ETV Bharat / state

ಸರ್ಕಾರಿ ಜಾಗದಲ್ಲಿ ಬೇರೆ ಧ್ವಜ ಹಾರಿಸಲು ಅವಕಾಶವಿಲ್ಲ: ಸಚಿವ ಚಲುವರಾಯಸ್ವಾಮಿ

ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸುವುದು ತಪ್ಪು. ಹನುಮಾನ್​ ಧ್ವಜ ಕಟ್ಟಲು ಅವಕಾಶ ಮಾಡಿಕೊಡೋಣ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

Minister N. Chaluvarayaswamy
ಸಚಿವ ಎನ್. ಚಲುವರಾಯಸ್ವಾಮಿ
author img

By ETV Bharat Karnataka Team

Published : Jan 29, 2024, 9:13 AM IST

Updated : Jan 29, 2024, 12:38 PM IST

ಸಚಿವ ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ತೆರವು ವಿಚಾರಕ್ಕೆ ಮಂಡ್ಯದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, "ಈ ವಿಚಾರದಲ್ಲಿ ರಾಜಕೀಯ ನಡೀತಿದೆ. ಯಾರು ರಾಜಕಾರಣ ಬೆರೆಸುತ್ತಿದ್ದಾರೋ ಗೊತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ​ ಹಾರಿಸಬಹುದು, ಬೇರೆ ಧ್ವಜ ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸುವುದು ತಪ್ಪು. ಇಂದು ಇಲ್ಲಿ ಅವಕಾಶ ಮಾಡಿಕೊಟ್ಟರೆ ನಾಳೆ ಬೆಳಿಗ್ಗೆ ಡಿಸಿ ಕಚೇರಿ ಮುಂದೆಯೂ ಹಾರಿಸುತ್ತೇವೆ ಅಂತಾರೆ. ಅದಕ್ಕೆಲ್ಲ ಅವಕಾಶ ಕೊಡಲು ಆಗುತ್ತಾ?" ಎಂದರು.

"ಸ್ಥಳೀಯ ಯುವಕರು ಒಳ್ಳೆಯವರೇ. ಆದರೆ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೇಕಿದ್ದರೆ ಎಲ್ಲರ ಜೊತೆ ಕೂತು ಮಾತನಾಡುತ್ತೇನೆ. ಮತ್ತೊಂದು ಕಡೆ ಹನುಮಾನ್​ ಧ್ವಜ ಕಟ್ಟಲು ಅವಕಾಶ ಮಾಡಿಕೊಡೋಣ. ಖಾಸಗಿ ಜಾಗ ಅಥವಾ ದೇವಾಲಯದ ಮುಂದೆ ಹಾಕಲು ಅವಕಾಶ ಕೊಡೋಣ.
ನಾನೂ ರಾಮನ ಭಕ್ತ. ನಮ್ಮ ಮನೆ ದೇವರು ವಿಷ್ಣು. ನಾವು ಯಾವುದೇ ಧ್ವಜದ ವಿರೋಧಿಗಳಲ್ಲ. ಪಂಚಾಯಿತಿಯಲ್ಲಿ ಇದಕ್ಕೆ ಅನುಮೋದನೆ ನೀಡಿದರೆ ತಪ್ಪು. ಅನುಮೋದನೆ ನೀಡುವವರ ವಿರುದ್ಧವೂ ಕ್ರಮ ಆಗುತ್ತದೆ. ಇದರಲ್ಲಿ ನಾವಾಗಲಿ, ಸ್ಥಳೀಯ ಶಾಸಕರಾಗಲಿ ರಾಜಕೀಯ ಮಾಡುತ್ತಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ನಿರ್ದಿಷ್ಟ ಧರ್ಮ, ಸಮುದಾಯದ ವಿರುದ್ಧವಿಲ್ಲ, ನಮ್ಮದು ಸಂವಿಧಾನ ಪರವಾದ ನಿಲುವು: ಮಂಡ್ಯ ಘಟನೆ ಬಗ್ಗೆ ಸಿಎಂ ಪೋಸ್ಟ್

Last Updated : Jan 29, 2024, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.