ETV Bharat / state

'ಅವರ ಸೀಡಿ ಇದೆ, ಇವರ ಸೀಡಿ ಇದೆ ಎಂದು ಬ್ಲ್ಯಾಕ್​ಮೇಲ್​ ಮಾಡಿದರೆ ರಾಜಕಾರಣಕ್ಕೆ ಅರ್ಥವಿದೆಯೇ?' - H K Patil - H K PATIL

ಸೀಡಿ ಇದೆ ಎಂದು ಬ್ಲ್ಯಾಕ್​ಮೇಲ್​ ಮಾಡುವುದು ನೀಚ ರಾಜಕಾರಣ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

ಹೆಚ್.ಕೆ. ಪಾಟೀಲ್
ಹೆಚ್.ಕೆ. ಪಾಟೀಲ್ (ETV Bharat)
author img

By ETV Bharat Karnataka Team

Published : May 8, 2024, 11:50 AM IST

ಸಚಿವ ಹೆಚ್.ಕೆ.ಪಾಟೀಲ್ (ETV Bharat)

ಹಾವೇರಿ: "ನಮ್ಮ ನಾಯಕರ ಸೀಡಿ ಇದೆ ಎಂದು ಅವರು, ಅವರ ನಾಯಕರ ಸೀಡಿ ಇದೆ ಎಂದು ನಮ್ಮವರು ಬ್ಲ್ಯಾಕ್​ಮೇಲ್​ ಮಾಡಿದರೆ ರಾಜಕಾರಣಕ್ಕೆ ಅರ್ಥವಿದೆಯೇ?. ಈ ರೀತಿಯ ಹೇಳಿಕೆಗಳಿಗೆ ಮಾಧ್ಯಮದವರು ಅತಿದೊಡ್ಡ ಪ್ರಚಾರ ನೀಡುತ್ತಿರುವುದು ನಮ್ಮ ದೇಶದ ಪ್ರಜಾಪ್ರಭುತ್ವದ ದುರ್ದೈವ" ಎಂದು ಸಚಿವ ಹೆಚ್.ಕೆ.ಪಾಟೀಲ್​​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಮಂಗಳವಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸಂಸದ ಪ್ರಜ್ವಲ್​ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಮಾತನಾಡಿದರು.

"ಎಸ್‌ಐಟಿ ತನಿಖೆಯ ಬಗ್ಗೆ ಅಪಸ್ವರ ಎತ್ತುತ್ತಿರುವ ಜೆಡಿಎಸ್‌ ಪಕ್ಷ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೇಕೆ?. ಈ ಪ್ರಕರಣದ ನಂತರ ಬಿಜೆಪಿ ನಾಯಕರು ಜೆಡಿಎಸ್‌ನಿಂದ ಏಕೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ?. ಎಸ್ಐಟಿ ಮೇಲೆ ನಂಬಿಕೆ ಇಲ್ಲದವರು ಪ್ರಜ್ವಲ್ ರೇವಣ್ಣರನ್ನು ಯಾಕೆ ಪಕ್ಷದಿಂದ ಉಚ್ಛಾಟಿಸಿದ್ದೀರಿ?. ಬಿಜೆಪಿಯವರಿಗೆ ಈ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು" ಎಂದು ಟೀಕಿಸಿದರು.

"ಕಾಂಗ್ರೆಸ್​ ನಾಯಕರು ಪ್ರಕರಣದ ಕುರಿತು ಹೇಳಿಕೆ ನೀಡಿರಬಹುದು. ಇಲ್ಲಿ ಅಪರಾಧ ಮಾಡಿದವರ ಮೇಲೆ ಲಕ್ಷ್ಯವಿಡದೇ, ಅಪರಾಧ ಮಾಡಿದ್ದಾರೆ ಎಂದು ತೋರಿಸಿದವರ ಮೇಲೆಯೇ ನಿಮ್ಮ ಲಕ್ಷ್ಯವಿದೆ. ಆರೋಪಿಯನ್ನು ಕರೆದುಕೊಂಡು ಬರುವುದರ ಕಡೆ ಆಲೋಚನೆ ಇಲ್ಲ. ಬರೀ ರಸ್ತೆಯಲ್ಲಿ ಬಿದ್ದಿರುವ ಪೆನ್‌ಡ್ರೈವ್ ಬಗ್ಗೆ ಗಮನಹರಿಸಲಾಗುತ್ತಿದೆ. ಹೀಗಾದರೆ ಸಮಾಜಕ್ಕೇನು ಸಂದೇಶ ನೀಡಲು ಬಯಸುತ್ತೀದ್ದೀರಿ?" ಎಂದು ಆಕ್ರೋಶ ಹೊರಹಾಕಿದರು.

ಬಿಡಿಎ ಆಸ್ತಿ ಮಾರಿ ಕಾಂಗ್ರೆಸ್​​ ನಾಯಕರು ಕಿಕ್‌ಬ್ಯಾಕ್ ಪಡೆಯುತ್ತಿದ್ದಾರೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ, ಇದಕ್ಕೆ ವಿಧಾನಸಭೆ ಅಧಿವೇಶನದ ವೇಳೆ ಉತ್ತರ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ: ದೇವರಾಣೆಗೂ ನಾನು ಯಾವ ಸಂತ್ರಸ್ತೆಯನ್ನೂ ಭೇಟಿ ಮಾಡಿಲ್ಲ: ಶ್ರೇಯಸ್​ ಪಟೇಲ್ - Shreyas Patel

ETV Bharat Logo

Copyright © 2024 Ushodaya Enterprises Pvt. Ltd., All Rights Reserved.