ETV Bharat / state

ದೇವೇಗೌಡರ ಕುಟುಂಬ ಒಡೆಯುವುದಕ್ಕೆ ಸರ್ಕಾರ ರೇವಣ್ಣರನ್ನು ಕಿಡ್ನಾಪ್​ ಕೇಸ್​ನಲ್ಲಿ ಸಿಲುಕಿಸಿದೆ: ಶಾಸಕ ಸ್ವರೂಪ್ - Swaroop Prakash

ಪ್ರಜ್ವಲ್​ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಶಾಸಕ ಹೆಚ್. ಪಿ. ಸ್ವರೂಪ್ ಪ್ರಕಾಶ್ ಒತ್ತಾಯಿಸಿದ್ದಾರೆ.

MLA SWAROOP PRAKASH
ಶಾಸಕ ಸ್ವರೂಪ್ (ETV Bharat)
author img

By ETV Bharat Karnataka Team

Published : May 13, 2024, 6:18 PM IST

Updated : May 13, 2024, 7:18 PM IST

ಶಾಸಕ ಸ್ವರೂಪ್ (ETV Bharat)

ಹಾಸನ: ರಾಜ್ಯ ಸರ್ಕಾರ ದೇವೇಗೌಡರ ಕುಟುಂಬ ಒಡೆಯುವುದಕ್ಕೆ ಹೆಚ್.ಡಿ. ರೇವಣ್ಣ ಅವರನ್ನು ಕಿಡ್ನಾಪ್​​ ಕೇಸ್​ನಲ್ಲಿ ಸಿಲುಕಿಸಿರುವುದು ತಪ್ಪು ಎಂದು ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದ್ದೇಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರೇವಣ್ಣ ಅವರದ್ದು ಮಗುವಿನಂತ ಮನಸ್ಸು, ಪ್ರಜ್ವಲ್​ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ, ಸತ್ಯಾಂಶ ಹೊರಗೆ ಬರುತ್ತದೆ. ರೇವಣ್ಣ ಅವರ ಪ್ರಕರಣದಲ್ಲಿ ಸರ್ಕಾರ ಅನುಸರಿಸುತ್ತಿರುವ ನಡೆ ತಪ್ಪು ಮತ್ತು ವಿಷಾದನೀಯ ಎಂದರು.

ಪ್ರಜ್ವಲ್​ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇನೆ. ಈ ಪ್ರಕರಣದಲ್ಲಿ ಕಾರ್ತಿಕ್​ ಬಂಧನವಾಗಿಲ್ಲ, ವಿಡಿಯೋ ಯಾರ‍್ಯಾರಿಗೆ ಕೊಟ್ಟಿದ್ದಾರೆ ಎಂದು ಕಾರ್ತಿಕ್​ಗೆ ಮಾತ್ರ ಗೊತ್ತಿದೆ. ಹೀಗಾಗಿ ಇದರಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಸತ್ಯಾಂಶ ಹೊರ ಬರುತ್ತದೆ. ನಾನು ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿದ್ದೆ, ಆದರೆ ಪೊಲೀಸ್​ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಹೀಗಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಭೇಟಿ ಮಾಡಿಕೊಂಡು ಬಂದೆ ಎಂದು ತಿಳಿಸಿದರು.

ಇದನ್ನೂ ಓದಿ: ರೇವಣ್ಜ ಜಾಮೀನು ಅರ್ಜಿ ವಿಚಾರಣೆ: ಕೆಲ ಹೊತ್ತಲ್ಲೇ ಆದೇಶ ಪ್ರಕಟಿಸಲಿರುವ ನ್ಯಾಯಾಲಯ - HD Revanna

Last Updated : May 13, 2024, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.