ETV Bharat / state

ಬಾಣಂತಿಯರು, ಹಸುಗೂಸುಗಳ ಸಾವಿನ ಪ್ರಕರಣ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - MINISTER LAKSHMI HEBBALKAR

ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಬಿಮ್ಸ್​ನಲ್ಲಿ ಬಾಣಂತಿಯರ, ಹಸುಗೂಸುಗಳ ಸಾವು ಪ್ರಕರಣ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (ETV Bharat)
author img

By ETV Bharat Karnataka Team

Published : Dec 9, 2024, 4:28 PM IST

ಬೆಳಗಾವಿ: ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ (ಬಿಮ್ಸ್)‌ ಸಂಭವಿಸಿರುವ ಬಾಣಂತಿಯರು ಹಸುಗೂಸುಗಳ ಸಾವಿನ ಪ್ರಕರಣವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಬಿಮ್ಸ್‌ನಲ್ಲಿ ಬಾಣಂತಿಯರು, ಹಸುಗೂಸುಗಳ ಸಾವಿನ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಯಾಕೆ ಸಮಸ್ಯೆಯಾಗಿದೆ, ಎಲ್ಲವನ್ನೂ ಕೂಡ ಚರ್ಚೆ ಮಾಡಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಯಾವ ಕಾರಣಕ್ಕೆ ಸಾವಿನ ಪ್ರಕರಣಗಳು ಸಂಭವಿಸಿವೆ. ಸಾವನ್ನು ತಡೆಯಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಏನೆಲ್ಲಾ ಮಾಡಬೇಕೋ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ 54 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಅಂಕಿಅಂಶ ಹೆಚ್ಚಾಗಿ ಕಾಣುತ್ತಿದೆ. ಕಾರವಾರ ಸೇರಿದಂತೆ ಅನೇಕ ಕಡೆಗಳಿಂದ ಬೆಳಗಾವಿ ಆಸ್ಪತ್ರೆಗೆ ಬರುತ್ತಾರೆ ಎಂದು ಅವರು ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ಬಾಣಂತಿಯರು, ಹಸುಗೂಸುಗಳ ಸಾವಿಗೆ ಬಹಳಷ್ಟು ಕಾರಣಗಳಿವೆ. ಬಳ್ಳಾರಿ ಪ್ರಕರಣಗಳಿಗೂ, ಬ್ರಿಮ್ಸ್‌ಗೂ ಸಂಬಂಧ ಇಲ್ಲ. ಕಬ್ಬಿನಾಂಶ ಕೊರತೆ, ಪ್ರೀ ಮೆಚ್ಯುರ್‌ ಬೇಬಿ ಹೀಗೆ ಅನೇಕ ಕಾರಣಗಳಿವೆ. ಒಂದು ಲಕ್ಷ ಮಕ್ಕಳು ಹುಟ್ಟಿದರೆ 28 ಮಕ್ಕಳು ಅದರಲ್ಲಿ ತೀರಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ 6ನೇ ಅತ್ಯುತ್ತಮ ಆಸ್ಪತ್ರೆ ಎಂಬ ಖ್ಯಾತಿಗೆ ಬಿಮ್ಸ್‌ ಪಾತ್ರವಾಗಿದೆ. ಬಾಣಂತಿಯರು, ಹಸುಗೂಸುಗಳ ಸಾವಿಗೆ ಇಂಥದ್ದೇ ಕಾರಣ ಅಂತ ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ವಿಚಾರ: ನನ್ನ ಕ್ಷೇತ್ರದಲ್ಲಿ 2A ಮತದಾರರು ಎರಡು ಸಾವಿರವೂ ಇಲ್ಲ. ಮತಕ್ಕಾಗಿ, ರಾಜಕಾರಣಕ್ಕಾಗಿ ಮೀಸಲಾತಿ ವಿಚಾರವನ್ನು ತೆಗೆದುಕೊಂಡು ಬಂದಿಲ್ಲ ಎಂದರು.

ಪಂಚಮಸಾಲಿ ಹೋರಾಟ ತಡೆದ ವಿಚಾರವಾಗಿ ಮಾತನಾಡಿದ ಅವರು, ಪಂಚಮಸಾಲಿ 2ಎ ಹೋರಾಟ ನಮ್ಮ ಹಕ್ಕು. ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸಲು ನಾವು ಹೋರಾಟ ಮಾಡ್ತಿದ್ದೇವೆ. ಶಿಕ್ಷಣದಲ್ಲಿ ಮೀಸಲಾತಿ ಕೊಡಿ ಅಂತ ನಾವು ವಿಪಕ್ಷದಲ್ಲಿದ್ದಾಗ ಕೇಳಿದ್ದೆವು. ಈಗಲೂ ಕೂಡ ಸಚಿವೆಯಾಗಿ ನಾನು ಸಮಾಜದ ಪರವಾಗಿ ಕೆಲಸ ಮಾಡುತ್ತೇನೆ. ಹಿಟ್ಲರ್ ಎಂಬ ಪದ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸೋದಿಲ್ಲ‌. ಈಗ ಕಬ್ಬಿನ ಸೀಸನ್ ಇದೆ, ಮುಂಜಾಗ್ರತಾ ಕ್ರಮವಾಗಿ ಟ್ರ್ಯಾಕ್ಟರ್​​ಗಳನ್ನು ಜಿಲ್ಲಾಡಳಿತ ತಡೆದಿರಬಹುದು. ಇದಕ್ಕೆ ನನಗೂ ಕೂಡ ಅಸಮಾಧಾನವಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಯಾರ ಧ್ವನಿಯನ್ನೂ ದಮನಿಸಲು ಯಾರಿಗೂ ಸಾಧ್ಯವಿಲ್ಲ. ಇವತ್ತು ಸಾಯಂಕಾಲ ನಮ್ಮ ಕೂಡಲಸಂಗಮ ಶ್ರೀಗಳ ಜೊತೆ ಮಾತನಾಡುತ್ತೇನೆ. ಆ ಸಭೆಯಲ್ಲಿ ಕಮಿಷನರ್, ಡಿಸಿ, ಎಸ್ಪಿ ಎಲ್ಲರನ್ನೂ ಕೂಡ ಕರೆದು ಚರ್ಚೆ ಮಾಡುತ್ತೇನೆ. ನಮ್ಮ ಸಮುದಾಯದ ಮೇಲೆ ಅಭಿಮಾನ ಇರುವುದಕ್ಕೆ ಸಚಿವೆಯಾಗಿ ಈಗ ಮಾತನಾಡುತ್ತಿರುವೆ. ಅದು ಎಂದಿಗೂ ಕಡಿಮೆಯಾಗುವುದಿಲ್ಲ. ಯಾರಿಗೆ ಅನ್ಯಾಯ ಆಗಿದೆಯೋ ಅವರ ಪರವಾಗಿ ನಾನು ನಿಂತು ಮಾತನಾಡುತ್ತಿದ್ದೇನೆ‌.‌ ಅಧಿಕಾರಕ್ಕೋಸ್ಕರ ಸ್ವಾರ್ಥಕೋಸ್ಕರ ನಾನು ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಸುವರ್ಣಸೌಧದ ಮುಂದೆ ರೈತರ ಪ್ರತಿಭಟನೆ: KSRTC ಬಸ್ ಚಾಲಕರ ಕೈ, ಸ್ಟೇರಿಂಗ್‌ ಕಟ್ಟಿಹಾಕಿ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.