆ. ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂದರೆ ಕರ್ನಾಟಕ ನಾಗರೀಕ ಸೇವೆಗಳ ನಿಯಮಗಳ ಪ್ರಕಾರ ನಿರ್ದಾಕ್ಷಿಣ್ಯವಾಗಿ ನಮ್ಮ ಹಂತದಲ್ಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೇಲಾಧಿಕಾರಿಗಳ ನಿರ್ದೇಶನ ಬಂದ ನಂತರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: 300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್‌ ಮಾಲೀಕನಿಗೆ ₹3.22 ಲಕ್ಷ ದಂಡ

Last Updated : Feb 11, 2024, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.