ETV Bharat / state

ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ವ್ಯಕ್ತವಾದ ಅಭಿಪ್ರಾಯಕ್ಕೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು : ಶಿವಾನಂದ ಪಾಟೀಲ್​ - Minister Shivanand Patil

ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ವ್ಯಕ್ತವಾದ ಅಭಿಪ್ರಾಯದ ಕುರಿತು ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಸಚಿವ ಶಿವಾನಂದ ಪಾಟೀಲ್ ಅವರು ಕೇಳಿದ್ದಾರೆ. ಒಬ್ಬ ಸ್ವಾಮೀಜಿ ಮಾತನಾಡಿದ್ದು ರಾಜಕಾರಣ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

minister-shivanand-patil
ಸಚಿವ ಶಿವಾನಂದ ಪಾಟೀಲ್ (ETV Bharat)
author img

By ETV Bharat Karnataka Team

Published : Jun 30, 2024, 6:16 PM IST

ಸಚಿವ ಶಿವಾನಂದ ಪಾಟೀಲ್ (ETV Bharat)

ಹಾವೇರಿ : ರಾಜ್ಯದಲ್ಲಿ ಸಿಎಂ, ಡಿಸಿಎಂ ಸ್ಥಾನಗಳ ಬಗ್ಗೆ ಕೆಲವರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್​ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವೆಲ್ಲ ಆಗುವುದಾ, ಹೋಗುವುದಾ?. ಅವರ ಹೇಳಿಕೆಗೆ ನಾವ್ಯಾಕೆ ಪ್ರತಿಕ್ರಿಯೆ ನೀಡಬೇಕು. ಒಬ್ಬ ಸ್ವಾಮೀಜಿ ಮಾತನಾಡಿದ್ದು ರಾಜಕಾರಣ ಆಗುತ್ತಾ? ಎಂದು ಪ್ರಶ್ನಿಸಿದರು.

ಸ್ವಾಮೀಜಿಗಳ ಮಾತನ್ನ ಅಲ್ಲಿಯೇ ಕೇಳಬೇಕು, ಅಲ್ಲಿಯೇ ಬಿಡಬೇಕು. ಸ್ವಾಮೀಜಿಗಳನ್ನ ಬಳಸಿಕೊಂಡು ಸಿಎಂ ಕುರ್ಚಿ ಪಡೆಯಲು ಯಾರು ಪ್ರಯತ್ನಿಸುತ್ತಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ. ಆದರೆ ಸ್ವಾಮೀಜಿಗಳು ರಾಜಕಾರಣ ಮಾತನಾಡಬಾರದು ಎಂದು ತಿಳಿಸಿದರು.

ರಾಜಕೀಯವನ್ನ ರಾಜಕಾರಣಿಗಳು ಮಾತನಾಡಿದರೆ ಅದಕ್ಕೆ ಒಂದು ಬೆಲೆ ಇದೆ. ಆದರೆ ಅದೇ ಮಾತನ್ನ ಸ್ವಾಮೀಜಿಗಳು ಮಾತನಾಡಬಾರದು. ಬಿಜೆಪಿಯವರು ಹೇಳಿದಂತೆ ಲೋಕಸಭೆ ಫಲಿತಾಂಶದ ನಂತರ ರಾಜ್ಯದಲ್ಲಿ ಸರ್ಕಾರ ಪತನವಾಗುತ್ತದೆ ಎಂಬುದು ತಪ್ಪು. ಈಗ ಸಿಎಂ, ಡಿಸಿಎಂ ಸ್ಥಾನಕ್ಕೆ ಚರ್ಚೆ ನಡೆದಿರುವುದು ಅದರ ಮುನ್ನುಡಿ ಎನ್ನುವುದು ತಪ್ಪು ಎಂದು ಸಚಿವ ಶಿವಾನಂದ ಪಾಟೀಲ್​.

ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಯಾವುದೇ ಜಾತಿ ನೋಡಿ ಟಿಕೆಟ್ ನೀಡುವುದಿಲ್ಲ. ವರಿಷ್ಠರು ಮತ್ತು ಕಾರ್ಯಕರ್ತರು ಯಾರನ್ನ ನಿರ್ಧರಿಸುತ್ತಾರೋ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.

ಹಾವೇರಿ ರಾಜಕಾರಣದಲ್ಲಿ ನಾನು ಬಂದಮೇಲೆ ಯಾವುದೇ ಹೊಂದಾಣಿಕೆ ರಾಜಕಾರಣ ನಡೆದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದೇವೆ. ಜಿಲ್ಲೆಯಲ್ಲಿ ಈ ಹಿಂದೆ ಹೇಗಿತ್ತು ಅನ್ನೋದು ಗೊತ್ತಿಲ್ಲ. ನಾ ಬಂದ ಮೇಲೆ ಒಳಒಪ್ಪಂದ ಆಗಿಲ್ಲ. ಮುಂದೆ ಸಹ ಒಳಒಪ್ಪಂದ ಆಗುವುದಿಲ್ಲ ಎಂದು ಹೇಳಿದರು.

ಡೆಂಗ್ಯೂ ಜ್ವರ ಹೆಚ್ಚಳದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಪ್ರತಿನಿತ್ಯ ಪರೀಕ್ಷೆ ನಡೆಸಲಾಗುತ್ತಿದೆ, ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : ಚುನಾವಣೆಯ ನಂತರ ಸರ್ಕಾರ ಪತನವಾಗುತ್ತೆ ಎಂದಿದ್ದೆ, ಈಗ ಅದೇ ಹಾದಿಯಲ್ಲಿ ಸಾಗುತ್ತಿದೆ : ಬೊಮ್ಮಾಯಿ - MP Basavaraj Bommai

ETV Bharat Logo

Copyright © 2024 Ushodaya Enterprises Pvt. Ltd., All Rights Reserved.